G20 Meet: ಬೆಂಗಳೂರಿನಲ್ಲಿ ಫೆ. 5ರಿಂದ ಜಿ20 ಇಟಿಡಬ್ಲ್ಯೂಜಿ ಸಭೆ; ಪಾವಗಡ ಸೋಲಾರ್ ಪಾರ್ಕ್​ಗೆ ಗಣ್ಯರ ಭೇಟಿ ಸಾಧ್ಯತೆ

Energy Transition Working Group Meeting In Bengaluru: ಬೆಂಗಳೂರಿನಲ್ಲಿ ಇನ್ಫೋಸಿಸ್​ನ ಗ್ರೀನ್ ಬ್ಯುಲ್ಡಿಂಗ್ ಕ್ಯಾಂಪಸ್ ಮತ್ತು ಪಾವಗಡದ ಮೆಗಾ ಸೋಲಾರ್ ಪಾರ್ಕ್​ಗೆ ಈ ಜಿ20 ಗುಂಪಿನ ನಿಯೋಗ ಸದಸ್ಯರು ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾರ್ಯಗಳನ್ನು ಗಮನಿಸಲಿದ್ದಾರೆ.

G20 Meet: ಬೆಂಗಳೂರಿನಲ್ಲಿ ಫೆ. 5ರಿಂದ ಜಿ20 ಇಟಿಡಬ್ಲ್ಯೂಜಿ ಸಭೆ; ಪಾವಗಡ ಸೋಲಾರ್ ಪಾರ್ಕ್​ಗೆ ಗಣ್ಯರ ಭೇಟಿ ಸಾಧ್ಯತೆ
ಜಿ20 ರಾಷ್ಟ್ರಗಳು
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Jan 31, 2023 | 12:38 PM

ಬೆಂಗಳೂರು: ಈ ಬಾರಿಯ ಜಿ20 ಸಭೆಗಳು ಭಾರತದ ವಿವಿಧೆಡೆ ನಡೆಯಲಿದ್ದು. ಅದರಲ್ಲಿ ಒಂದು ಬೆಂಗಳೂರಿನಲ್ಲಿ ಆಗುತ್ತಿದೆ. ಫೆಬ್ರುವರಿ 5ರಿಂದ 7ರವರೆಗೂ ಜಿ20ಯ ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್​ನ ಸಭೆ (G20 Energy Transition Working Group) ಬೆಂಗಳೂರಿನಲ್ಲಿ ನಡೆಯಲಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಜಿ20 ರಾಷ್ಟ್ರಗಳು ಮತ್ತು ಅತಿಥಿ ರಾಷ್ಟ್ರಗಳಿಂದ ನಿಯೋಗಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ವಿಶ್ವಬ್ಯಾಂಕ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಯುಎನ್​ಡಿಪಿ, ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸ್, ಕ್ಲೀನ್ ಎನರ್ಜಿ ಮಿನಿಸ್ಟೆರಿಯಲ್, ಇಂಟರ್ನ್ಯಾಷನಲ್ ಸೋಲಾರ್ ಅಲಾಯನ್ಸ್ ಮೊದಲಾದ ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಕೂಡ ತಮ್ಮ ಪ್ರತಿನಿಧಿಗಳನ್ನು ಈ ಸಭೆಗೆ ಕಳುಹಿಸುತ್ತಿವೆ.

ಶಕ್ತಿ ಪರಿವರ್ತನೆಯಲ್ಲಿರುವ ತಂತ್ರಜ್ಞಾನ ಅಂತರ (Technological gaps in Energy Transition), ಹಣಕಾಸು ವ್ಯವಸ್ಥೆ, ಶಕ್ತಿ ಭದ್ರತೆ, ಸರಬರಾಜು ಸರಪಳಿಯ ವಿಸ್ತಾರ, ಭವಿಷ್ಯ ದಿನಗಳ ಇಂಧನ ಇತ್ಯಾದಿ ಚರ್ಚೆಗೆ ಈ ಸಭೆಯಲ್ಲಿ ಒತ್ತುಕೊಡಲಾಗುತ್ತಿದೆ.

ಇದನ್ನೂ ಓದಿ: Aero India Show: ಬಿಇಎಲ್​ನ ಕ್ಷಿಪಣಿ ವ್ಯವಸ್ಥೆ ಸೇರಿ ವಿವಿಧ ಉತ್ಪನ್ನಗಳು ಏರೋ ಇಂಡಿಯಾದಲ್ಲಿ ಅನಾವರಣ

ಬೆಂಗಳೂರಿನಲ್ಲಿ ಇನ್ಫೋಸಿಸ್​ನ ಗ್ರೀನ್ ಬ್ಯುಲ್ಡಿಂಗ್ ಕ್ಯಾಂಪಸ್ ಮತ್ತು ಪಾವಗಡದ ಮೆಗಾ ಸೋಲಾರ್ ಪಾರ್ಕ್​ಗೆ ಈ ಜಿ20 ಗುಂಪಿನ ನಿಯೋಗ ಸದಸ್ಯರು ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾರ್ಯಗಳನ್ನು ಗಮನಿಸಲಿದ್ದಾರೆ. ಹವಾಮಾನ ಬದಲಾವಣೆಯ ಸಮಸ್ಯೆ ನಿವಾರಣೆಗೆ ಭಾರತ ಹೇಗೆ ಪ್ರಯತ್ನಿಸುತ್ತಿದೆ, ಮರುಬಳಕೆ ಕ್ಷೇತ್ರಕ್ಕೆ ಇಲ್ಲಿ ಹೇಗೆ ಒತ್ತುಕೊಡಲಾಗುತ್ತಿದೆ ಎಂಬುದನ್ನೂ ಜಾಗತಿಕ ದೇಶಗಳ ಪ್ರತಿನಿಧಿಗಳು ಅರಿಯಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಪಳೆಯುಳಿಕೆ ಅಲ್ಲದ ಇಂಧನ ಶೇ 40ರಷ್ಟು ಪ್ರಮಾಣವನ್ನು 2021ರಲ್ಲಿ ಮುಟ್ಟಲಾಗಿದೆ. ಒಂಬತ್ತು ವರ್ಷ ಮುಂಚೆಯೇ ಈ ಗುರಿ ತಲುಪಲಾಗಿದೆ ಎಂದು ಕೆಲ ದಿನಗಳ ಹಿಂದೆ ಕೇಂದ್ರದ ಶಕ್ತಿ ಇಲಾಖೆಯ ಕಾರ್ಯದರ್ಶಿ ಅಲೋಕ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಜಿ20 ದೇಶಗಳು ಮತ್ತು ಅತಿಥಿ ದೇಶಗಳ ಪ್ರತಿನಿಧಿಗಳು ಕರ್ನಾಟಕದ ಸಮೃದ್ಧ ಸಾಂಸ್ಕೃತಿಕ ಪರಂಪರೆ, ಕಲೆ, ಆಹಾರ ವೈವಿಧ್ಯತೆಯ ದರ್ಶನ ಪಡೆದು ಹೋಗಲಿದ್ದಾರೆ.

ಜಿ20 ರಾಷ್ಟ್ರಗಳು

ಭಾರತ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಜಪಾನ್, ಇಟಲಿ, ಸೌತ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ಸೌತ್ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ, ಇವು ಜಿ20 ಗುಂಪಿನಲ್ಲಿರುವ ದೇಶಗಳಾಗಿವೆ.

ಜಿ20 ಸಭೆಯಲ್ಲಿ 9 ದೇಶಗಳು ವಿಶೇಷ ಆಹ್ವಾನ ಪಡೆದಿವೆ. ಇವುಗಳ ಪೈಕಿ ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್​ಲೆಂಡ್ಸ್, ನೈಜೀರಿಯಾ, ಓಮನ್, ಸಿಂಗಾಪುರ, ಯುಎಇ ಮತ್ತು ಸ್ಪೇನ್ ದೇಶಗಳಿವೆ. ಒಟ್ಟಾರೆ ಈ ಎಲ್ಲಾ ದೇಶಗಳಿಂದ 150ಕ್ಕೂ ಹೆಚ್ಚು ಪ್ರತಿನಿಧಿಗಳು ಜಿ20 ಸಭೆಯಲ್ಲಿ ಪಾಲ್ಗೊಳ್ಳಲಿವೆ.

ಬೆಂಗಳೂರಿನಲ್ಲಿ ಮಾತ್ರವಲ್ಲ ದೇಶದ ವಿವಿಧೆಡೆ ವಿವಿಧ ಜಿ20 ಸಭೆಗಳು ನಡೆಯುತ್ತಿವೆ.

Published On - 12:38 pm, Tue, 31 January 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್