Assembly Polls: ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಬೇಕೆಂದು ಸಲಹೆ ನೀಡುವಷ್ಟು ಹಿರಿತನ ಕೆ ಎನ್ ರಾಜಣ್ಣಗಾಗಲೀ, ನನಗಾಗಲೀ ಇಲ್ಲ: ಎಮ್ ಬಿ ಪಾಟೀಲ
ಅವರಿಗೆ ಯಾವ ಕ್ಷೇತ್ರ ಸೂಕ್ತ ಅಂತ ಸಲಹೆ ನೀಡುವಷ್ಟು ಹಿರಿತನ ತನಗಾಗಲೀ, ಕೆ ಎನ್ ರಾಜಣ್ಣಗಾಗಲೀ ಇಲ್ಲ, ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಪಾಟೀಲ್ ಹೇಳಿದರು.
ಬೆಂಗಳೂರು: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ (Siddaramaiah) ಕೋಲಾರದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಪಕ್ಷದ ಹೈಕಮಾಂಡ್ (high command) ಅನುಮತಿ ನೀಡಿದರೆ ಮುಂದುವರಿಯತ್ತಾರೆ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಮ್ ಬಿ ಪಾಟೀಲ್ (MB Patil) ಇಂದು ಬೆಂಗಳೂರಲ್ಲಿ ಹೇಳಿದರು. ನಗರದಲ್ಲಿ ಪತ್ರಿಕಾ ಗೋಷ್ಠಿಯೊಂದನ್ನು ಉದ್ದೇಶಿಸಿ ಮಾತಾಡಿದ ಪಾಟೀಲ್ ಸಿದ್ದರಾಮಯ್ಯ ಒಬ್ಬ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿಯಾಗಿದ್ದಾರೆ, ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲುತ್ತಾರೆ, ಅವರಿಗೆ ಯಾವ ಕ್ಷೇತ್ರ ಸೂಕ್ತ ಅಂತ ಸಲಹೆ ನೀಡುವಷ್ಟು ಹಿರಿತನ ತನಗಾಗಲೀ, ಕೆ ಎನ್ ರಾಜಣ್ಣಗಾಗಲೀ ಇಲ್ಲ, ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಪಾಟೀಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos