AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂತನ ಕೃಷಿ ಕಾಯ್ದೆಗಳ ಪರ ಪ್ರಚಾರ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಪಂಜಾಬ್ ಬಿಜೆಪಿ ಘಟಕ..

ನೂತನ ಕೃಷಿ ಕಾಯ್ದೆಗಳ ಪರ ಪ್ರಚಾರಕ್ಕಾಗಿ ಪಂಜಾಬ್ ಬಿಜೆಪಿ ಘಟಕ ಪ್ರಕಟಿಸಿದ ಪೋಸ್ಟರ್​ಗಳಲ್ಲಿ ಹರ್​ದೀಪ್ ಸಿಂಗ್ ಅವರ ಚಿತ್ರಗಳನ್ನು ಬಳಸಿತ್ತು. ಆದರೆ, ‘ನಾನು ಕೃಷಿ ಕಾಯ್ದೆಗಳ ಪರವಿಲ್ಲ. ದೆಹಲಿ ಗಡಿಯಲ್ಲಿ ಚಳುವಳಿ ನಿರತನಾಗಿದ್ದೇನೆ ಎಂದು ಸ್ವತಃ ಹರ್​ದೀಪ್ ಸಿಂಗ್ ಅವರೇ ಸ್ಪಷ್ಟಪಡಿಸಿದ್ದಾರೆ.

ನೂತನ ಕೃಷಿ ಕಾಯ್ದೆಗಳ ಪರ ಪ್ರಚಾರ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಪಂಜಾಬ್ ಬಿಜೆಪಿ ಘಟಕ..
ಚಳುವಳಿ ನಿರತರ ಜೊತೆ ಹರ್​ಪ್ರೀತ್ ಸಿಂಗ್
guruganesh bhat
| Updated By: Lakshmi Hegde|

Updated on:Dec 26, 2020 | 5:30 PM

Share

ದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ನೂತನ ಕೃಷಿ ಕಾಯ್ದೆಗಳನ್ನು ಪರ ಪ್ರಚಾರ ಮಾಡುವ ಪ್ರಯತ್ನಕ್ಕೆ ಕೈಹಾಕಿದ ಪಂಜಾಬ್​ನ ಬಿಜೆಪಿ ಘಟಕ ಎಡವಟ್ಟು ಮಾಡಿಕೊಂಡಿದೆ. ಪ್ರಚಾರ ಮಾಡದಿದ್ದರೂ ಆಗ್ತಿತ್ತು, ಹೀಗೆ ಮಾಡಬಾರದಿತ್ತು ಎಂದು ಬಿಜೆಪಿಯ ಹಿರಿಯ ನಾಯಕರು ತಲೆ ಮೇಲೆ ಕೈ ಇಡುವಂಥ ಕೆಲಸ ಮಾಡಿದೆ..

ಅಷ್ಟಕ್ಕೂ ಪಂಜಾಬ್ ಬಿಜೆಪಿ ಮಾಡಿದ್ದೇನು? ನೂತನ ಕೃಷಿ ಕಾಯ್ದೆಗಳು ರೈತಪರವಾಗಿವೆ ಎಂದು ಬಿಂಬಿಸುವ ಪ್ರಯತ್ನವಾಗಿ ಪಂಜಾಬ್ ಬಿಜೆಪಿ ಘಟಕ ಪೋಸ್ಟರ್​ಗಳನ್ನು ತಯಾರಿಸಿತ್ತು. ಅವುಗಳಲ್ಲಿ ಪಂಜಾಬ್​ನ ವಿಶುವಲ್ ಸ್ಟೋರಿ ಟೆಲ್ಲರ್ ಹರ್​ಪ್ರೀತ್ ಸಿಂಗ್ ಅವರ ಚಿತ್ರ ಬಳಸಿದ್ದ ಬಿಜೆಪಿ ಘಟಕ, ‘ನೂತನ ಕೃಷಿ ಕಾಯ್ದೆಗಳಿಂದ ನನಗೆ ಯಾವ ತೊಂದರೆಯೂ ಇಲ್ಲ..ಕಾಯ್ದೆಗಳಿಂದ ನನಗೆ ಸಹಾಯವಾಗಿದೆ’ ಎಂಬ ಸಾಲುಗಳನ್ನು ಬರೆದಿತ್ತು. ‘ ವಿಪಕ್ಷಗಳು ರೈತ ಚಳುವಳಿಯ ದಾರಿ ತಪ್ಪಿಸುತ್ತಿವೆ..ಆದರೆ, ನನಗೆ ಕೃಷಿ ಕಾಯ್ದೆಗಳ ಪರವಾಗಿದ್ದೇನೆ’ ಎಂಬ ಅರ್ಥ ಹೊಮ್ಮುವಂತೆ ಬಿಂಬಿಸಿತ್ತು.

ಪಂಜಾಬ್ ಬಿಜೆಪಿ ಘಟಕದ ಫೇಸ್​ಬುಕ್ ಪೋಸ್ಟ್ ಮತ್ತು ಮೂಲ ಚಿತ್ರ

ಆದರೆ, ಹರ್​ಪ್ರೀತ್ ಸಿಂಗ್ ನೂತನ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟದಲ್ಲಿ ನಿರತರಾಗಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಸ್ಪಷ್ಟಪಡಿಸಿದ್ದು, ಸಿಂಗು ಗಡಿಯಲ್ಲಿ ನಡೆಯುತ್ತಿರುವ ಚಳುವಳಿ ನಿರತರ ಜೊತೆ ಟೆಂಟ್​ನಲ್ಲಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಸ್ವತಃ ಹರ್​ಪ್ರೀತ್ ಸಿಂಗ್, ಬಿಜೆಪಿಯು ತನ್ನ ಫೋಟೊವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.

ತಮ್ಮ ಗೆಳೆಯನೊಬ್ಬನ ಪ್ರಾಜೆಕ್ಟ್​ಗಾಗಿ ತೆಗೆದ ಫೋಟೋವನ್ನು 2015ರಲ್ಲಿ ಪೇಸ್​ಬುಕ್​ನಲ್ಲಿ ಹಾಕಿದ್ದೆ. ಬಿಜೆಪಿ ಅನುಮತಿ ಪಡೆಯದೇ, ನನ್ನ ಪೋಟೋವನ್ನು ಕೃಷಿ ಕಾಯ್ದೆಗಳ ಪರ ಇರುವಂತೆ ಬಿಂಬಿಸಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ, ಬಿಜೆಪಿಯ ಪಂಜಾಬ್ ಘಟಕಕ್ಕೆ ಲೀಗಲ್​ ನೋಟಿಸ್ ಕಳಿಸಿದ್ದಾಗಿ ಹೇಳಿದ್ದಾರೆ.

ಹರ್​ದೀಪ್ ಸಿಂಗ್ ಅವರ ಈ ಪ್ರತಿಕ್ರಿಯೆಯ ನಂತರ ಬಿಜೆಪಿ ಘಟಕ ತನ್ನ ಪೋಸ್ಟರ್​ನ್ನು ಬದಲಿಸಿ, ಸಾಂದರ್ಭಿಕ ಚಿತ್ರವೊಂದನ್ನು ಪೋಸ್ಟ್ ಮಾಡಿದೆ.

ಹರ್​ಪ್ರೀತ್ ಸಿಂಗ್

Published On - 5:27 pm, Sat, 26 December 20