ವಿಡಿಯೋ ವೈರಲ್: ಇತ್ತೀಚೆಗೆ ಊಟಿಗೆ ಭೇಟಿ ನೀಡಿದ್ದ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಏನು ಮಾಡಿದರು ನೋಡಿ!

Rahul Gandhi: ಇತ್ತೀಚೆಗೆ ಊಟಿಗೆ ಭೇಟಿ ನೀಡಿದ್ದ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಅವರು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಹಿಳೆಯರಿಂದರೊಂದಿಗೆ ಚಾಕಲೇಟ್ ಮಾಡುವುದ ಕಲಿತೆ. ಫ್ಯಾಕ್ಟರಿಯಲ್ಲಿ ಚಾಕಲೇಟ್ ತಯಾರಿಸುವ ಪ್ರಕ್ರಿಯೆಯನ್ನು ಆದ್ಯಂತವಾಗಿ ಕಲಿತೆ. ಮೇಲಾಗಿ, ಆ ಮಹಿಳೆಯರಿಗೆ ಸರಿಸಮಾನವಾಗಿ ನಿಂತು, ಚಾಕಲೇಟ್ ತಯಾರಿಸಿದೆ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.

ವಿಡಿಯೋ ವೈರಲ್: ಇತ್ತೀಚೆಗೆ ಊಟಿಗೆ ಭೇಟಿ ನೀಡಿದ್ದ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಏನು ಮಾಡಿದರು ನೋಡಿ!
ಊಟಿಗೆ ಭೇಟಿ ನೀಡಿದ್ದ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ
Follow us
ಸಾಧು ಶ್ರೀನಾಥ್​
|

Updated on:Aug 28, 2023 | 9:11 AM

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ವಯನಾಡ್​ ಸಂಸದ ರಾಹುಲ್ ಗಾಂಧಿ ಕೆಲ ಸಮಯದಿಂದ ಜನರೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸುತ್ತಿದ್ದಾರೆ. ಅವರು ಹೆಚ್ಚಾಗಿ ಜನ ಸಂಪರ್ಕ ಪ್ರವಾಸಗಳಲ್ಲಿ ನಿರತರಾಗಿದ್ದಾರೆ ಎಂದು ಹೇಳಬಹುದು. ಸ್ಥಳೀಯ ಜನರೊಂದಿಗೆ ಆತ್ಮೀಯವಾಗಿ ಸಡಗರದಿಂದ ಅವರು ಬೆರೆಯುತ್ತಾರೆ. ಇತ್ತೀಚೆಗೆ ಅವರು ಊಟಿಗೆ ತೆರಳಿದ್ದರು. ವಯನಾಡಿಗೆ ಹೋಗುವಾಗ ದಾರಿಯಲ್ಲಿ ಊಟಿಯಲ್ಲಿರುವ (Nilgiris, Ooty) ಚಾಕೊಲೇಟ್ ಫ್ಯಾಕ್ಟರಿಗೆ (Chocolate) ಭೇಟಿ ಮಾಡಿದ್ದಾರೆ. ಅಲ್ಲಿರುವ ಚಾಕೊಲೇಟ್ ಕಾರ್ಖಾನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅಲ್ಲಿನ ಕಾರ್ಮಿಕರೊಂದಿಗೆ ಬೆರೆತು, ಚಾಕಲೇಟ್ ತಯಾರಿಸುವುದನ್ನು ಕಲಿತುಕೊಂಡರು. ಹೌದು, ಸದಾ ರಾಜಕೀಯದಲ್ಲಿ ಬ್ಯುಸಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಊಟಿಯಲ್ಲಿ ಸದ್ದು ಮಾಡಿದ್ದಾರೆ.

ಚಾಕಲೇಟ್ ಫ್ಯಾಕ್ಟರಿ ಯಶಸ್ವಿಯಾಗಿ ನಡೆಯುತ್ತಿದ್ದು, ಅಲ್ಲಿರುವ ಕಾರ್ಮಿಕರೆಲ್ಲರೂ ಮಹಿಳೆಯರೇ ಎಂಬುದು ರಾಹುಲ್ ಗಾಂಧಿ ತಿಳಿದುಕೊಂಡರು. ಅದಲ್ಲದೆ, ಅವರು ಅಲ್ಲಿನ ಮಹಿಳಾ ಕಾರ್ಮಿಕರನ್ನು ಹೊಗಳಿದರು. ಆ ಕಾರ್ಖಾನೆಯಲ್ಲಿ ಸುಮಾರು 70 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಚಾಕಲೇಟ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿರುವ ಚಾಕಲೇಟ್ ರುಚಿ ನೋಡಿದ ರಾಹುಲ್ ಗಾಂಧಿ ವ್ಹಾವ್ ಎಂದು ಉದ್ಘಾರ ತೆಗೆದಿದ್ದಾರೆ. ಈ ವಿಡಿಯೋವನ್ನು ಸ್ವತಃ ರಾಹುಲ್ ಗಾಂಧಿ ಅವರು ಚಾಕೊಲೇಟ್ ಫ್ಯಾಕ್ಟರಿಯಲ್ಲಿದ್ದಾಗ ಶೇರ್ ಮಾಡಿದ್ದಾರೆ.

ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಹಿಳೆಯರಿಂದರೊಂದಿಗೆ ಚಾಕಲೇಟ್ ಮಾಡುವುದ ಕಲಿತೆ. ಫ್ಯಾಕ್ಟರಿಯಲ್ಲಿ ಚಾಕಲೇಟ್ ತಯಾರಿಸುವ ಪ್ರಕ್ರಿಯೆಯನ್ನು ಆದ್ಯಂತವಾಗಿ ಕಲಿತೆ. ಮೇಲಾಗಿ, ಆ ಮಹಿಳೆಯರಿಗೆ ಸರಿಸಮಾನವಾಗಿ ನಿಂತು, ಚಾಕಲೇಟ್ ತಯಾರಿಸಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಹೇಳಿದ್ದಾರೆ.

ಆಗ ಈ ಕಾರ್ಖಾನೆ ತಯಾರಿಸುವ ಹೋಂ ಮೇಡ್​​ ಚಾಕಲೇಟ್ ಎಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ ಎಂದು ಕಾರ್ಖಾನೆ ಮಾಲೀಕರನ್ನು ರಾಹುಲ್ ಕೇಳಿ ತಿಳಿದುಕೊಂಡರು. ಶೇ. 18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ ಎಂದು ತಿಳಿದ ರಾಹುಲ್, ಈ ಸಮಸ್ಯೆ ಕೇವಲ ನಿಮ್ಮದಲ್ಲ, ಇಡೀ ದೇಶಕ್ಕೆ ಇದೆ ಎಂದು ಹೇಳಿದರು. ಬಳಿಕ ರಾಹುಲ್ ಕಾರ್ಮಿಕರೊಬ್ಬರ ಮಗುವಿಗೆ ಆಟೋಗ್ರಾಫ್ ನೀಡಿ, ಫೋಟೋ ತೆಗೆಸಿಕೊಂಡರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:10 am, Mon, 28 August 23

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?