Ayodhya Ram Mandir: ಶ್ರೀ ರಾಮನಿಗೆ ಜಲಾಭಿಷೇಕ: ಅಯೋಧ್ಯೆಗೆ ಆಗಮಿಸಿದ 155 ರಾಷ್ಟ್ರಗಳ ನದಿಗಳ ನೀರು

ಉಜ್ಬೇಕಿಸ್ತಾನ್, ಪಾಕಿಸ್ತಾನ, ಚೀನಾ ಸೇರಿದಂತೆ ವಿವಿಧ ದೇಶಗಳ 155 ನದಿಗಳ ನೀರು ಗುರುವಾರ (ಏಪ್ರಿಲ್ 20) ಬೆಳಗ್ಗೆ ಅಯೋಧ್ಯೆಗೆ ತಲುಪಿದೆ.

Ayodhya Ram Mandir: ಶ್ರೀ ರಾಮನಿಗೆ ಜಲಾಭಿಷೇಕ: ಅಯೋಧ್ಯೆಗೆ ಆಗಮಿಸಿದ 155 ರಾಷ್ಟ್ರಗಳ ನದಿಗಳ ನೀರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ನಯನಾ ಎಸ್​ಪಿ

Updated on:Apr 22, 2023 | 10:37 AM

ಅಯೋಧ್ಯೆ: ಉಜ್ಬೇಕಿಸ್ತಾನ್, ಪಾಕಿಸ್ತಾನ, ಚೀನಾ ಸೇರಿದಂತೆ ವಿವಿಧ ದೇಶಗಳ 155 ನದಿಗಳ ನೀರು (River water) ಗುರುವಾರ (April 20) ಬೆಳಗ್ಗೆ ಅಯೋಧ್ಯೆಗೆ ತಲುಪಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಅವರು ಏಪ್ರಿಲ್ 23 ರಂದು ಈ ನದಿಗಳ ನೀರಿನಿಂದ ಅಯೋಧ್ಯೆಯ (Ayodhya) ಶ್ರೀ ರಾಮನಿಗೆ ‘ಜಲಾಭಿಷೇಕ’ ಮಾಡಲಿದ್ದಾರೆ. ದೆಹಲಿಯ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ, ನೀರು ಸಂಗ್ರಹದ ಹಿಂದಿರುವ ವ್ಯಕ್ತಿ ವಿಜಯ್ ಜಾಲಿ, ಅಂಟಾರ್ಕ್ಟಿಕಾದಿಂದ ಕೂಡ ನೀರನ್ನು ತರಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ತಾಂಜಾನಿಯಾ, ನೈಜೀರಿಯಾ, ಅಮೆರಿಕ, ಫ್ರಾನ್ಸ್, ಜರ್ಮನಿ, ಬ್ರಿಟನ್, ನೇಪಾಳ, ಭೂತಾನ್, ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶದಂತಹ ದೇಶಗಾಲ ನದಿಯ ನೀರಿನಿಂದ ನಾಳೆ (April 23) ಅಯೋಧ್ಯೆಯಲ್ಲಿ ರಾಮನಿಗೆ ಜಲಾಭಿಷೇಕ ನಡೆಯಲಿದೆ. ಬಹುತೇಕ ದುರ್ಗಮವಾಗಿರುವ ಅಂಟಾರ್ಟಿಕಾದಿಂದ ನೀರು ತರಲಾಗಿದೆ ಎಂದು ಜಾಲಿ ಹೇಳಿದರು. ಅಯೋಧ್ಯೆಯ ಮಣಿರಾಮ್ ದಾಸ್‌ ಚಾವ್ನಿ ಆಡಿಟೋರಿಯಂನಲ್ಲಿ ಏಪ್ರಿಲ್ 23 ರಂದು ಆಯೋಜಿಸಲಾಗಿರುವ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಿಎಂ ಯೋಗಿ ತಂಡದಿಂದ ಜಲ ಕಲಶವನ್ನು ಪಡೆದ ನಂತರ ‘ಜಲ ಕಲಶ’ಕ್ಕೆ ಪೂಜೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಕಾಶಿ ವಿಶ್ವನಾಥ ಮಾದರಿಯಲ್ಲಿ ಕಾಮಾಖ್ಯ ದೇವಾಲಯ ಕಾರಿಡಾರ್‌ ಪ್ರಧಾನಿ ಮೋದಿ ಶ್ಲಾಘನೆ

ಪ್ರಪಂಚದಾದ್ಯಂತದ ದೇಶಗಳಿಂದ ತರಲಾದ ನೀರಿನಲ್ಲಿ ಆ ದೇಶಗಳ ಧ್ವಜಗಳು, ಅವುಗಳ ಹೆಸರುಗಳು ಮತ್ತು ನದಿಗಳ ಹೆಸರುಗಳನ್ನು ಹೊಂದಿರುವ ಸ್ಟಿಕ್ಕರ್‌ಗಳನ್ನು ಲಗತ್ತಿಸಲಾಗಿದೆ. ಹಲವು ದೇಶಗಳ ರಾಯಭಾರಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಾಕಿಸ್ತಾನದ ನೀರನ್ನು ಮೊದಲು ಪಾಕಿಸ್ತಾನದ ಹಿಂದೂಗಳು ದುಬೈಗೆ ಕಳುಹಿಸಿದರು ಮತ್ತು ನಂತರ ಅದನ್ನು ದುಬೈನಿಂದ ದೆಹಲಿಗೆ ತರಲಾಯಿತು, ಅಲ್ಲಿಂದ ಜಾಲಿ ಅವರು ಅದನ್ನು ಅಯೋಧ್ಯೆಗೆ ತರಿಸಿದ್ದಾರೆ. ಪಾಕಿಸ್ತಾನವಲ್ಲದೆ, ಸುರಿನಾಮ್, ಉಕ್ರೇನ್, ರಷ್ಯಾ, ಕಜಕಿಸ್ತಾನ್, ಕೆನಡಾ ಮತ್ತು ಟಿಬೆಟ್ ಸೇರಿದಂತೆ ಹಲವು ದೇಶಗಳ ನದಿಗಳಿಂದಲೂ ನೀರು ಬಂದಿದೆ.

Published On - 10:26 am, Sat, 22 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ