ಕೋಲ್ಕತ್ತಾ ಸೆಪ್ಟೆಂಬರ್ 13: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಬುಧವಾರ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ಅವರನ್ನು ದುಬೈ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ನವೆಂಬರ್‌ನಲ್ಲಿ ನಡೆಯಲಿರುವ ರಾಜ್ಯ ವ್ಯಾಪಾರ ಶೃಂಗಸಭೆಗೆ ಆಹ್ವಾನಿಸಿದ್ದಾರೆ. ಮಮತಾ ಬ್ಯಾನರ್ಜಿ ದುಬೈ ಮತ್ತು ಸ್ಪೇನ್‌ಗೆ 12 ದಿನಗಳ ಪ್ರವಾಸದಲ್ಲಿದ್ದಾರೆ. ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ನೋಡಿದ ವಿಕ್ರಮಸಿಂಘೆ ಅವರು ಬನ್ನಿ ಸ್ವಲ್ಪ ಹೊತ್ತು ಮಾತನಾಡೋಣ ಎಂದು ಕರೆದರು ಎಂದು ಮುಖ್ಯಮಂತ್ರಿ ಹೇಳಿದರು.
ಶ್ರೀಲಂಕಾದ ಗೌರವಾನ್ವಿತ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ನನ್ನನ್ನು ನೋಡಿದರು, ಬನ್ನಿ ಮಾತನಾಡೋಣ ಎಂದು ಅವರು ಕರೆದರು. ಅವರ ನಡೆಗೆ ನಾನು ವಿನಮ್ರ. ಕೋಲ್ಕತ್ತಾದಲ್ಲಿ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆ 2023 ಗೆ ಅವರನ್ನು ಆಹ್ವಾನಿಸಿದ್ದೇನೆ ಎಂದು ಮಮತಾ ಬ್ಯಾನರ್ಜಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
His Excellency The President of Sri Lanka Ranil Wickremesinghe saw me at the Dubai International Airport Lounge and called me to join for some discussion. I have been humbled by his greetings and invited him to the Bengal Global Business Summit 2023 in Kolkata. HE the President… pic.twitter.com/14OgsYjZgF
— Mamata Banerjee (@MamataOfficial) September 13, 2023
ವಿಕ್ರಮಸಿಂಘೆ ಅವರು ದ್ವೀಪ ದೇಶಕ್ಕೆ ಭೇಟಿ ನೀಡುವಂತೆ ತನ್ನನ್ನು ಆಹ್ವಾನಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಶ್ರೀಲಂಕಾದ ಅಧ್ಯಕ್ಷರು ಶ್ರೀಲಂಕಾಕ್ಕೆ ಭೇಟಿ ನೀಡುವಂತೆ ನನಗೆ ಆತ್ಮೀಯ ಆಹ್ವಾನವನ್ನು ನೀಡಿದರು. ಇದುಆಹ್ಲಾದಕರ ಸಂವಾದವಾಗಿತ್ತು ಎಂದು ಅವರು ಹೇಳಿದರು.
ಮಮತಾ ಬ್ಯಾನರ್ಜಿ ಮಂಗಳವಾರ ಸಂಜೆ ದುಬೈ ತಲುಪಿದ್ದು, ಇಂದು ಬೆಳಿಗ್ಗೆ ಸ್ಪೇನ್‌ಗೆ ತನ್ನ ವಿಮಾನವನ್ನು ಹತ್ತಲು ಅಲ್ಲಿನ ವಿಮಾನ ನಿಲ್ದಾಣದಲ್ಲಿದ್ದರು. ಈ ವರ್ಷದ BGBS ಅನ್ನು ನವೆಂಬರ್ 21-22 ರಂದು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ಹರಡಿರುವ ನಿಫಾ ವೈರಸ್ ಬಾಂಗ್ಲಾದೇಶ ತಳಿ; ಇದು ಕಡಿಮೆ ಸಾಂಕ್ರಾಮಿಕ ಆದರೆ ಮರಣ ಪ್ರಮಾಣ ಹೆಚ್ಚು
ಬ್ಯಾನರ್ಜಿ ಅವರು ಮಂಗಳವಾರ ಬೆಳಿಗ್ಗೆ ದುಬೈ ಮತ್ತು ಸ್ಪೇನ್ ಪ್ರವಾಸಕ್ಕೆ ತೆರಳಿದ್ದರು, ಈ ಸಂದರ್ಭದಲ್ಲಿ ಅವರು ರಾಜ್ಯಕ್ಕೆ ಹೂಡಿಕೆಗಳನ್ನು ಆಕರ್ಷಿಸಲು ವ್ಯಾಪಾರ ಶೃಂಗಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ