ಬುಧವಾರ ಸಿಎಂ ಮನೆ ಮುತ್ತಿಗೆ ಫಿಕ್ಸ್: ಗೋಲಿಬಾರ್ ಆದ್ರೂ ನಾವು ಸುಮ್ಮನಿರೋದಿಲ್ಲ-ಅಂಗನವಾಡಿ ಕಾರ್ಯಕರ್ತೆಯರಿಂದ ಡೆಡ್ ಲೈನ್
ಲಾಠಿ ಚಾರ್ಜ್, ಗೋಲಿಬಾರ್ ಆದ್ರೂ ನಾವು ಸುಮ್ಮನಿರೋದಿಲ್ಲ. ಯಾವತ್ತೋ ಒಂದು ದಿನ ಸಾಯಬೇಕು, ನಾಳೆಯೇ ಸತ್ತರೆ ಏನೂ ಆಗೊಲ್ಲ. ಸತತ 9 ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ. ನಮ್ಮ ಹೋರಾಟದ ಕೂಗು ಸರ್ಕಾರದ ಕಿವಿಗೆ ಬಿದ್ದಿಲ್ಲ.
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಕಳೆದ ಎಂಟೊಂಬತ್ತು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಗಲು-ರಾತ್ರಿ, ಬಿಸಿಲು, ಚಳಿ ಎನ್ನದೆ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಇವರ ತಾಳ್ಮೆಯ ಸಮಯ ಮುಗಿದಿದ್ದು ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದಾರೆ. ಬೇಡಿಕೆಗಳ ಆದೇಶವಾಗಿ ಹೊರಬೀಳದಿದ್ದರೆ ನಾಳೆ ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಅಂಗನವಾಡಿ ಕಾರ್ಯಕರ್ತೆಯರು ಇಂದು ಸಂಜೆಯವರೆಗೆ ಡೆಡ್ ಲೈನ್ ನೀಡಿದ್ದಾರೆ.
ಲಾಠಿ ಚಾರ್ಜ್, ಗೋಲಿಬಾರ್ ಆದ್ರೂ ನಾವು ಸುಮ್ಮನಿರೋದಿಲ್ಲ. ಯಾವತ್ತೋ ಒಂದು ದಿನ ಸಾಯಬೇಕು, ನಾಳೆಯೇ ಸತ್ತರೆ ಏನೂ ಆಗೊಲ್ಲ. ಸತತ 9 ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ. ನಮ್ಮ ಹೋರಾಟದ ಕೂಗು ಸರ್ಕಾರದ ಕಿವಿಗೆ ಬಿದ್ದಿಲ್ಲ. ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಆಗಬೇಕು. ಇಲ್ಲವಾದ್ರೆ ನಾಳೆ 15 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಂದ ಸಿಎಂ ಮನೆ ಮುತ್ತಿಗೆ ಹಾಕ್ತೀವಿ ಎಂದು ಸಿಐಟಿಯು ಸಂಘಟನೆಯ ರಾಜ್ಯಾಧ್ಯಕ್ಷೆ ವರಲಕ್ಷ್ಮಿ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಜೀವಂತ ಸಿದ್ದರಾಮಯ್ಯನೇ ನಮಗೆ ಬೇಕಿಲ್ಲ, ಇನ್ನು ನಾಯಿಯೂ ಮೂಸದ ಅವರ ಹೆಣ ತಗೊಂಡು ಏನು ಮಾಡೋಣ? ಕೆಎಸ್ ಈಶ್ವರಪ್ಪ
ಮೈಕೊರೆಯುವ ಚಳಿ, ಸುಡು ಬಿಸಿಲಿನಲ್ಲಿ ಮುಂದುವರಿದ ಪ್ರತಿಭಟನೆ
ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಸಿಐಟಿಯು ಸಂಘಟನೆಯಿಂದ ಫ್ರೀಡಂ ಪಾರ್ಕ್ ನಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಗಲು ರಾತ್ರಿ ಎನ್ನದೆ ಅಹೋರಾತ್ರಿ ಧರಣಿ ಮಾಡ್ತಿದ್ದಾರೆ..ತಮ್ಮ ಜೊತೆಗೆ ಮಹಿಳೆಯರು ತಮ್ಮ ಪುಟ್ಟ ಕಂದಮ್ಮಗಳನ್ನು ಕರೆದುಕೊಂಡು ಬಂದಿದ್ದಾರೆ. ಕಳೆದ ದಿನಗಳ ಹಿಂದೆ ಮನೆಯಿಂದ ತಂದಿದ್ದ ಊಟ ತಿಂಡಿ ಎಲ್ಲಾ ಖಾಲಿ ಆಗೋಗಿದೆ ಸದ್ಯ ಮಹಿಳೆಯರಿಗೆ ತಿನ್ನಲು ಊಟವಿಲ್ಲ, ಮಕ್ಕಳಿಗೆ ಕುಡಿಸಲು ಹಾಲು ಇಲ್ಲದೆ ತೀವ್ರ ಸಂಕಷ್ಟ ಎದುರಿಸ್ತಿದ್ದಾರೆ.
ಇನ್ನೂ ಇತ್ತ ಸಾಕಷ್ಟು ಮಹಿಳೆಯರು ಪರ್ಸನಲ್ ಪ್ರಾಬ್ಲಮ್ ನಿಂದ ಬಳಲುತ್ತಿದ್ದಾರೆ ಸರ್ಕಾರ ಯಾವುದೇ ಮೊಬೈಲ್ ಟಾಯ್ಲೆಟ್ ಗಳ ವ್ಯವಸ್ಥೆ ಮಾಡಿಲ್ಲ. ಅಕ್ಕಪಕ್ಕದಲ್ಲಿ ಇರೋ ಎರಡ್ಮೂರು ಶೌಚಾಲಯದವ್ರು ಒಂದು ಹೋಗಲು ಹತ್ತು ರುಪಾಯಿ ಕೇಳ್ತಿದ್ದಾರೆ ಅಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸ್ತಿದ್ರೆ. ಇತ್ತ ಕುಡಿಯಲು ನೀರಿಲ್ಲ ಅದು ಯಾವುದೋ ತುಕ್ಕು ಹಿಡಿದಿರುವ ವಾಟರ್ ಟ್ಯಾಂಕರ್ ನಿಂದ ನೀರು ಬಿಡ್ತಿದ್ದಾರೆ. ಆ ನೀರು ಕುಡಿದ್ರೆ ನಮ್ಮ ಆರೋಗ್ಯದ ಕಥೆ ಏನು ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಇನ್ನೂ ಕಳೆದ ಕೆಲ ದಿನಗಳಿಂದ ಚಳಿಯಲ್ಲಿ ಪ್ರತಿಭಟನೆ ಮಾಡ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮಹಿಳೆಯರು ಆಸ್ಪತ್ರೆ ಸೇರುತ್ತಿದ್ದಾರೆ. ಆಸ್ಪತ್ರೆಗೆ ಹಣ ಕಟ್ಟಲು ಆಗದೆ ವಾಪಸ್ ಪರದಾಡುತ್ತಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ