ನವದೆಹಲಿ: ಆಸ್ಪತ್ರೆಯ ಶವಾಗಾರದಲ್ಲಿ ಗಂಡು- ಹೆಣ್ಣು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಅತಿರೇಕದ ವಿಡಿಯೋ ವೈರಲ್ ಆದ ಬಳಿಕ ಆ ಆಸ್ಪತ್ರೆಯ ಸಿಬ್ಬಂದಿಯಾದ ಮಹಿಳೆ ಮತ್ತು ಇಬ್ಬರು ಪುರುಷರು ಸೇರಿದಂತೆ ಮೂವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ಒಂದು ತಿಂಗಳಿಗಿಂತ ಹಳೆಯದಾದ ಈ ವೀಡಿಯೊ ಕ್ಲಿಪ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶವಾಗಾರದ ಫ್ರೀಜರ್‌ನೊಳಗೆ ಮೈ ಕೊರೆಯುವ ಚಳಿಯಲ್ಲಿ ಜೋಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿತ್ತು. ಇದನ್ನು ಇನ್ನೊಬ್ಬ ವ್ಯಕ್ತಿ ವಿಡಿಯೋ ಕೂಡ ಮಾಡಿದ್ದಾನೆ. ಒಬ್ಬ ಮಹಿಳೆಯೊಂದಿಗೆ ಆ ಪುರುಷ ಅತ್ಯಂತ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇನ್ನೊಬ್ಬ ವ್ಯಕ್ತಿ ಇದನ್ನು ಮೊಬೈಲ್ ಫೋನ್‌ನ ಕ್ಯಾಮೆರಾದಲ್ಲಿ ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ.
ಇದನ್ನೂ ಓದಿ: Viral Video: ಹಾಸ್ಟೆಲ್ನಲ್ಲಿ ನೀಡಿದ ಚಟ್ನಿಯಲ್ಲಿ ಈಜಾಡಿದ ಇಲಿ; ಶಾಕಿಂಗ್ ವಿಡಿಯೋ ವೈರಲ್
ಈ ಆತಂಕಕಾರಿ ಘಟನೆ ನಡೆದ ನಿಖರವಾದ ಸ್ಥಳ ಮತ್ತು ಆಸ್ಪತ್ರೆ ಇನ್ನೂ ತಿಳಿದಿಲ್ಲವಾದರೂ, ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಆಸ್ಪತ್ರೆಯೊಳಗಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ನೆಟ್ಟಿಗರು ಎತ್ತುತ್ತಿದ್ದಾರೆ.
⚡️संवेदनशील दृश्य ⚡️
नोएडा के पोस्टमार्टम हाउस में चल रहा है अय्याशी। डीप फ्रीजर रूम, जहां शव रखे जाते हैं… वहां एक पुरुष और एक महिला आपत्तिजनक हरकतें कर रहे थे। साथ में काम करने वाले दोस्त ने वीडियो बनाकर वायरल कर दिया।#Noida @noidapolice pic.twitter.com/CvGgX6BqNX
— Pramod Atri (@Pramod_Atri) August 22, 2024
ಅನೇಕ ಇಂಟರ್ನೆಟ್ ಬಳಕೆದಾರರು ತಮ್ಮ ನಾಚಿಕೆಯಿಲ್ಲದ ವರ್ತನೆಗಾಗಿ ಆ ಜೋಡಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ವಿನಂತಿಸಿದರು. ಆದರೆ ಇತರರು ಮೃತದೇಹಗಳಿಂದ ಸುತ್ತುವರೆದಿರುವ ಸ್ಥಳದಲ್ಲಿ ಯಾರಾದರೂ ಈ ರೀತಿಯ ಅಸಭ್ಯ ಕೃತ್ಯಗಳನ್ನು ಮಾಡಲು ಸಾಧ್ಯವೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ