Aero India Show: ಬಿಇಎಲ್​ನ ಕ್ಷಿಪಣಿ ವ್ಯವಸ್ಥೆ ಸೇರಿ ವಿವಿಧ ಉತ್ಪನ್ನಗಳು ಏರೋ ಇಂಡಿಯಾದಲ್ಲಿ ಅನಾವರಣ

BEL defense Products Showcase At Bengaluru Aero Show: ಏರ್ ಡಿಫೆನ್ಸ್ ಮತ್ತು ಸರ್ವೇಲನ್ಸ್, ಸಿ41 ಸಿಸ್ಟಮ್ಸ್, ಎಐ ಆಧಾರಿತ ಉತ್ಪನ್ನಗಳು, ರಾಡಾರ್, ಕಮ್ಯೂನಿಕೇಶನ್ ಸಿಸ್ಟಮ್ಸ್, ವೈಮಾನಿಕ ಉತ್ಪನ್ನ ಮತ್ತು ಸಿಸ್ಟಮ್ಸ್, ಹೋಮ್​ಲ್ಯಾಂಡ್ ಮತ್ತು ಸೈಬರ್ ಸೆಕ್ಯೂರಿಟಿ, ಭವಿಷ್ಯಾತ್ಮಕ ತಂತ್ರಜ್ಞಾನ, ಕ್ಷಿಪಣಿ ವ್ಯವಸ್ಥೆ, ಎಲೆಕ್ಟ್ರೋ ಆಪ್ಟಿಕ್ಸ್ ಹೀಗೆ ಬಿಇಎಲ್​ನ ವಿವಿಧ ಉತ್ಪನ್ನಗಳು ಏರೋ ಇಂಡಿಯಾ ಶೋನಲ್ಲಿ ವೀಕ್ಷಕರಿಗೆ ಕಾಣಸಿಗಲಿವೆ.

Aero India Show: ಬಿಇಎಲ್​ನ ಕ್ಷಿಪಣಿ ವ್ಯವಸ್ಥೆ ಸೇರಿ ವಿವಿಧ ಉತ್ಪನ್ನಗಳು ಏರೋ ಇಂಡಿಯಾದಲ್ಲಿ ಅನಾವರಣ
ಬಿಇಎಲ್​ನ ಉತ್ಪನ್ನImage Credit source: BEL
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jan 31, 2023 | 10:53 AM

ಬೆಂಗಳೂರು: ಫೆಬ್ರುವರಿ 13ರಂದು ಇಲ್ಲಿ ಆರಂಭವಾಗಿರುವ ಐದು ದಿನಗಳ ಏರೋ ಇಂಡಿಯಾ ವೈಮಾನಿಕ ಶೋನಲ್ಲಿ (Aero India Show) ಬೆಂಗಳೂರು ಮೂಲದ ಭಾರತ್ ಎಲೆಕ್ಟ್ರಾನಿಕ್ಸ್ ಲಿ ಸಂಸ್ಥೆ (BEL) ತನ್ನ ರಕ್ಷಣಾ ಉತ್ಪನ್ನಗಳನ್ನು ಪ್ರದರ್ಶಿಸಲಿದೆ. ಈ ಬಗ್ಗೆ ನಿನ್ನೆ ಸೋಮವಾರ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಬಿಇಎಲ್, ಏರೋ ಇಂಡಿಯಾ ಶೋನಲ್ಲಿ 12 ಕ್ಲಸ್ಟರ್​ಗಳಲ್ಲಿ (ಗುಂಪು) ತನ್ನ ಎಲ್ಲಾ ಶ್ರೇಣಿಯ ಉತ್ಪನ್ನಗಳನ್ನು ಪ್ರದರ್ಶಿಸುತ್ತೇವೆ ಎಂದಿದೆ.

ಭಾರತೀಯ ಸೇನೆಗೆ ವಿವಿಧ ರೀತಿಯ ಉತ್ಪನ್ನಗಳನ್ನು ಬಿಇಎಲ್ ತಯಾರಿಸಿಕೊಡುತ್ತದೆ. ಏರ್ ಡಿಫೆನ್ಸ್ ಮತ್ತು ಸರ್ವೇಲನ್ಸ್, ಸಿ41 ಸಿಸ್ಟಮ್ಸ್, ಎಐ ಆಧಾರಿತ ಉತ್ಪನ್ನಗಳು, ರಕ್ಷಣೇತರ ಉತ್ಪನ್ನಗಳು, ರಾಡಾರ್ ಸಿಸ್ಟಮ್ಸ್, ಕಮ್ಯೂನಿಕೇಶನ್ ಸಿಸ್ಟಮ್ಸ್, ವೈಮಾನಿಕ ಉತ್ಪನ್ನ ಮತ್ತು ಸಿಸ್ಟಮ್ಸ್, ಹೋಮ್​ಲ್ಯಾಂಡ್ ಮತ್ತು ಸೈಬರ್ ಸೆಕ್ಯೂರಿಟಿ, ಭವಿಷ್ಯಾತ್ಮಕ ತಂತ್ರಜ್ಞಾನ, ಕ್ಷಿಪಣಿ ವ್ಯವಸ್ಥೆ, ಎಲೆಕ್ಟ್ರೋ ಆಪ್ಟಿಕ್ಸ್, ಲೇಸರ್ ಆಧಾರಿತ ಉತ್ಪನ್ನಗಳು, ಹೊರಾಂಗಣ ಪ್ರದರ್ಶನ ಉತ್ಪನ್ನಗಳು ಹೀಗೆ ಬಿಇಎಲ್​ನ ವಿವಿಧ ಉತ್ಪನ್ನಗಳು ಏರೋ ಇಂಡಿಯಾ ಶೋನಲ್ಲಿ ವೀಕ್ಷಕರಿಗೆ ಕಾಣಸಿಗಲಿವೆ.

ಇದನ್ನೂ ಓದಿ: KSRTC BMTC: ಮೈಸೂರು, ತುಮಕೂರು, ಬೆಂಗಳೂರು ನಗರ ಸಾರಿಗೆಗೆ ಶೀಘ್ರ ಡಬಲ್ ಡೆಕರ್ ಎಸಿ ಇ-ಬಸ್

ಬಿಇಎಲ್​ನ ಮಿಸೈಲ್ ಸಿಸ್ಟಮ್​ಗಳಲ್ಲಿ ಏರ್ ಡಿಫೆನ್ಸ್ ವೆಪನ್ ಸಿಸ್ಟಂ ಕೂಡ ಒಂದು. ಇದರಲ್ಲಿ ಹೆಕ್ಸಾಕಾಪ್ಟರ್, ರೋಬೋಟಿಕ್ ಸರ್ವೇಲನ್ಸ್, ಡಿ4 ಆ್ಯಂಟಿ ಡ್ರೋನ್ ಸಿಸ್ಟಮ್ ಮೊದಲಾದವರು ಬಿಇಎಲ್​ನ ಏರ್ ಡಿಫೆನ್ಸ್ ಕ್ಲಸ್ಟರ್​ನಲ್ಲಿ ಒಳಗೊಂಡಿರುತ್ತವೆ. ಕಡಿಮೆ ಆಳದ ನೀರಿನಲ್ಲಿ ರಿಮೋಟ್ ಮೂಲಕ ಕೆಲಸ ಮಾಡುವ ವಾಹನವೂ ಇದೇ ವ್ಯವಸ್ಥೆಯಲ್ಲಿರುತ್ತದೆ. ಇವುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಏರೋ ಇಂಡಿಯಾ ಶೋನದಲ್ಲಿ ನೋಡಬಹುದು.

ಯಲಹಂಕದ ಏರ್ ಫೋರ್ಸ್ ಸ್ಟೇಷನ್​ನಲ್ಲಿ ಏರೋ ಇಂಡಿಯಾ ಶೋ ಫೆಬ್ರುವರಿ 13ರಿಂದ 17ರವರೆಗೆ ನಡೆಯುತ್ತದೆ. ಈ ಬಾರಿಯದ್ದು 14ನೇ ಆವೃತ್ತಿಯಾಗಿದೆ.