ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಬಸ್ ಡ್ರೈವರ್ ಆದ ಮೂರು ಮಕ್ಕಳ ತಾಯಿ!
ಜಮ್ಮು-ಕಥುವಾ ಮಾರ್ಗದಲ್ಲಿ ಪೂಜಾ ಬಸ್ ಚಾಲನೆ ಮಾಡಿದ್ದಾರೆ. ಸಾಕಷ್ಟು ಪ್ರಯಾಣಿಕರು ಬಸ್ನಲ್ಲಿ ಕೂತಿದ್ದರು. ಇವರು ಬಸ್ ಚಲಾವಣೆ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಮ್ಮು: ಅವರ ಹೆಸರು ಪೂಜಾ ದೇವಿ. ಚಿಕ್ಕ ವಯಸ್ಸಿನಲ್ಲಿ ಸರಿಯಾದ ಶಿಕ್ಷಣ ಸಿಕ್ಕಿರಲಿಲ್ಲ. ಆದರೆ, ದೊಡ್ಡ ದೊಡ್ಡ ವಾಹನಗಳನ್ನು ಅನಾಯಾಸವಾಗಿ ಚಲಾಯಿಸುವ ಕಲೆ ಇವರಿಗೆ ಕರಗತವಾಗಿತ್ತು. ಈಗ ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಬಸ್ ಚಾಲಕಿಯಾಗಿ ಪೂಜಾ ದೇವಿ ನೇಮಕಗೊಂಡಿದ್ದಾರೆ.
ಜಮ್ಮು-ಕಥುವಾ ಮಾರ್ಗದಲ್ಲಿ ಪೂಜಾ ಬಸ್ ಚಾಲನೆ ಮಾಡಿದ್ದಾರೆ. ಸಾಕಷ್ಟು ಪ್ರಯಾಣಿಕರು ಬಸ್ನಲ್ಲಿ ಕೂತಿದ್ದರು. ಇವರು ಬಸ್ ಚಲಾವಣೆ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರು ಮೂರು ಮಕ್ಕಳ ತಾಯಿ. ತಾಯಿ ಬಸ್ ಓಡಿಸುವಾಗ ಓರ್ವ ಮಗ ಬಸ್ನಲ್ಲಿ ಇವರ ಜೊತೆ ಇದ್ದ.
ಪೂಜಾ ಬಡ ಕುಟುಂಬದಿಂದ ಬಂದವರು. ಹೀಗಾಗಿ ಶಿಕ್ಷಣ ಎಂಬುದು ಗಗನ ಕುಸುಮವಾಗಿತ್ತು. ಶಿಕ್ಷಣವಂತೂ ಸಿಕ್ಕಿಲ್ಲ. ಹೀಗಾಗಿ, ಬೇರೆ ಏನಾದರೂ ಮಾಡಬೇಕು ಎನ್ನುವ ಕನಸು ಇವರದ್ದಾಗಿತ್ತು. ಬಸ್ ಡ್ರೈವ್ ಮಾಡುವುದನ್ನು ಕಲಿತ ನಂತರ ಪೂಜಾ ಲೈಸೆನ್ಸ್ ಕೂಡ ಪಡೆದುಕೊಂಡಿದ್ದರು.
Proud to have from district #Kathua, #JammuAndKashmir, the first women bus driver Pooja Devi. pic.twitter.com/7wTMa272kC
— Dr Jitendra Singh (@DrJitendraSingh) December 25, 2020
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಪೂಜಾ, ನಾನು ಅನೇಕ ವರ್ಷಗಳಿಂದ ಬಸ್ ಚಾಲಕಿ ಆಗಬೇಕು ಎನ್ನುವ ಕನಸು ಕಂಡಿದ್ದೆ. ಆದರೆ, ಈಗ ಕನಸು ನನಸಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಗಂಡು-ಹೆಣ್ಣು ಭೇದ-ಭಾವ ಹೋಗಬೇಕು ಎನ್ನುವುದೇ ನನ್ನ ಉದ್ದೇಶ ಎಂದು ಅವರು ಹೇಳಿದ್ದಾರೆ.
Published On - 5:19 pm, Sat, 26 December 20