ನವದೆಹಲಿ: ದೆಹಲಿಯಲ್ಲಿ ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೆಹಲಿಯಲ್ಲಿ ಭಾರೀ ಮಳೆಯಿಂದಾಗಿ ‘ಆರೆಂಜ್’ ಅಲರ್ಟ್ ಘೋಷಿಸಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಭಾನುವಾರ ಮತ್ತು ಸೋಮವಾರ ಇನ್ನೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ದೆಹಲಿಯ ರೋಹಿಣಿ ಮತ್ತು ಬುರಾರಿ ಸೇರಿದಂತೆ ಕೆಲವು ಭಾಗಗಳಲ್ಲಿ ಇಂದು ಬೆಳಿಗ್ಗೆ ಮಳೆಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಇಂದು ಮಧ್ಯಾಹ್ನ 2.30ರಿಂದ 5.30ರ ನಡುವೆ ದೆಹಲಿಯ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್‌ನಲ್ಲಿ 8.9 ಮಿ.ಮೀ ಮತ್ತು ಲೋಧಿ ರಸ್ತೆಯಲ್ಲಿ 12.6 ಮಿ.ಮೀ ಮಳೆ ದಾಖಲಾಗಿದೆ.
#WATCH | National Capital, Delhi receives fresh spell of rain. Visuals from the Feroz Shah road. pic.twitter.com/6o80xAoxnr
— ANI (@ANI) June 29, 2024
ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ 228.1 ಮಿಮೀ ಮಳೆ ದಾಖಲಾಗಿದೆ. ದೆಹಲಿ ತನ್ನ ಒಟ್ಟು ಮಾನ್ಸೂನ್ ಮಳೆಯ ಮೂರನೇ ಒಂದು ಭಾಗವನ್ನು ಪಡೆದಿದೆ. ಇಡೀ ಮಾನ್ಸೂನ್ ಋತುವಿನಲ್ಲಿ ದೆಹಲಿಯು ಸುಮಾರು 650 ಮಿ.ಮೀ ಮಳೆಯನ್ನು ಪಡೆಯುತ್ತದೆ ಎಂದು ಹೇಳಿರುವ ಹವಾಮಾನ ತಜ್ಞರು ಈ ಪ್ರದೇಶದಲ್ಲಿ ಹವಾಮಾನ ವೈಪರೀತ್ಯ ಉಂಟಾಗಬಹುದು ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ