ಜೀವಂತ ಸಿದ್ದರಾಮಯ್ಯನೇ ನಮಗೆ ಬೇಕಿಲ್ಲ, ಇನ್ನು ನಾಯಿಯೂ ಮೂಸದ ಅವರ ಹೆಣ ತಗೊಂಡು ಏನು ಮಾಡೋಣ? ಕೆಎಸ್ ಈಶ್ವರಪ್ಪ
ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯೊಬ್ಬರು ಒಂದು ಪಕ್ಷದ ಅಧ್ಯಕ್ಷರ ಬಗ್ಗೆ ಅಂಥ ಪದಗಳನ್ನು ಬಳಸುವುದು ಆವರ ಘನತೆಗೆ ಶೋಭೆ ನೀಡೋದಿಲ್ಲ ಎಂದರು.
ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು (Nalin Kumar Kateel) ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಬಫೂನ್ ಅಂತ ಕರೆದಿದ್ದು ಪಕ್ಷದ ಶಾಸಕ ಕೆ ಎಸ್ ಈಶ್ವರಪ್ಪಗೆ (KS Eshwarappa) ಸಿಟ್ಟು ತರಿಸಿದೆ. ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯೊಬ್ಬರು ಒಂದು ಪಕ್ಷದ ಅಧ್ಯಕ್ಷರ ಬಗ್ಗೆ ಅಂಥ ಪದಗಳನ್ನು ಬಳಸುವುದು ಆವರ ಘನತೆಗೆ ಶೋಭೆ ನೀಡೋದಿಲ್ಲ ಎಂದರು. ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಅವರಿಗೆ, ತಮ್ಮ ಹೆಣ ಕೂಡ ಬಿಜೆಪಿ ಪಕ್ಷಕ್ಕೆ ಹೋಗೋದಿಲ್ಲ ಅಂತ ಸಿದ್ದರಾಮಯ್ಯ ಹೇಳಿರುವ ವಿಷಯವನ್ನು ಗಮನಕ್ಕೆ ತಂದಾಗ, ‘ಜೀವಂತ ಸಿದ್ದರಾಮಯ್ಯನೇ ನಮಗೆ ಬೇಕಿಲ್ಲ, ಅವರ ಹೆಣ ತೆಗೆದುಕೊಂಡು ಏನು ಮಾಡೋಣ? ನಾಯಿಯೂ ಅವರ ಹೆಣ ಮೂಸಿ ನೋಡೋದಿಲ್ಲ,’ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos