Bengaluru Traffic: ಬೆಂಗಳೂರಿನ ಈ ಪ್ರಮುಖ ಜಂಕ್ಷನ್ಗಳಲ್ಲಿ ಬಸ್ಗಳ ಅವೈಜ್ಞಾನಿಕ ನಿಲುಗಡೆ, ವಾಹನ ಸವಾರರ ಪರದಾಟ
ಬೆಂಗಳೂರು ದಿನದಿಂದ ದಿನಕ್ಕೆ ಸಾಕಷ್ಟು ಅಭಿವೃದ್ಧಿಹೊಂದುತ್ತಿದೆ, ನಗರದ ಬಹುತೇಕ ಕಡೆ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ನಮ್ಮ ಮೆಟ್ರೋ, ಫ್ಲೈ ಓವರ್ ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ.
ಬೆಂಗಳೂರು ದಿನದಿಂದ ದಿನಕ್ಕೆ ಸಾಕಷ್ಟು ಅಭಿವೃದ್ಧಿಹೊಂದುತ್ತಿದೆ, ನಗರದ ಬಹುತೇಕ ಕಡೆ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ನಮ್ಮ ಮೆಟ್ರೋ, ಫ್ಲೈ ಓವರ್ ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಆದರೂ ಕೆಲವು ಕಡೆಗಳಲ್ಲಿ ಸಂಚಾರ ದಟ್ಟಣೆ ಹಾಗೆಯೇ ಮುಂದುವರೆದಿದೆ, ಕೆಲವು ಬಾರಿ ರಸ್ತೆಗಳು ಸರಿ ಇಲ್ಲ ಎನ್ನುವ ದೂರು, ಮತ್ತೊಂದು ಕಡೆ ರಸ್ತೆ ಕಿರಿದಾಗಿರುವ ಬಗ್ಗೆ ದೂರು ಇನ್ನೂ ಕೆಲವೆಡೆ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲಿಸುತ್ತೆ ಅದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
ನಗರದ ಹಲವಾರು ಸ್ಥಳಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಥವಾ ಫ್ಲೈ ಓವರ್ ಪಕ್ಕದಲ್ಲಿ ಅಥವಾ ಫ್ಲೈಓವರ್ ಇಳಿದ ತಕ್ಷಣ ಬಸ್ ನಿಲ್ದಾಣವಿರುವುದು ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿದೆ ಈ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ), ಯಲಹಂಕ, ಬಾಗಳೂರು ಮತ್ತು ದೊಡ್ಡಬಳ್ಳಾಪುರ ಕಡೆಗೆ ತೆರಳುವ ಪ್ರಯಾಣಿಕರು , ವಿಶೇಷವಾಗಿ ಪೀಕ್ ಸಮಯದಲ್ಲಿ, ಕೆಂಪಾಪುರ ಬಸ್ ನಿಲ್ದಾಣ, ಕೊಡಿಗೇಹಳ್ಳಿ ಬಸ್ ನಿಲ್ದಾಣ, ಬಳ್ಳಾರಿ ರಸ್ತೆಯ ಕೋಗಿಲು ಕ್ರಾಸ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಸರತಿ ಸಾಲಿನಲ್ಲಿ ನಿಲ್ಲುತ್ತವೆ. ನಗರದ ಕಡೆಗೆ ಚಲಿಸುವಾಗ ದೊಡ್ಡಬಳ್ಳಾಪುರ ರಸ್ತೆಯ ಎನ್‌ಇಎಸ್ ಬಸ್ ನಿಲ್ದಾಣದ ಬಳಿ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದೆ.
ಬಸ್ ನಿಲ್ದಾಣಗಳಿಗೆ ಅವೈಜ್ಞಾನಿಕ ಸ್ಥಳಗಳ ಹೊರತಾಗಿ, ಚಾಲಕರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದು ಸಂಕಟಗಳನ್ನು ಹೆಚ್ಚಿಸುತ್ತದೆ. ಯಲಹಂಕದಿಂದ ಹೆಬ್ಬಾಳ ಕಡೆಗೆ ತೆರಳುವ ಪ್ರಯಾಣಿಕರು ಜಕ್ಕೂರು ಏರೋಡ್ರೋಮ್ ಬಳಿಯ ಬಸ್ ನಿಲ್ದಾಣದಲ್ಲಿ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ.
ನಗರದಿಂದ ಹೈದರಾಬಾದ್‌ಗೆ ಹೋಗುವ ಬಸ್‌ಗಳಿಗೆ ಕೆಂಪಾಪುರ ಬಸ್ ನಿಲ್ದಾಣವು ಕೊನೆಯ ನಿಲ್ದಾಣವಾಗಿದೆ. ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುವ ವಾಹನಗಳಿಂದ ಜನರು ಪರದಾಡುವಂತಾಗಿದ್ದು, ರಾತ್ರಿ ವೇಳೆ ಟ್ರಾಫಿಕ್ ಪೊಲೀಸರೂ ಕೂಡ ಇಲ್ಲದಿರುವುದು ಬೇಸರ ಮೂಡಿಸುವ ವಿಚಾರವಾಗಿದೆ.
ಕೆಂಪಾಪುರ ಬಸ್ ನಿಲ್ದಾಣದ ಬಳಿ ದ್ವಿಪಥ ಸರ್ವಿಸ್ ರಸ್ತೆ ಇದೆ. ಪ್ರಯಾಣಿಕರನ್ನು ಕರೆದೊಯ್ಯಲು ಬಸ್ಸುಗಳನ್ನು ಅಲ್ಲಿ ನಿಲ್ಲಿಸಬಹುದು. ಆದರೆ ಹೈದರಾಬಾದ್ ಬಸ್‌ಗಳಿಗೆ ಪ್ರಯಾಣಿಕರನ್ನು ಕರೆತರುವ ಆಟೋಗಳು ಮತ್ತು ಖಾಸಗಿ ಕಾರುಗಳು ತಮಗೆ ಬೇಕಾದ ಕಡೆ ವಾಹನಗಳನ್ನು ನಿಲ್ಲಿಸುವ ಮೂಲಕ ದಾರಿಯನ್ನು ನಿರ್ಬಂಧಿಸುತ್ತವೆ. ಈ ತೊಂದರೆ ತಪ್ಪಿಸಲು ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಅಮೃತಹಳ್ಳಿ ನಿವಾಸಿ ವಾಗೇಶ್ ಹೇಳಿದ್ದಾರೆ.
ಕೊಡಿಗೇಹಳ್ಳಿ ಗೇಟ್‌ನಲ್ಲಿ ಟ್ರಾಫಿಕ್ ಸಿಗ್ನಲ್‌ನಿಂದ ಕೆಲವು ಮೀಟರ್ ದೂರದಲ್ಲಿ ಸರ್ವಿಸ್ ರಸ್ತೆಯಲ್ಲಿ ಬಸ್ ನಿಲ್ದಾಣವಿದೆ. ಆದರೆ ಬಸ್‌ಗಳು ನಿಗದಿತ ನಿಲುಗಡೆಗಿಂತ ಮುಂಚಿತವಾಗಿ ನಿಲ್ಲಿಸುತ್ತವೆ, ಇದರಿಂದಾಗಿ ಸರ್ವೀಸ್ ರಸ್ತೆಗೆ ಪ್ರವೇಶಿಸುವ ಮತ್ತು ಯಲಹಂಕ ಕಡೆಗೆ ಹೋಗುವ ವಾಹನಗಳಿಗೆ ತೊಂದರೆಯಾಗುತ್ತಿದೆ.
ಬಿಎಂಟಿಸಿ ಬಸ್‌ಗಳು ಪ್ರತಿದಿನ ಇಲ್ಲಿ ಸಂಚಾರ ದಟ್ಟಣೆ ಸೃಷ್ಟಿಸುತ್ತಿವೆ. ಸಿಗ್ನಲ್‌ನ 50 ಮೀಟರ್ ಮುಂದೆ ಬಸ್ ನಿಲ್ದಾಣವನ್ನು ಬದಲಾಯಿಸಿದರೆ ಸ್ವಲ್ಪ ಮಟ್ಟಿಗೆ ಇದನ್ನು ಪರಿಹರಿಸಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಸಿಗ್ನಲ್‌ನಲ್ಲಿರುವ ಮತ್ತೊಂದು ಪ್ರಮುಖ ಬಸ್ ನಿಲ್ದಾಣವು ಕೋಗಿಲು ಕ್ರಾಸ್‌ನಲ್ಲಿದೆ.
ಉತ್ತರ ಬೆಂಗಳೂರಿನಿಂದ KIA ಕಡೆಗೆ ಚಲಿಸುವ ವಾಹನಗಳು BSF ಕ್ಯಾಂಪಸ್‌ನಲ್ಲಿ ಎಕ್ಸ್‌ಪ್ರೆಸ್‌ವೇ ಪ್ರವೇಶಿಸುವ ಮೊದಲು ಯಲಹಂಕದ ಕೆಂಪೇಗೌಡ ವೃತ್ತ ಮತ್ತು ಕೋಗಿಲು ಕ್ರಾಸ್ ಅನ್ನು ಬಳಸುತ್ತವೆ. ದೊಡ್ಡಬಳ್ಳಾಪುರ ರಸ್ತೆಯುದ್ದಕ್ಕೂ ಇರುವ ಪ್ರದೇಶಗಳಿಂದ BMTC ಬಸ್‌ಗಳು, ಅನಂತಪುರ ಮತ್ತು ಹಿಂದೂಪುರದಿಂದ ಆಂಧ್ರಪ್ರದೇಶ (AP) ಸಾರ್ವಜನಿಕ ಬಸ್‌ಗಳು KSRTC ಮತ್ತು ಎಪಿ ಮತ್ತು ಗೌರಿಬಿದನೂರಿನಿಂದ ನಗರವನ್ನು ತಲುಪಲು ಅದೇ ರಸ್ತೆಯನ್ನು ಬಳಸುತ್ತವೆ ಇದರಿಂದ ಟ್ರಾಫಿಕ್ ಜಾಮ್ ಹೆಚ್ಚಿದೆ.
ಮತ್ತಷ್ಟು ಓದಿ: KSRTC BMTC: ಮೈಸೂರು, ತುಮಕೂರು, ಬೆಂಗಳೂರು ನಗರ ಸಾರಿಗೆಗೆ ಶೀಘ್ರ ಡಬಲ್ ಡೆಕರ್ ಎಸಿ ಇ-ಬಸ್
ಎನ್‌ಇಎಸ್ ಸಿಗ್ನಲ್‌ನಲ್ಲಿನ ಬಸ್ ನಿಲುಗಡೆಯು ರಸ್ತೆಯನ್ನು ನಿರ್ಬಂಧಿಸುತ್ತದೆ ಮತ್ತು ಯಲಹಂಕ ಪೊಲೀಸ್ ಠಾಣೆ ಜಂಕ್ಷನ್‌ನಿಂದ ಯಲಹಂಕ ನ್ಯೂ ಟೌನ್-ಬಿಡಬ್ಲ್ಯೂಎಸ್‌ಎಸ್‌ಬಿ ಜಂಕ್ಷನ್‌ವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಪ್ರಗತಿಯಲ್ಲಿರುವ ಕಾರಣ ಕಳೆದ ವರ್ಷದಿಂದ ಈ ಸಮಸ್ಯೆ ಉಲ್ಬಣಗೊಂಡಿದೆ.
ಪ್ರತಿದಿನ 1 ಕಿ.ಮೀ ಗಿಂತ ಹೆಚ್ಚು ಜಾಮ್‌ಗೆ ಕಾರಣವಾಗುತ್ತದೆ. ಪೊಲೀಸ್ ಉಪ ಆಯುಕ್ತ (ಸಂಚಾರ-ಉತ್ತರ) ಸಚಿನ್ ಘೋರ್ಪಡೆ ಮಾತನಾಡಿ, ತಡರಾತ್ರಿ ಕೆಂಪಾಪುರ ಬಸ್ ನಿಲ್ದಾಣದಲ್ಲಿ ಬಸ್‌ಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ ಎಂದು ಪೊಲೀಸರಿಗೆ ತಿಳಿದಿದೆ. ಕೊಡಿಗೇಹಳ್ಳಿ ಗೇಟ್, ಕೋಗಿಲು ಕ್ರಾಸ್, ಎನ್‌ಇಎಸ್ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ