Narendra Modi: ಬದಲಾಯ್ತು ನರೇಂದ್ರ ಮೋದಿ ಪ್ರೊಫೈಲ್ ಚಿತ್ರ; ಎದ್ದು ಕಾಣುತ್ತಿದೆ ತ್ರಿವರ್ಣ ಧ್ವಜ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಮತ್ತು ಫೇಸ್ಬುಕ್ ಅಕೌಂಟ್ಗಳಲ್ಲಿ ಪ್ರೊಫೈಲ್ ಇಮೇಜ್ ಬದಲಿಸಿಕೊಂಡು ಉತ್ತಮ ಮಾದರಿಯನ್ನೂ ಹಾಕಿಕೊಂಡಿದ್ದಾರೆ.
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ದೇಶವ್ಯಾಪಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ (Azadi Ka Amrit Mahotsav) ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರೆ ನೀಡಿದ್ದಾರೆ. ಇತ್ತೀಚೆಗೆ ನಡೆದ ‘ಮನ್ ಕಿ ಬಾತ್’ ಮಾಸಿಕ ರೇಡಿಯೊ ಕಾರ್ಯಕ್ರಮದಲ್ಲಿಯೂ ಪ್ರಧಾನಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿದ್ದರು. ‘ಸಾಮಾಜಿಕ ಮಾಧ್ಯಮಗಳಲ್ಲಿಯೂ ದೇಶದ ಹಿರಿಮೆ ಹೆಚ್ಚಿಸುವಂಥ ಪೋಸ್ಟ್ ಹಂಚಿಕೊಳ್ಳಿ’ ಎಂದು ಸಲಹೆ ಮಾಡಿದ್ದರು.
ಇದೀಗ ಸ್ವತಃ ನರೇಂದ್ರ ಮೋದಿ ಅವರೇ ತಮ್ಮ ಟ್ವಿಟರ್ ಮತ್ತು ಫೇಸ್ಬುಕ್ ಅಕೌಂಟ್ಗಳಲ್ಲಿ ಪ್ರೊಫೈಲ್ ಇಮೇಜ್ ಬದಲಿಸಿಕೊಂಡು ಉತ್ತಮ ಮಾದರಿಯನ್ನೂ ಹಾಕಿಕೊಂಡಿದ್ದಾರೆ. ಮೋದಿ ಅವರ ಅಕೌಂಟ್ಗಳಲ್ಲಿ ಇದೀಗ ಪ್ರೊಫೈಲ್ ಇಮೇಜ್ ಆಗಿ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ.
‘ಇಂದು ಆಗಸ್ಟ್ 2. ನಮ್ಮ ದೇಶದ ಇತಿಹಾಸದಲ್ಲಿ ವಿಶೇಷ ದಿನ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ನಮ್ಮ ದೇಶದ ಪ್ರತಿ ಮನೆಯಲ್ಲಿಯೂ ತ್ರಿವರ್ಣ ಧ್ವಜ ಹಾರಿಸುವ ‘ಹರ್ ಘರ್ ತಿರಂಗಾ’ ಅಭಿಯಾನ ಆರಂಭವಾಗಿದೆ. ನಾನು ನನ್ನ ಸಾಮಾಜಿಕ ಮಾಧ್ಯಮದ ಡಿಸ್ಪ್ಲೇ ಇಮೇಜ್ ಬದಲಿಸಿದ್ದೇನೆ. ನೀವೂ ಹೀಗೆ ಮಾಡಬೇಕು ಎಂದು ಕೋರುತ್ತೇನೆ’ ಎಂದು ನರೇಂದ್ರ ಮೋದಿ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ವಿನಂತಿಸಿದ್ದಾರೆ.
Published On - 9:38 am, Tue, 2 August 22