ಅಸ್ಸಾಂ ಹೊರತಾಗಿ ಭಾರತೀಯ ಕಲೆ-ಸಂಸ್ಕೃತಿ ಪರಿಪೂರ್ಣವಾಗುವುದಿಲ್ಲ: ಅಮಿತ್ ಶಾ
ಬೋಡೊಲ್ಯಾಂಡ್ ಟೆರಿಟೋರಿಯಲ್ ಒಪ್ಪಂದ ಮಾಡುವ ಮೂಲಕ ಅಸ್ಸಾಂನಲ್ಲಿ ಶಾಂತಿ ಸ್ಥಾಪನೆಗೆ ಮೋದಿ ಕೆಲಸ ಮಾಡಿದ್ದಾರೆ. ಯುವಜನರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ.
ಗುವಹಾಟಿ: ರಾಜ್ಯದ ಭಾಷೆ, ಸಂಸ್ಕೃತಿಯನ್ನು ಬಲಪಡಿಸದೆ ದೇಶದ ಉನ್ನತಿ ಸಾಧ್ಯವಿಲ್ಲ ಎಂದು ಬಿಜೆಪಿ ನಂಬುತ್ತದೆ. ಅಸ್ಸಾಂ ಕಲೆ-ಸಂಸ್ಕೃತಿಯ ಹೊರತಾಗಿ ಭಾರತೀಯ ಕಲೆ-ಸಂಸ್ಕೃತಿಯು ಪರಿಪೂರ್ಣವಾಗುವುದಿಲ್ಲ ಎಂಲದು ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಹೇಳಿದರು.
ಅಸ್ಸಾಂನ ಇತಿಹಾಸ, ರಂಗಭೂಮಿ ಸಾಹಿತ್ಯ, ಕಲೆ ಹಾಗೂ ಕಾವ್ಯ ಕ್ಷೇತ್ರಕ್ಕೆ ಅದಮ್ಯ ಸೇವೆ ಸಲ್ಲಿಸಿರುವ ಆಚಾರ್ಯ ಶಂಕರ್ದೇವ್ರ ಜನ್ಮಸ್ಥಳಕ್ಕೆ ಕಾಂಗ್ರೆಸ್ ಏನೂ ಮಾಡಿಲ್ಲ. ಆದರೆ, ಬಿಜೆಪಿ ರಾಜ್ಯದ ಭಾಷೆ, ಸಂಸ್ಕೃತಿ, ಕಲೆಯನ್ನು ಅಭಿವೃದ್ಧಿಪಡಿಸುವುದನ್ನು ಬಯಸುತ್ತದೆ ಎಂದು ಈಶಾನ್ಯ ರಾಜ್ಯಗಳಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಕಾಮ್ರೂಪ್ನಲ್ಲಿ ಮಾತನಾಡಿದರು.
ಅಸ್ಸಾಂನಲ್ಲಿ 80ರ ದಶಕದ ಆರಂಭದಲ್ಲಿ ನಡೆದ ಘಟನೆಗಳಿಂದ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಅಸ್ಸಾಂ ಶಾಂತಿ ಕದಡಿದ್ದ ಆ ಸನ್ನಿವೇಶದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿತ್ತು. ಆ ಬಳಿಕ, ರಾಜ್ಯದ ಅಭಿವೃದ್ಧಿ ಆಗುತ್ತಿದೆ ಮತ್ತು ಮುಂದೆಯೂ ಆಗುತ್ತದೆ. ಆದರೆ, ಸೈದ್ಧಾಂತಿಕ ಬದಲಾವಣೆ ಕೂಡ ಮುಖ್ಯ ಎಂದು ಶಾ ಅಭಿಪ್ರಾಯಪಟ್ಟರು.
ಅಸ್ಸಾಂನಲ್ಲಿ ಈ ಹಿಂದಿನ ಕಾಲವೊಂದಿತ್ತು. ಆಗ ಈ ಪ್ರದೇಶದ (ಈಶಾನ್ಯ ರಾಜ್ಯಗಳ) ಪ್ರತ್ಯೇಕತಾವಾದಿಗಳು ಯುವಜನರ ಕೈಗೆ ಆಯುಧಗಳನ್ನು ಕೊಡುತ್ತಿದ್ದರು. ಆದರೆ, ಈಗ ಅಂಥಾ ಪರಿಸ್ಥಿತಿ ಇಲ್ಲ. ಯುವಜನರೂ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಹೊಸ ಉದ್ಯೋಗಗಳನ್ನು ಕಂಡುಕೊಂಡು ಜಾಗತಿಕವಾಗಿ, ಸ್ಪರ್ಧಾತ್ಮಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಅಸ್ಸಾಂ ಬಗೆಗೆ ಅಭಿಮಾನದ ಮಾತುಗಳನ್ನಾಡಿದರು.
ಬೋಡೊಲ್ಯಾಂಡ್ ಟೆರಿಟೋರಿಯಲ್ ಒಪ್ಪಂದ ಮಾಡುವ ಮೂಲಕ ಅಸ್ಸಾಂನಲ್ಲಿ ಶಾಂತಿ ಸ್ಥಾಪನೆಗೆ ಮೋದಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಬೋಡೊ ಯುವಕರು ಈಗ ಆಯುಧಗಳನ್ನು ತೊರೆದು ಸಮಾಜದಲ್ಲಿ ಸ್ಥಾನ ಕಂಡುಕೊಂಡಿದ್ದಾರೆ ಎಂದು ಹೇಳಿದರು.
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಂಥವರು ಮುಂದೆ ಬಂದು ಕೃಷಿ ಕಾಯ್ದೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸರ್ಕಾರದ ಜೊತೆಯಾಗಬೇಕು ಎಂದು ಅಮಿತ್ ಶಾ ಹೇಳಿದರು.
ತೆಲಂಗಾಣ, ಪಶ್ಚಿಮ ಬಂಗಾಳ ಬಳಿಕ ಅಮಿತ್ ಶಾ ಇದೀಗ ಈಶಾನ್ಯ ರಾಜ್ಯಗಳ ಕಡೆಗೆ ಮುಖಮಾಡಿದ್ದಾರೆ. ಅಸ್ಸಾಂ ಹಾಗೂ ಮಣಿಪುರದಲ್ಲಿ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಅಸ್ಸಾಂಗೆ ಭೇಟಿ ಕೊಟ್ಟಿರುವ ಅಮಿತ್ ಶಾ ಸಾರ್ವಜನಿಕ ಕಾರ್ಯಕ್ರಮಗಳು, ಸರ್ಕಾರಿ ಯೋಜನೆಗಳ ಶಂಕುಸ್ಥಾಪನೆ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಏಪ್ರಿಲ್ನಲ್ಲಿ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಭೇಟಿ ರಾಜಕೀಯ ಕಣದ ರಂಗೇರಿಸಿದೆ.
ಇಂದು, ಗುವಹಾಟಿಯ ಎರಡನೆಯ ವೈದ್ಯಕೀಯ ಕಾಲೇಜು, ಒಂಭತ್ತು ಕಾನೂನು ಕಾಲೇಜು ಹಾಗೂ ಬಟದ್ರವ ಠಾಣೆಗೆ ಕಾಮ್ರೂಪ್ನಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ರಾಜ್ಯ ಸಚಿವರು, ಡಿಜಿಪಿ ಮುಂತಾದ ಹಿರಿಯ ಅಧಿಕಾರಿಗಳ ಜೊತೆಗೆ ಸಭೆಯಲ್ಲಿ ಭಾಗವಹಿಸಿದರು.
Union Home Minister Amit Shah chaired a meeting with Assam CM Sarbananda Sonowal, State Minister Himanta Biswa Sarma, Chief Secretary, DGP and other senior officials of Assam to review the law and order situation of the State: Office of the Home Minister pic.twitter.com/K94nQslyzM
— ANI (@ANI) December 26, 2020
Assam: Union Home Minister Amit Shah lays foundation stone for second medical college in Guwahati, nine law colleges and for 'Batadrava Than', at an event in Kamrup. pic.twitter.com/WGyH0pGS3o
— ANI (@ANI) December 26, 2020
2021 ವಿಧಾನಸಭೆ ಚುನಾವಣೆವರೆಗೆ ಪ್ರತಿ ತಿಂಗಳು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಅಮಿತ್ ಶಾ
Published On - 8:31 pm, Sat, 26 December 20