Delhi Chalo: ಡಿಸೆಂಬರ್ 29ರಂದು ಕೇಂದ್ರದ ಜೊತೆ ಸಭೆ ನಡೆಸಲಿರುವ ಸಂಯುಕ್ತ ಕಿಸಾನ್ ಮೋರ್ಚಾ
ಸಂಯುಕ್ತ ಕಿಸಾನ್ ಮೋರ್ಚಾ ಕೇಂದ್ರ ಸರ್ಕಾರದ ಜೊತೆ ಡಿಸೆಂಬರ್ 29 ರಂದು 11 ಗಂಟೆಗೆ ಸಭೆ ನಡೆಸಲು ತೀರ್ಮಾನಿಸಿದೆ.
ದೆಹಲಿ: ಕೇಂದ್ರ ಸರ್ಕಾರ ಜೊತೆ ಮಾತುಕತೆಗೆ ಸಂಯುಕ್ತ ಕಿಸಾನ್ ಮೋರ್ಚಾ ಸಮಯ ನಿಗದಿಪಡಿಸಿದೆ. ಡಿಸೆಂಬರ್ 29 ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರದ ಜತೆ ರೈತ ನಾಯಕರು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕೆಂದ್ರ ಸರ್ಕಾರದ ಮುಂದೆ ಕೆಲವು ಬೇಡಿಕೆಗಳನ್ನು ಇಡಲು ರೈತರು ನಿರ್ಧರಿಸಿದ್ದಾರೆ. ರೈತ ಒಕ್ಕೂಟಗಳ ಬಳಿಯೇ ಸಭೆಗೆ ಸಮಯ ನಿಗದಿಸಲು ಕೆಂದ್ರ ಸರ್ಕಾರ ವಿನಂತಿಸಿತ್ತು.
ರೈತ ನಾಯಕರು ಕೇಂದ್ರದ ಮುಂದಿಡಲಿರುವ ಬೇಡಿಕೆಗಳು 1. ಕೇಂದ್ರದ ಮೂರು ಕೃಷಿ ಕಾಯ್ದೆಗಳ ರದ್ದು 2. ರಾಷ್ಟ್ರೀಯ ಕೃಷಿ ಆಯೋಗದ ಶಿಫಾರಸಿನ ಪ್ರಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿಕೆಗೆ ಕಾನೂನು ಬದ್ಧ ಗ್ಯಾರಂಟಿ ನೀಡಿಕೆ. 3. NCR, ಸುತ್ತಲಿನ ಪ್ರದೇಶದ ವಾಯುಗುಣಮಟ್ಟ ನಿರ್ವಹಣೆಯ ಸುಗ್ರೀವಾಜ್ಞೆಗೆ ತಿದ್ದುಪಡಿ ಮಾಡಬೇಕು. ರೈತರಿಗೆ ಈ ಕಾಯ್ದೆಯಡಿ ದಂಡ ವಿಧಿಸಬಾರದು. 4. ರೈತರ ಹಿತ ರಕ್ಷಣೆಗೆ ವಿದ್ಯುತ್ ತಿದ್ದುಪಡಿ ಮಸೂದೆ 2020 ಕ್ಕೆ ತಿದ್ದುಪಡಿ ಮಾಡಬೇಕು.
ಈ ನಾಲ್ಕು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಬೇಕೆಂದು ರೈತ ಸಂಘಟನೆಗಳಿಂದ ಅಜೆಂಡಾ ನಿಗದಿಪಡಿಸಿಕೊಂಡಿವೆ. ಅಲ್ಲದೇ, ಕೇಂದ್ರ ಕೃಷಿ ಇಲಾಖೆಗೆ ಈ ಪತ್ರವನ್ನು ಸಂಯುಕ್ತ ಕಿಸಾನ್ ಮೋರ್ಚಾ ರವಾನಿಸಿದೆ. ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲು ಸಹ ರೈತ ನಾಯಕರು ಪಟ್ಟು ಹಿಡಿಯುವ ಎಲ್ಲಾ ಸಾಧ್ಯತೆಗಳಿವೆ.
NDA ಮೈತ್ರಿಕೂಟಕ್ಕೆ ಕಂಟಕವಾಗುತ್ತಿದೆ ಕೃಷಿ ಕಾಯ್ದೆ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರೀಯ ಲೋಕ್ತಾಂತ್ರಿಕ್ ಪಾರ್ಟಿ (ಆರ್ಎಲ್ಪಿ) ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಿಂದಲೇ ಹೊರಬಂದಿದೆ. ಹನುಮಾನ್ ಬೇನಿವಾಲ್ ರೈತ ವಿರೋಧಿ ಪಕ್ಷದ ಜೊತೆ ಮೈತ್ರಿ ಮುಂದುವರೆಸಲು ಸಾಧ್ಯವಿಲ್ಲ ಎಂದಿರುವ ರಾಷ್ಟ್ರೀಯ ಲೋಕ್ತಾಂತ್ರಿಕ್ ಪಾರ್ಟಿಯ ಮುಖ್ಯಸ್ಥ, ಸಂಸದ ಎನ್ಡಿಎ ಮೈತ್ಇಕೂಟದಿಂದ ಹೊರಬರುವುದಾಗಿ ತಿಳಿಸಿದ್ದಾರೆ. ಈ ಮೊದಲು ಶಿರೋಮಣಿ ಅಕಾಲಿದಳ ಪಕ್ಷ ಬಿಜೆಪಿಯ ಸಖ್ಯ ತೊರೆದಿತ್ತು.
Published On - 5:52 pm, Sat, 26 December 20