WAVES 2025: ಮೇ 1ರಂದು ಮುಂಬೈನಲ್ಲಿ ಮೊದಲ ವೇವ್ಸ್​ ಶೃಂಗಸಭೆ; ಏನಿದರ ವಿಶೇಷತೆ?

WAVE Summit: ಶುಕ್ರವಾರ ರಾತ್ರಿ ಚಿತ್ರರಂಗ, ಉದ್ಯಮ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳ ಗಣ್ಯರು ಹಾಗೂ ಸೆಲೆಬ್ರಿಟಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಮೊದಲ ವಿಶ್ವ ಆಡಿಯೋ ವಿಜುವಲ್ ಮನರಂಜನಾ ಶೃಂಗಸಭೆ (ವೇವ್ಸ್​ ಸಮ್ಮಿಟ್​) ಕುರಿತು ಚರ್ಚಿಸಿದ್ದರು. ಈ ಶೃಂಗಸಭೆ ಭವಿಷ್ಯದ ಯೋಜನೆಗಳು, ಹೊಸ ಆವಿಷ್ಕಾರ, ಕೈಗಾರಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶವನ್ನು ಹೊಂದಿದೆ.

WAVES 2025: ಮೇ 1ರಂದು ಮುಂಬೈನಲ್ಲಿ ಮೊದಲ ವೇವ್ಸ್​ ಶೃಂಗಸಭೆ; ಏನಿದರ ವಿಶೇಷತೆ?
Pm Modi Interaction With Celebrities

Updated on: Feb 08, 2025 | 9:21 PM

ನವದೆಹಲಿ: ಮುಂಬೈನಲ್ಲಿ ಮೇ 1ರಂದು ಮೊದಲ ವೇವ್ಸ್ ಶೃಂಗಸಭೆ (ವಿಶ್ವ ಆಡಿಯೋ ವಿಷುವಲ್ ಎಂಟರ್​ಟೈನ್ಮೆಂಟ್ ಸಮ್ಮಿಟ್) ನಡೆಯಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಭಾರತವು ವಿಶ್ವದ ಸೃಜನಶೀಲ ಶಕ್ತಿ ಕೇಂದ್ರವಾಗಲು ಅಡಿಪಾಯ ಹಾಕುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಲಹಾ ಮಂಡಳಿಯ ಸ್ಪೂರ್ತಿದಾಯಕ ಸಭೆಯ ನಂತರ ಮೋದಿಯವರು ಮೊದಲ ವಿಶ್ವ ಆಡಿಯೋ ವಿಷುಯಲ್ ಮನರಂಜನಾ ಶೃಂಗಸಭೆ (WAVES 2025)ಯನ್ನು ಮೇ 1ರಂದು ಮುಂಬೈನಲ್ಲಿ ಆಯೋಜಿಸಲು ನಿರ್ಧರಿಸಿದ್ದಾರೆ. ಇದು ಭಾರತವನ್ನು ಜಾಗತಿಕ ವಿಷಯ ಕೇಂದ್ರವನ್ನಾಗಿ ಮಾಡಲು ಸಜ್ಜಾಗುತ್ತಿದೆ ಎಂದಿದ್ದಾರೆ.

ಈ ಶೃಂಗಸಭೆಯು ವಿಶ್ವದ ಉನ್ನತ ಮಾಧ್ಯಮ ಸಿಇಒಗಳು, ಮನರಂಜನಾ ಐಕಾನ್‌ಗಳು, ಸೆಲೆಬ್ರಿಟಿಗಳು ಮತ್ತು ಜಗತ್ತಿನಾದ್ಯಂತದ ಸೃಜನಶೀಲ ಮನಸ್ಸುಗಳನ್ನು ಒಟ್ಟುಗೂಡಿಸುತ್ತದೆ. ಹಿಂದೆಂದಿಗಿಂತಲೂ ಉತ್ತಮವಾಗಿ ಮನರಂಜನೆ, ಸೃಜನಶೀಲತೆ ಮತ್ತು ಸಂಸ್ಕೃತಿಯನ್ನು ಒಗ್ಗೂಡಿಸುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: WAVES Summit: ವೇವ್ಸ್ ಶೃಂಗಸಭೆ, ಗಣ್ಯರೊಂದಿಗೆ ಸಂವಾದದ ಬಳಿಕ ಪ್ರಧಾನಿ ಮೋದಿ ಹೇಳಿದ್ದೇನು? ಇಲ್ಲಿದೆ ವಿವರ

ಶುಕ್ರವಾರ ರಾತ್ರಿ ವಿವಿಧ ಕ್ಷೇತ್ರಗಳ ಗಣ್ಯರ ಜೊತೆ ವೇವ್ಸ್ ಸಮ್ಮಿಟ್ ಕುರಿತು ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದರು. ಈ ಸಭೆಯಲ್ಲಿ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಹೇಮಾ ಮಾಲಿನಿ, ಅನಿಲ್ ಕಪೂರ್, ಅಕ್ಷಯ್ ಕುಮಾರ್, ರಜನಿಕಾಂತ್, ಚಿರಂಜೀವಿ, ಮುಖೇಶ್ ಅಂಬಾನಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.


WAVES ಶೃಂಗಸಭೆಯನ್ನು ಸರ್ಕಾರವು ಆರ್ಥಿಕ ವಲಯಕ್ಕೆ ದಾವೋಸ್‌ನಂತೆಯೇ ಮನರಂಜನಾ ವಲಯಕ್ಕೆ ಭಾರತದ ಜಾಗತಿಕ ಕಾರ್ಯಕ್ರಮವಾಗಿ ಇರಿಸುತ್ತಿದೆ. ಭಾರತ ಮತ್ತು ಪ್ರಪಂಚದ ಉನ್ನತ ವ್ಯಕ್ತಿಗಳು WAVES ಶೃಂಗಸಭೆಯ ಸಲಹಾ ಮಂಡಳಿಯ ಭಾಗವಾಗಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ವೇಗದ ಅಭಿವೃದ್ಧಿ; ಗೆಲುವಿನ ಬಳಿಕ ಪ್ರಧಾನಿ ಮೋದಿ ಭರವಸೆ

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದ ಪ್ರಧಾನಿ ಮೋದಿ, “ಮನರಂಜನೆ, ಸೃಜನಶೀಲತೆ ಮತ್ತು ಸಂಸ್ಕೃತಿಯ ಜಗತ್ತನ್ನು ಒಟ್ಟುಗೂಡಿಸುವ ಜಾಗತಿಕ ಶೃಂಗಸಭೆಯಾದ WAVES ಸಲಹಾ ಮಂಡಳಿಯ ಸಭೆಯನ್ನು ನಡೆಸಲಾಯಿತು. ಸಲಹಾ ಮಂಡಳಿಯ ಸದಸ್ಯರು ಜೀವನದ ವಿವಿಧ ಹಂತಗಳ ಗಣ್ಯ ವ್ಯಕ್ತಿಗಳಾಗಿದ್ದು, ಅವರು ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಭಾರತವನ್ನು ಜಾಗತಿಕ ಮನರಂಜನಾ ಕೇಂದ್ರವನ್ನಾಗಿ ಮಾಡಲು ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸುವುದು ಹೇಗೆ ಎಂಬುದರ ಕುರಿತು ಅಮೂಲ್ಯವಾದ ಸಲಹೆಗಳನ್ನು ಹಂಚಿಕೊಂಡರು” ಎಂದು ಅವರು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ