AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೆಷ್ಟು ದಿನ ಮುಂದುವರಿಯಲಿದೆ Delhi Chalo?-ರೈತ ನಾಯಕರ ನಿಲುವೇನು..?

ದೆಹಲಿ ಚಲೋ ಚಳುವಳಿ 31ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರ ಮತ್ತು ರೈತ ಒಕ್ಕೂಟಗಳ ನಿಲುವು ಗಮನಿಸಿದರೆ ಚಳುವಳಿ ಸುದೀರ್ಘ ಕಾಲ ಮುಂದುವರೆಯುವ ನಿರೀಕ್ಷೆ ಕಂಡುಬಂದಿದೆ

ಇನ್ನೆಷ್ಟು ದಿನ ಮುಂದುವರಿಯಲಿದೆ Delhi Chalo?-ರೈತ ನಾಯಕರ ನಿಲುವೇನು..?
ದೆಹಲಿಯ ಬುರಾರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಮಹಿಳೆಯರು
guruganesh bhat
| Updated By: Lakshmi Hegde|

Updated on:Dec 26, 2020 | 4:53 PM

Share

ದೆಹಲಿ: ಪ್ರಧಾನಿ ಮತ್ತು ಗೃಹ ಸಚಿವರ ಇತ್ತೀಚಿನ ಭಾಷಣಗಳನ್ನು ಕೇಳಿದ ನಂತರ ಕೇಂದ್ರ ಸರ್ಕಾರಕ್ಕೆ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಮನಸಿಲ್ಲ ಎಂದು ಅರಿವಾಗಿದೆ . ಆದರೂ, ನಮ್ಮ ಬೇಡಿಕೆಗಳು ಈಡೇರುವವರೆಗೂ ಚಳುವಳಿಯನ್ನು ಮುಂದುವರಿಸುತ್ತೇವೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ  ಸಮನ್ವಯ  ಸಮಿತಿ ಸದಸ್ಯ ಜಗಮೋಹನ್ ಸಿಂಗ್ ದೃಢಪಡಿಸಿದ್ದಾರೆ.

ಸರ್ಕಾರ ಮೊದಲು ಯಾವುದೇ ಚರ್ಚೆ ನಡೆಸದೇ ಕಾಯ್ದೆ ಜಾರಿಗೊಳಿಸಿತು. ನಂತರ ರೈತರ ಹಿತಕ್ಕಾಗಿ ಕಾಯ್ದೆಗಳನ್ನು ರೂಪಿಸಿದ್ದೇವೆ ಎಂದು ಘೋಷಿಸಿತು. ತಿದ್ದುಪಡಿಗಳನ್ನು ಜಾರಿಗೆ ತರುವ ಪ್ರಸ್ತಾಪ ನಮ್ಮೆದುರಿಗಿಟ್ಟಿತು. ಅಲ್ಲದೇ, ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ ಎಂದಿತು. ಈ ಪ್ರಕ್ರಿಯೆಯೇ ಸಂಶಯಾಸ್ಪದವಾಗಿದೆ ಎಂದಿರುವ ಅವರು, ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ದೆಹಲಿಯ ಗಡಿಗಳನ್ನು ತೊರೆಯುವುದಿಲ್ಲ. ಪ್ರಜಾಪ್ರಭುತ್ವ ವಿರೋಧಿ ಧೋರಣೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.

ರೈತ ಚಳುವಳಿಯನ್ನು ಸೇರಿರುವ ಕೇರಳದ ಮಾಜಿ ಶಾಸಕ ಪಿ.ಕೃಷ್ಣ ಪ್ರಸಾದ್, ನಾವು ಯಾವುದೇ ಹಣಕ್ಕಾ​ಗಿ ಹೋರಾಟ ನಡೆಸುತ್ತಿಲ್ಲ. ರೈತರ ಶ್ರಮಕ್ಕೆ ಮೋಸವಾಗದಂತೆ ಸಮರ್ಪಕ ನೀತಿ ರೂಪಿಸಲು ಬೇಡಿಕೆಯಿಟ್ಟಿದ್ದೇವೆ. ನಮ್ಮ ಆಗ್ರಹದಲ್ಲಿ ಪ್ರಾಮಾಣಿಕತೆಯಿರುವ ಕಾರಣ ಸುದೀರ್ಘ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋ ದಿ ಮತ್ತು ಕೃಷಿ ಸಚಿವ ನರಂದ್ರ ಸಿಂಗ್ ತೋಮರ್  ಹೇಳಿಕೆಗಳಲ್ಲಿ ಸಾಮ್ಯತೆಯೇ ತೋರುತ್ತಿಲ್ಲ. ಡಿಸೆಂಬರ್ 5ರಂದು ಯಾವುದೇ ಪಕ್ಷದ ಹಿತಕ್ಕೆ ಬಲಿಯಾಗದೇ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವುದನ್ನು ಕೃಷಿ ಸಚಿವರು ಶ್ಲಾಘಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ, ನಮ್ಮ ಚಳುವಳಿಯನ್ನು ವಿಪಕ್ಷಗಳು ದಾರಿ ತಪ್ಪಿಸಿವೆ ಎಂದು ಆರೋಪಿಸಿದ್ದಾರೆ. ಈ ಎರಡೂ ಹೇಳಿಕೆಗಳಲ್ಲಿ ದ್ವಂದ್ವ ಎದ್ದು ಕಾಣುತ್ತಿದೆ ಎಂದು ರೈತ ನಾಯಕರು ಟೀಕಿಸಿದ್ದಾರೆ.

Delhi Chalo ರೈತ ಸಮುದಾಯದಲ್ಲಿ ಒಡಕು ಮೂಡಿಸಿದ ನೂತನ ಕೃಷಿ ಕಾಯ್ದೆಗಳು

Published On - 4:52 pm, Sat, 26 December 20