ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗಕ್ಕೆ ಅವಕಾಶ; ಇರಾನ್ ರಾಯಭಾರಿ ಮಾಹಿತಿ

ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಅವರು ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮಾರ್ಗವನ್ನು ಪಡೆಯಬಹುದು ಎಂದು ಸೂಚಿಸಿದ್ದಾರೆ. ಅವರು ಭಾರತವನ್ನು ಇರಾನ್​ನ ಸ್ನೇಹಿತ ಎಂದು ಕರೆದಿದ್ದಾರೆ. ಪರ್ಷಿಯನ್ ಕೊಲ್ಲಿಯಲ್ಲಿನ ಉದ್ವಿಗ್ನತೆಯ ನಡುವೆ ಎರಡೂ ದೇಶಗಳ ನಡುವಿನ ಸಮಾನ ಹಿತಾಸಕ್ತಿಗಳ ಬಗ್ಗೆ ಅವರು ಒತ್ತಿ ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗಕ್ಕೆ ಅವಕಾಶ; ಇರಾನ್ ರಾಯಭಾರಿ ಮಾಹಿತಿ
Hormuz Strait

Updated on: Mar 13, 2026 | 8:26 PM

ನವದೆಹಲಿ, ಮಾರ್ಚ್ 13: ಪರ್ಷಿಯನ್ ಕೊಲ್ಲಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಮುದ್ರದ ಭದ್ರತೆಯ ಬಗೆಗಿನ ಕಳವಳಗಳ ನಡುವೆ, ಭಾರತದಲ್ಲಿನ ಇರಾನ್ (Iran War) ರಾಯಭಾರಿ ಮೊಹಮ್ಮದ್ ಫಥಾಲಿ ಅವರು ಜಾಗತಿಕ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ ಸುರಕ್ಷಿತ ಮಾರ್ಗವನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇರಾನ್ ರಾಯಭಾರಿ ಫಥಾಲಿ, ಭಾರತ ನಮ್ಮ ಸ್ನೇಹಿತ. ಜಲಮಾರ್ಗದ ಮೂಲಕ ಭಾರತದ ಪ್ರವೇಶವನ್ನು ಖಚಿತಪಡಿಸುವ ಬೆಳವಣಿಗೆಗಳು ಶೀಘ್ರದಲ್ಲೇ ಹೊರಹೊಮ್ಮಬಹುದು ಎಂದು ಸೂಚಿಸಿದ್ದಾರೆ.

ಪರ್ಷಿಯನ್ ಕೊಲ್ಲಿಯನ್ನು ಜಾಗತಿಕ ಮಾರುಕಟ್ಟೆಗಳಿಗೆ ಸಂಪರ್ಕಿಸುವ ಕಿರಿದಾದ ಕಾರಿಡಾರ್ ಮೂಲಕ ಹಡಗು ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸಮಯದಲ್ಲಿ ಈ ಹೇಳಿಕೆಗಳು ಬಂದಿವೆ. ‘ಭಾರತ ಮತ್ತು ಇರಾನ್ ಸಾಮಾನ್ಯ ಹಿತಾಸಕ್ತಿಗಳನ್ನು ಹಂಚಿಕೊಳ್ಳುತ್ತವೆ’ ಎಂದು ಅವರು ಹೇಳಿದ್ದಾರೆ. ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಾಗಲು ಸಾಧ್ಯವಾಗುತ್ತದೆಯೇ ಎಂದು ನೇರವಾಗಿ ಕೇಳಿದಾಗ, ಈ ಬಗ್ಗೆ ಪಾಸಿಟಿವ್ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ ಎಂದು ರಾಯಭಾರಿ ಸೂಚಿಸಿದ್ದಾರೆ.

ಇದನ್ನೂ ಓದಿ: ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಮೇಲೆ 2 ಬಾರಿ ಮಾರಣಾಂತಿಕ ದಾಳಿ; ಇರಾನ್ ಸಂಸದ ಮಾಹಿತಿ

ಭಾರತ ಮತ್ತು ಇರಾನ್ ನಡುವಿನ ವಿಶಾಲ ಸಂಬಂಧದ ಬಗ್ಗೆಯೂ ರಾಯಭಾರಿ ಮಾತನಾಡಿದ್ದಾರೆ. ಇದು ಸ್ನೇಹ ಮತ್ತು ಸಹಕಾರದ ಮೇಲೆ ನಿರ್ಮಿಸಲಾದ ಸಂಬಂಧ. ಇರಾನ್ ಮತ್ತು ಭಾರತ ಸ್ನೇಹಿತರು. ನಮಗೆ ಕಾಮನ್ ಹಿತಾಸಕ್ತಿಗಳಿವೆ. ಕಷ್ಟದ ಅವಧಿಯಲ್ಲಿ ಇರಾನ್ ಅನ್ನು ಭಾರತ ಸದಾ ಬೆಂಬಲಿಸುತ್ತದೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us