AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

West Bengal Elections 2021: ನಿನ್ನೆ 55 ನಿಮಿಷ ವಾಟ್ಸ್ಯಾಪ್​​ ಸ್ಥಗಿತವಾಗಿತ್ತು. ಆದ್ರೆ ಬಂಗಾಳದಲ್ಲಿ 55 ವರ್ಷದಿಂದ ಅಭಿವೃದ್ಧಿಯೇ ಸ್ಥಗಿವಾಗಿದೆ: ಮೋದಿ

PM Narendra Modi in West Bengal: ಇನ್ನೇನು ಒಂದೇ ವಾರದಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ಮೊದಲ ಹಂತದ ವಿಧಾನಸಭಾ ಚುನಾವಣೆಯ ಸಲುವಾಗಿ ಪ್ರಚಾರ ನಡೆಸಲು ಆಗಮಿಸಿರುವ ಅವರು, ಬಂಗಾಳದ ಅಭಿವೃದ್ಧಿ ಮಾಡಲು 5 ವರ್ಷಗಳ ಕಾಲಾವಧಿ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.

West Bengal Elections 2021: ನಿನ್ನೆ 55 ನಿಮಿಷ ವಾಟ್ಸ್ಯಾಪ್​​ ಸ್ಥಗಿತವಾಗಿತ್ತು. ಆದ್ರೆ ಬಂಗಾಳದಲ್ಲಿ 55 ವರ್ಷದಿಂದ ಅಭಿವೃದ್ಧಿಯೇ ಸ್ಥಗಿವಾಗಿದೆ: ಮೋದಿ
ಬಂಗಾಳದಲ್ಲಿ ಪ್ರಧಾನಿಯಿಂದ ಚುನಾವಣಾ ಪ್ರಚಾರ ಭಾಷಣ
guruganesh bhat
|

Updated on:Mar 20, 2021 | 1:10 PM

Share

ಕೋಲ್ಕತ್ತಾ: ‘ಬಂಗಾಳದ ಮತದಾರರೇ, ಕಳೆದ 70 ವರ್ಷಗಳಲ್ಲಿ ಇತರ ಪಕ್ಷಗಳಿಗೆ ಅವಕಾಶ ನೀಡಿದ್ದೀರಿ. ಈ ಬಾರಿ ನಮಗೆ ಅವಕಾಶ ನೀಡಿ, ನಮ್ಮ ಜೀವನವನ್ನೇ ನಿಮ್ಮ ಅಭಿವೃದ್ಧಿಗೆ ಮೀಸಲಾಗಿಡುತ್ತೇವೆ. ಪಶ್ಚಿಮ ಬಂಗಾಳ ಅಭಿವೃದ್ಧಿಗೆ 5 ವರ್ಷ ಕಾಲಾವಕಾಶ ಕೊಡಿ. ಕೃಷಿ, ನೀರಾವರಿ ಕ್ಷೇತ್ರದಲ್ಲಿ ಸುಧಾರಣೆ ಮಾಡುತ್ತೇವೆ. ಬಂಗಾಳದ ಭವಿಷ್ಯವನ್ನು ಉಜ್ವಲಗೊಳಿಸುತ್ತೇವೆ.’ ಎಂದು ಪ್ರಧಾನಿ ನರೇಂದ್ರ ಮೋದಿ ಖರಗ್​ಪುರದಲ್ಲಿ ಮತದಾರರಿಗೆ ಭರಪೂರ ಆಶ್ವಾಸನೆ ನೀಡಿದ್ದಾರೆ. 

ಇನ್ನೇನು ಒಂದೇ ವಾರದಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ಮೊದಲ ಹಂತದ ವಿಧಾನಸಭಾ ಚುನಾವಣೆಯ ಸಲುವಾಗಿ ಪ್ರಚಾರ ನಡೆಸಲು ಆಗಮಿಸಿರುವ ಅವರು, ಬಂಗಾಳದ ಅಭಿವೃದ್ಧಿ ಮಾಡಲು 5 ವರ್ಷಗಳ ಕಾಲಾವಧಿ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಕೃಷಿ, ನೀರಾವರಿ ಕ್ಷೇತ್ರದಲ್ಲಿ ಸುಧಾರಣೆ ಮಾಡುತ್ತೇವೆ. ಸಂಪೂರ್ಣ ಬಂಗಾಳದಲ್ಲಿ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಅಂತ್ಯಗೊಳಿಸಲು ಬಿಜೆಪಿ ಬದ್ಧವಾಗಿದೆ. ಅಭಿವೃದ್ಧಿ ಸಹಿಸದ ಟಿಎಂಸಿ ಬಿಜೆಪಿ ನಾಯಕರಿಗೆ ಬೆದರಿಕೆ ಒಡ್ಡುತ್ತಿದೆ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ ವಾಟ್ಸ್ಯಾಪ್, ಇನ್ಸ್ಟಾಗ್ರಾಂ ಆ್ಯಪ್​ಗಳು 50-55 ನಿಮಿಷ ಸ್ಥಗಿತಗೊಂಡಿದ್ದವು. ಆದರೆ ಪಶ್ಚಿಮ ಬಂಗಾಳದಲ್ಲಿ 50-55 ವರ್ಷಗಳಿಂದ ಅಭಿವೃದ್ಧಿಯೇ ಸ್ಥಗಿತಗೊಂಡಿದೆ. ಮೊದಲು ಕಾಂಗ್ರೆಸ್, ಆಮೇಲೆ ಎಡ ಪಕ್ಷಗಳು, ನಂತರ ಟಿಎಂಸಿ ಅಭಿವೃದ್ಧಿಯನ್ನು ನಿಂತ ನೀರಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.ಈ ಪಕ್ಷಗಳು ನಾಗರಿಕರು ಅಭಿವೃದ್ಧಿಯ ಕನಸು ಕಾಣುವುದನ್ನು ಸಹ ತಡೆದಿವೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಅಸ್ಸಾಂಗೆ ತೆರಳಲಿರುವ ಪ್ರಧಾನಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನ ಚಬಹೋಕ್ಕೆ ತೆರಳಲಿದ್ದಾರೆ. ಅಸ್ಸಾಂನಲ್ಲಿ ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಆಯೋಜಿಸಲಾಗಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಕೈಗೊಳ್ಳಲಿದ್ದಾರೆ.

ಈ ಹಿಂದೆ ಸೋನಾರ್ ಬಾಂಗ್ಲಾ ಮಾಡುತ್ತೇವೆ ಎಂದಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪಶ್ಚಿಮ ಬಂಗಾಳದಲ್ಲಿ ಡೆಂಗ್ಯೂ ಹಬ್ಬುತ್ತಿದ್ದು ರಾಜ್ಯ ಸರ್ಕಾರ ಈ ಕುರಿತು ನಿರ್ಲಕ್ಷ್ಯ ವಹಿಸಿದೆ. ಕೇಂದ್ರ ಸರ್ಕಾರ ಈ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ವರದಿ ಕೇಳಿದರೂ ಅವರು ಯಾವುದೇ ವರದಿ ನೀಡದೇ ರಾಜ್ಯದ ಜನರ ಆರೋಗ್ಯದ ಕುರಿತು ನಿಷ್ಕಾಳಜಿ ತೋರಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದರು.

ಅಲ್ಲದೇ ಭರವಸೆಗಳ ಮಹಾಪೂರ ನೀಡಿದ ಅವರು, ಪಶ್ಚಿಮ ಬಂಗಾಳದ ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಶ್ಯಾಮ್ ಪ್ರಸಾದ್ ಮುಖರ್ಜಿ, ಈಶ್ವರಚಂದ್ರ ವಿದ್ಯಾಸಾಗರ್ ಅವರುಗಳ ಆದರ್ಶದ ದಾರಿಯಲ್ಲಿ ರಾಜ್ಯವನ್ನು ಮುನ್ನಡೆಸಿ ಸೋನಾರ್ ಬಾಂಗ್ಲಾವನ್ನು ಸಾಧಿಸುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ: West Bengal Elections 2021: ಓವೈಸಿಗೆ ಟಾಟಾ ಹೇಳಿ ಮಮತಾ ಬ್ಯಾನರ್ಜಿಗೆ ಬೆಂಬಲ ನೀಡಿದ AIMIM ಬಂಗಾಳ ಘಟಕದ ಅಧ್ಯಕ್ಷ

ಬಾಂಗ್ಲಾದೇಶಕ್ಕೆ ಪ್ರಧಾನಿ ಮೋದಿ ಭೇಟಿ; ಪಶ್ಚಿಮ ಬಂಗಾಳ ಮತದಾರರ ಮೇಲೆ ಪ್ರಭಾವ ಸಾಧ್ಯತೆ

Published On - 1:06 pm, Sat, 20 March 21