Bhabanipur Bypoll: ಭವಾನಿಪುರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಮಮತಾ ಬ್ಯಾನರ್ಜಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 10, 2021 | 3:20 PM

Mamata Banerjee: ಭವಾನಿಪುರ ವಿಧಾನಸಭಾ ಸ್ಥಾನವನ್ನು ಪಶ್ಚಿಮ ಬಂಗಾಳದ ಕೃಷಿ ಸಚಿವ ಶೋಭಂದೇಬ್ ಚಟ್ಟೋಪಾಧ್ಯಾಯ ಅವರು ಮೇ ತಿಂಗಳಲ್ಲಿ ತೊರೆದಿದ್ದು ಮಮತಾ ಬ್ಯಾನರ್ಜಿಯವರು ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಲು ದಾರಿ ಮಾಡಿಕೊಟ್ಟರು.

Bhabanipur Bypoll: ಭವಾನಿಪುರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಶುಕ್ರವಾರ ಭವಾನಿಪುರ ವಿಧಾನಸಭಾ ಉಪಚುನಾವಣೆಗೆ (Bhabanipur Bypoll) ನಾಮಪತ್ರ ಸಲ್ಲಿಸಿದರು. ಟಿಎಂಸಿ ನಾಯಕಿ ಮಮತಾ ವಿರುದ್ಧ ಬಿಜೆಪಿಯು ನ್ಯಾಯವಾದಿ ಪ್ರಿಯಾಂಕಾ ಟಿಬ್ರೆವಾಲ್  (Priyanka Tibrewal) ಅವರನ್ನು ಕಣಕ್ಕಿಳಿಸಿದ್ದು ಎಡರಂಗದಿಂದ ಶ್ರೀಜಿಬ್ ಬಿಸ್ವಾಸ್ ಕಣದಲ್ಲಿದ್ದಾರೆ. ಭಾರತದ ಚುನಾವಣಾ ಆಯೋಗ (ಇಸಿಐ) ಘೋಷಿಸಿದ ವೇಳಾಪಟ್ಟಿಯಂತೆ ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೆಪ್ಟೆಂಬರ್ 30 ರಂದು ನಡೆಯಲಿದೆ.   ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಭವಾನಿಪುರ ವಿಧಾನಸಭಾ ಸ್ಥಾನವನ್ನು ಪಶ್ಚಿಮ ಬಂಗಾಳದ ಕೃಷಿ ಸಚಿವ ಶೋಭಂದೇಬ್ ಚಟ್ಟೋಪಾಧ್ಯಾಯ ಅವರು ಮೇ ತಿಂಗಳಲ್ಲಿ ತೊರೆದಿದ್ದು ಮಮತಾ ಬ್ಯಾನರ್ಜಿಯವರು ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಲು ದಾರಿ ಮಾಡಿಕೊಟ್ಟರು.


ನಂದಿಗ್ರಾಮದಲ್ಲಿ ಚುನಾವಣೆಯಲ್ಲಿ ಸೋತ ಪಶ್ಚಿಮ ಬಂಗಾಳ ಸಿಎಂ, ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಈ ಉಪಚುನಾವಣೆಯಲ್ಲಿ ಗೆಲ್ಲಬೇಕು. ಬುಧವಾರ ಚೆಟ್ಲಾದಲ್ಲಿ ಟಿಎಂಸಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಸೆಪ್ಟೆಂಬರ್ 10 ರಂದು ಭಬನಿಪುರ ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದರು.


ಸಿಎಂ ಬ್ಯಾನರ್ಜಿ ಭವಾನಿಪುರ ನಿವಾಸಿಯಾಗಿದ್ದು, 2011 ಮತ್ತು 2016 ರಲ್ಲಿ ಎರಡು ಬಾರಿ ಸ್ಥಾನವನ್ನು ಗೆದ್ದಿದ್ದರು. ವಿಧಾನಸಭೆ ಚುನಾವಣೆಯ ಸಮಯ ಮತ್ತು ಹಂತಗಳ ಬಗ್ಗೆ ಟಿಎಂಸಿ ವರಿಷ್ಠರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, “2021 ರಲ್ಲಿ ಚುನಾವಣೆ ನಡೆದ ವಿಧಾನ ದೇವರಿಗೆ ಮಾತ್ರ ತಿಳಿದಿದೆ. ಕೇಂದ್ರ ಸುಳ್ಳು ಹೇಳಿದೆ, ಇನ್ನೂ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ನಂದಿಗ್ರಾಮದಲ್ಲಿ ನನ್ನ ಮೇಲೆ ನಡೆದ ದಾಳಿಯ ಹಿಂದೆ ಪಿತೂರಿ ಇದೆ. ಹೊರಗಿನಿಂದ ಬಂದ ಸಾವಿರಾರು ಗೂಂಡಾಗಳು ಬಂಗಾಳದ ಬಗ್ಗೆ ದಾರಿ ತಪ್ಪಿಸಲು ಬಂದರು ಎಂದಿದ್ದಾರೆ.

ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಯ ನಡುವೆ, ಚುನಾವಣೆಯ ಪ್ರಕಟಣೆಯು ಮತ್ತೆ ಎರಡೂ ಮುಖ್ಯ ಪಕ್ಷಗಳನ್ನು ಉಪಚುನಾವಣೆಯ ಚರ್ಚೆ ಆರಂಭಿಸುವಂತೆ ಮಾಡಿದೆ. ಏತನ್ಮಧ್ಯೆ, ಚುನಾವಣೆ ನಡೆಯುವ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.

ಇದನ್ನೂ ಓದಿ: Bhabanipur Bypoll ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಿಯಾಂಕಾ ಟಿಬರೆವಾಲ್​​ನ್ನು ಕಣಕ್ಕಿಳಿಸಿದ ಬಿಜೆಪಿ

(West Bengal CM Mamata Banerjee filed her nomination for Bhabanipur assembly seat by-polls)

Published On - 3:16 pm, Fri, 10 September 21