ಕೇರಳ: ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಕ್ಕೆ ಕಾರಣವಾದ ವ್ಯಕ್ತಿಗೆ ಮೂರು ಜೀವಾವಧಿ ಶಿಕ್ಷೆ
ಅಪರಾಧಿ ಹಿಂದೆ ಮದ್ರಸಾದಲ್ಲಿ ಶಿಕ್ಷಕನಾಗಿದ್ದ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ, ಅಕ್ಟೋಬರ್ 2021 ರವರೆಗೆ ಹಲವಾರು ಸಂದರ್ಭಗಳಲ್ಲಿ ತನ್ನ ಮಗಳ ಮೇಲೆ ಈತ ಅತ್ಯಾಚಾರ ಎಸಗಿದ್ದಾನೆ.
ಮಲಪ್ಪುರಂ: ತನ್ನ ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಅತ್ಯಾಚಾರವೆಸಗಿ ಆಕೆಯನ್ನುಗರ್ಭಿಣಿ ಮಾಡಿದ ವ್ಯಕ್ತಿಯೊಬ್ಬನಿಗೆ ಕೇರಳದ (Kerala) ನ್ಯಾಯಾಲಯ ಸೋಮವಾರ ಮೂರು ಜೀವಾವಧಿ ಶಿಕ್ಷೆ ವಿಧಿಸಿದೆ. ಭಾರತೀಯ ದಂಡ ಸಂಹಿತೆ (IPC) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯಿದೆ ಅಡಿಯಲ್ಲಿ ಅತ್ಯಾಚಾರ ಅಪರಾಧ, ತೀವ್ರತರವಾದ ಲೈಂಗಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯಕ್ಕೆ ಒಡ್ಡುವುದು ಹಾಗೂ ಸಂತ್ರಸ್ತೆಯನ್ನು ಬೆದರಿಸಿದ ಅಪರಾಧಗಳಿಗಾಗಿ ಮಂಜೇರಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಕೆ ಶಿಕ್ಷೆ ವಿಧಿಸಿದ್ದಾರೆ ಎಂದು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಎ ಸೋಮಸುಂದರನ್ ಹೇಳಿದ್ದಾರೆ. ಪೋಕ್ಸೊ ಕಾಯ್ದೆಯಡಿ ಅಪರಾಧಿಗಳಿಗೆ ಮೂರು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇನ್ನುಳಿದ ಬದುಕಿನ ಅವಧಿ ಜೈಲಿನಲ್ಲಿರಲು ಕೋರ್ಟ್ ನಿರ್ದೇಶಿಸಿದೆ ಎಂದು ಎಸ್‌ಪಿಪಿ ಹೇಳಿದರು. ನ್ಯಾಯಾಲಯ ಈತನಿಗೆ ₹ 6.6 ಲಕ್ಷ ದಂಡವನ್ನೂ ವಿಧಿಸಿದೆ ಎಂದು ಅವರು ಹೇಳಿದರು.
ಪ್ರಕರಣದ ವಿವರಗಳನ್ನು ನೀಡಿದ ಎಸ್‌ಪಿಪಿ, ಮಾರ್ಚ್ 2021 ರಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮೊದಲ ಅತ್ಯಾಚಾರದ ಘಟನೆ ಸಂಭವಿಸಿದೆ ಎಂದು ಹೇಳಿದರು.
ಆಗ ಮಗಳಿಗೆ 15 ವರ್ಷ. ಕೋವಿಡ್ ಕಾಲದಲ್ಲಿ ಆಕೆ ಆನ್‌ಲೈನ್ ತರಗತಿ ಇರುತ್ತಿತ್ತು. ಆಗ ಅವಳ ತಂದೆ ಅವಳನ್ನು ತನ್ನ ಮಲಗುವ ಕೋಣೆಗೆ ಎಳೆದೊಯ್ದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅತ್ಯಾಚಾರವೆಸಗುತ್ತಿದ್ದ ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ. ಸಂತ್ರಸ್ತೆ ವಿರೋಧಿಸಿದಾಗ ಆತ ತನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಎಸ್‌ಪಿಪಿ ತಿಳಿಸಿದ್ದಾರೆ.
ಅಪರಾಧಿ ಹಿಂದೆ ಮದ್ರಸಾದಲ್ಲಿ ಶಿಕ್ಷಕನಾಗಿದ್ದ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ, ಅಕ್ಟೋಬರ್ 2021 ರವರೆಗೆ ಹಲವಾರು ಸಂದರ್ಭಗಳಲ್ಲಿ ತನ್ನ ಮಗಳ ಮೇಲೆ ಈತ ಅತ್ಯಾಚಾರ ಎಸಗಿದ್ದಾನೆ.
ಇದನ್ನೂ ಓದಿ: G20 Meet: ಬೆಂಗಳೂರಿನಲ್ಲಿ ಫೆ. 5ರಿಂದ ಜಿ20 ಇಟಿಡಬ್ಲ್ಯೂಜಿ ಸಭೆ; ಪಾವಗಡ ಸೋಲಾರ್ ಪಾರ್ಕ್ಗೆ ಗಣ್ಯರ ಭೇಟಿ ಸಾಧ್ಯತೆ
ನವೆಂಬರ್ 2021 ರಲ್ಲಿ ಸಾಮಾನ್ಯ ತರಗತಿಗಳು ಪುನರಾರಂಭಗೊಂಡಾಗ ಸಂತ್ರಸ್ತೆ ಶಾಲೆಗೆ ಹೋಗಲು ಪ್ರಾರಂಭಿಸಿದಳು. ಆ ಸಮಯದಲ್ಲಿ ಆಕೆಗೆ ಸ್ವಲ್ಪ ಹೊಟ್ಟೆ ನೋವು ಕಾಣಿಸಿಕೊಂಡಿತು. ವೈದ್ಯರ ಬಳಿ ಕರೆದೊಯ್ದರೂ ಏನೂ ಪತ್ತೆಯಾಗಿಲ್ಲ. ಜನವರಿ 2022 ರಲ್ಲಿ ಅವಳು ಮತ್ತೆ ಹೊಟ್ಟೆ ನೋವು ಬಗ್ಗೆ ಹೇಳಿದಾಗ, ಆಕೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಅಲ್ಲಿ ಅವಳು ಗರ್ಭಿಣಿ ಎಂದು ತಿಳಿದುಬಂದಿದೆ. ಆ ಸಮಯದಲ್ಲಿ ಹುಡುಗಿ ತನ್ನ ತಂದೆಯೇ ಅಪರಾಧಿ ಎಂದು ಹೇಳಿದ್ದಾಳೆ ಎಂದು ಎಸ್‌ಪಿಪಿ ಹೇಳಿದರು. ನಂತರ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿಕೊಂಡು ಆಕೆಯ ತಂದೆಯನ್ನು ಬಂಧಿಸಿದ್ದಾರೆ.
ಸಂತ್ರಸ್ತೆಗೆ ಗರ್ಭಪಾತ ಮಾಡಲಾಗಿದ್ದು. ಭ್ರೂಣ, ಹುಡುಗಿ ಮತ್ತು ಆಕೆಯ ತಂದೆಯ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಡಿಎನ್‌ಎ ವಿಶ್ಲೇಷಣೆಯು ಬಾಲಕಿಯ ತಂದೆಯೇ ಅಪರಾಧಿ ಎಂದು ಸಾಬೀತಾಗಿದೆ ಎಂದು ಎಸ್‌ಪಿಪಿ ತಿಳಿಸಿದ್ದಾರೆ.
ಸಂತ್ರಸ್ತೆ ಮತ್ತು ಆಕೆಯ ತಾಯಿಯ ಹೇಳಿಕೆಗಳ ಜೊತೆಗೆ ಡಿಎನ್‌ಎ ಸಾಕ್ಷ್ಯವು ಆರೋಪಿಗೆ ಶಿಕ್ಷೆ ವಿಧಿಸುವಲ್ಲಿ ಪ್ರಮುಖವಾಗಿದೆ ಎಂದು ಅವರು ಹೇಳಿದರು. ಆರೋಪಿಗ ಮಧ್ಯಂತರದಲ್ಲಿ ಹೊರಬರದಂತೆ ಮತ್ತು ಸಂತ್ರಸ್ತೆ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಖಚಿತಪಡಿಸಿಕೊಳ್ಳಲು ವಿಚಾರಣೆಯನ್ನು ತ್ವರಿತವಾಗಿ ನಡೆಸಲಾಯಿತು” ಎಂದು ಅಪರಾಧ ದಾಖಲಾಗಿರುವ ವಳಿಕ್ಕಡವ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಬ್ದುಲ್ ಬಶೀರ್ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Tue, 31 January 23