Assembly Polls: ಎಲ್ಲ ಪಕ್ಷಗಳ ಯಾತ್ರೆಯಂತೆ ಗಾಲಿ ಜನಾರ್ಧನ ರೆಡ್ಡಿಯವರ ಕಲ್ಯಾಣ ಯಾತ್ರೆ ಆರಂಭ
ಮಂಗಳವಾರ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಬಳಿಯ ಪಂಪಾ ಸರೋವರದಲ್ಲಿ (Pampa Lake) ತಮ್ಮ ಧರ್ಮಪತ್ನಿ ಅರುಣ ಲಕ್ಷ್ಮಿ ಮತ್ತು ಇತರ ಕೆಲ ಜನರೊಂದಿಗೆ ಪೂಜೆ ಸಲ್ಲಿಸಿದರು,
ಕೊಪ್ಪಳ: ಇದು ಭಾರತ ಜೋಡೋ ಯಾತ್ರೆ, ಜನಸಂಕಲ್ಪ ಯಾತ್ರೆ, ಪ್ರಜಾಧ್ವನಿ ಯಾತ್ರೆ, ಪಂಚರತ್ನ ಯಾತ್ರೆಗಳ ಜಮಾನಾ ಮಾರಾಯ್ರೇ. ಈ ಯಾತ್ರೆಗಳಿಗೆ ಲೇಟೆಸ್ಟ್ ಸೇರ್ಪಡೆಯೆಂದರೆ, ಕಲ್ಯಾಣ ಯಾತ್ರೆ (Kalyana Yatre). ಈ ಯಾತ್ರೆ ಯಾರದ್ದು ಅಂತ ನಿಮಗೆ ಆಶ್ಚರ್ಯವಾಗುತ್ತಿರಬಹುದು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಗಾಲಿ ಜನಾರ್ಧನ ರೆಡ್ಡಿಯವರು (Gali Janardhan Reddy) ಮಂಗಳವಾರ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಬಳಿಯ ಪಂಪಾ ಸರೋವರದಲ್ಲಿ (Pampa Lake) ತಮ್ಮ ಧರ್ಮಪತ್ನಿ ಅರುಣ ಲಕ್ಷ್ಮಿ ಮತ್ತು ಇತರ ಕೆಲ ಜನರೊಂದಿಗೆ ಪೂಜೆ ಸಲ್ಲಿಸಿದ ಬಳಿಕ ತಮ್ಮ ಕಲ್ಯಾಣ ರಥಯಾತ್ರೆಗೆ ಚಾಲನೆ ನೀಡಿದರು. ಮಂಗಳವಾರ ಬೆಳಗ್ಗೆಯಿಂದಲೇ ರೆಡ್ಡಿ ದಂಪತಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

