Waqf Bill: ವಕ್ಫ್​ ತಿದ್ದುಪಡಿ ಮಸೂದೆಗೆ ಜೆಪಿಸಿ ಅನುಮೋದನೆ, ಎನ್​ಡಿಎಯ 14 ತಿದ್ದುಪಡಿಗಳಿಗೆ ಅಂಗೀಕಾರ

ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸೋಮವಾರ (ಜನವರಿ 27) ಮಸೂದೆಯನ್ನು ಅಂಗೀಕರಿಸಿತು. ಒಂದು ತಿಂಗಳಿನಿಂದ ವಕ್ಫ್ ಮಸೂದೆಯ ಬಗ್ಗೆ ಚರ್ಚೆ ನಡೆಸುತ್ತಿರುವ ಸಂಸತ್ತಿನ ಜಂಟಿ ಸಮಿತಿಯು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸದಸ್ಯರು ಪ್ರಸ್ತಾಪಿಸಿದ ಎಲ್ಲಾ ತಿದ್ದುಪಡಿಗಳನ್ನು ಅಂಗೀಕರಿಸಿದೆ . ಆದರೆ ವಿರೋಧ ಪಕ್ಷದ ಸದಸ್ಯರ ತಿದ್ದುಪಡಿ ಪ್ರಸ್ತಾಪಗಳನ್ನು ತಿರಸ್ಕರಿಸಲಾಯಿತು

Waqf Bill: ವಕ್ಫ್​ ತಿದ್ದುಪಡಿ ಮಸೂದೆಗೆ ಜೆಪಿಸಿ ಅನುಮೋದನೆ, ಎನ್​ಡಿಎಯ 14 ತಿದ್ದುಪಡಿಗಳಿಗೆ ಅಂಗೀಕಾರ
ಜೆಪಿಸಿ

Updated on: Jan 27, 2025 | 2:41 PM

ವಕ್ಫ್​ ತಿದ್ದುಪಡಿ  ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸೋಮವಾರ (ಜನವರಿ 27) ಅಂಗೀಕರಿಸಿತು. ಒಂದು ತಿಂಗಳಿನಿಂದ ವಕ್ಫ್ ಮಸೂದೆಯ ಬಗ್ಗೆ ಚರ್ಚೆ ನಡೆಸುತ್ತಿರುವ ಸಂಸತ್ತಿನ ಜಂಟಿ ಸಮಿತಿಯು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸದಸ್ಯರು ಪ್ರಸ್ತಾಪಿಸಿದ ಎಲ್ಲಾ ತಿದ್ದುಪಡಿಗಳನ್ನು ಅಂಗೀಕರಿಸಿದೆ . ಆದರೆ ವಿರೋಧ ಪಕ್ಷದ ಸದಸ್ಯರ ತಿದ್ದುಪಡಿ ಪ್ರಸ್ತಾಪಗಳನ್ನು ತಿರಸ್ಕರಿಸಲಾಯಿತು.

ಸಮಿತಿಯು ಅಂಗೀಕರಿಸಿದ ತಿದ್ದುಪಡಿಗಳು ಕಾನೂನು ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯಾಗುತ್ತವೆ ಎಂದು ಸಮಿತಿಯ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಆದರೆ, ಪ್ರತಿಪಕ್ಷ ಸಂಸದರು ಸಭೆಯ ಕಲಾಪವನ್ನು ಖಂಡಿಸಿದರು. ಪಾಲ್ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬುಡಮೇಲು ಮಾಡಿದ್ದಾರೆ ಎಂದು ಆರೋಪಿಸಿದರು.

ಇದೊಂದು ಹಾಸ್ಯಾಸ್ಪದ ಕಸರತ್ತು, ನಮ್ಮ ಅಭಿಪ್ರಾಯಗಳನ್ನು ಕೇಳಲಿಲ್ಲ, ಪಾಲ್ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸಿದ್ದಾರೆ. ಪಾಲ್ ಆರೋಪಗಳನ್ನು ತಿರಸ್ಕರಿಸಿದರು, ಸಂಪೂರ್ಣ ಪ್ರಕ್ರಿಯೆಯು ಪ್ರಜಾಪ್ರಭುತ್ವವಾಗಿದೆ ಮತ್ತು ಬಹುಮತದ ಅಭಿಪ್ರಾಯವನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.

 

ಮಾಹಿತಿ ಶೀಘ್ರ ಅಪ್​ಡೇಟ್ ಆಗಲಿದೆ