Andhra Capital- ವಿಶಾಖಪಟ್ಟಣಂ ಆಂಧ್ರ ರಾಜಧಾನಿಯಾಗಲಿದೆ: ಸಿಎಂ ಜಗನ್ಮೋಹನ್ ರೆಡ್ಡಿ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jan 31, 2023 | 2:06 PM

Vishakhapatnam To Be Andhra Capital- ವಿಶಾಖಪಟ್ಟಣಂ ನಗರವು ಆಂಧ್ರಪ್ರದೇಶದ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ಮಂಗಳವಾರ ತಿಳಿಸಿದ್ದಾರೆ.

Andhra Capital- ವಿಶಾಖಪಟ್ಟಣಂ ಆಂಧ್ರ ರಾಜಧಾನಿಯಾಗಲಿದೆ: ಸಿಎಂ ಜಗನ್ಮೋಹನ್ ರೆಡ್ಡಿ
ವೈ ಎಸ್ ಜಗನ್ಮೋಹನ್ ರೆಡ್ಡಿ
Follow us on

ಹೈದರಾಬಾದ್: ವಿಶಾಖಪಟ್ಟಣಂ ನಗರವು ಆಂಧ್ರಪ್ರದೇಶದ ರಾಜಧಾನಿಯಾಗಲಿದೆ (Andhra Capital) ಎಂದು ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ಮಂಗಳವಾರ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ನಮ್ಮ ರಾಜಧಾನಿಯಾಗಲಿರುವ ವಿಶಾಖಪಟ್ಟಣಂ ನಗರಕ್ಕೆ ನಿಮಗೆಲ್ಲರಿಗೂ ಆಹ್ವಾನ ಕೊಡಲು ಇಲ್ಲಿಗೆ ಬಂದಿದ್ದೇನೆ. ಕೆಲ ತಿಂಗಳುಗಳ ಬಳಿಕ ನಾನೂ ಕೂಡ ವಿಶಾಖಪಟ್ಟಣಂಗೆ ವರ್ಗಾವಣೆ ಆಗುತ್ತೇನೆ. ಮಾರ್ಚ್ 3 ಮತ್ತು 4ರಂದು ವಿಶಾಖಪಟ್ಟಣಂನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗವನ್ನು ಆಯೋಜಿಸುತ್ತಿದ್ದೇವೆಎಂದು ಹೈದರಾಬಾದ್​ನಲ್ಲಿ ಸುದ್ದಿಗಾರರಿಗೆ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

ವಾಸ್ತವದಲ್ಲಿ ಆಂಧ್ರದ ರಾಜಧಾನಿಯಾಗಿ ಅಮರಾವತಿ ಇದೆ. ಗುಂಟೂರು ಜಿಲ್ಲೆಯ ಭಾಗವಾಗಿದ್ದ ಅಮರಾವತಿಯಲ್ಲಿ ಶಾಸಕಾಂಗ ಕಾರ್ಯನಿರ್ವಹಿಸುವುದು ಮುಂದುವರಿಯುತ್ತದೆ. ಈಗ ವಿಶಾಖಪಟ್ಟಣವನ್ನು ಆಂಧ್ರದ ಅಧಿಕೃತ ರಾಜಧಾನಿ ನಗರವನ್ನಾಗಿ ಮಾಡಲಾಗುತ್ತದಾ ಎಂಬುದು ಖಚಿತಗೊಳ್ಳಬೇಕು. ಇದೇ ವೇಳೆ, ಆಂಧ್ರ ಉಚ್ಚ ನ್ಯಾಯಾಲಯ ಕರ್ನೂಲ್ ನಗರಕ್ಕೆ ವರ್ಗವಾಗಲಿದೆ.

ಇನ್ನಷ್ಟು ಮಾಹಿತಿ ನಿರೀಕ್ಷಿಸಿ….

Published On - 1:56 pm, Tue, 31 January 23