Bhabanipur Bypoll ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಿಯಾಂಕಾ ಟಿಬರೆವಾಲ್​​ನ್ನು ಕಣಕ್ಕಿಳಿಸಿದ ಬಿಜೆಪಿ

Priyanka Tibrewal: ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ತನ್ನ ಯುವ ಘಟಕದ ನಾಯಕಿ ಮತ್ತು ನ್ಯಾಯವಾದಿ ಪ್ರಿಯಾಂಕಾ ಟಿಬರೆವಾಲ್ ಅವರನ್ನು ಕಣಕ್ಕಿಳಿಸಿದೆ.

Bhabanipur Bypoll ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಿಯಾಂಕಾ ಟಿಬರೆವಾಲ್​​ನ್ನು ಕಣಕ್ಕಿಳಿಸಿದ ಬಿಜೆಪಿ
ಪ್ರಿಯಾಂಕಾ ಟಿಬರೆವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 10, 2021 | 1:17 PM

ದೆಹಲಿ: ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆಯಲ್ಲಿ(Bhabanipur Bypoll)  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee )ವಿರುದ್ಧ ಬಿಜೆಪಿ ತನ್ನ ಯುವ ಘಟಕದ ನಾಯಕಿ ಮತ್ತು ನ್ಯಾಯವಾದಿ ಪ್ರಿಯಾಂಕಾ ಟಿಬರೆವಾಲ್ (Priyanka Tibrewal )ಅವರನ್ನು ಕಣಕ್ಕಿಳಿಸಿದೆ. ಸೆಪ್ಟೆಂಬರ್ 30 ರಂದು ಇತರ ಎರಡು ಸ್ಥಾನಗಳೊಂದಿಗೆ ಇಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ಶುಕ್ರವಾರ ಸಮರ್‌ಗಂಜ್‌ಗೆ ಮಿಲನ್ ಘೋಷ್ ಮತ್ತು ಜಂಗೀಪುರ ಕ್ಷೇತ್ರಗಳಿಗೆ ಸುಜಿತ್ ದಾಸ್ ಅವರನ್ನು ಆಯ್ಕೆ ಮಾಡಿದೆ . ಅಕ್ಟೋಬರ್ 3 ರಂದು ಈ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

2015 ರಲ್ಲಿ ಪ್ರಿಯಾಂಕಾ ಕೋಲ್ಕತಾ ಮುನ್ಸಿಪಲ್ ಕೌನ್ಸಿಲ್ ಚುನಾವಣೆಗೆ ವಾರ್ಡ್ ಸಂಖ್ಯೆ 58 ರಿಂದ (ಎಂಟಲಿ) ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ತೃಣಮೂಲ ಕಾಂಗ್ರೆಸ್‌ನ ಸ್ವಪನ್ ಸಮ್ಮದರ್ ವಿರುದ್ಧ ಪರಾಭವಗೊಂಡಿದ್ದರು.

ಬಿಜೆಪಿಯಲ್ಲಿ ಆರು ವರ್ಷಗಳ ಅವಧಿಯಲ್ಲಿ ಅವರು ಹಲವಾರು ಪ್ರಮುಖ ಕೆಲಸಗಳನ್ನು ನಿರ್ವಹಿಸಿದ ಅವರನ್ನು ಆಗಸ್ಟ್ 2020 ರಲ್ಲಿ ಅವರನ್ನು ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಉಪಾಧ್ಯಕ್ಷರನ್ನಾಗಿ ಮಾಡಲಾಯಿತು.

2021 ರಲ್ಲಿಅವರು ಎಂಟಲಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಟಿಎಂಸಿಯ ಸ್ವರ್ಣ ಕಮಲ್ ಸಾಹಾ ವಿರುದ್ಧ ಸೋತರು.

ಟಿಬರೆವಾಲ್ ಜುಲೈ 7, 1981 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ವೆಲ್ಯಾಂಡ್ ಗೌಲ್ಡ್ಸ್ಮಿತ್ ಶಾಲೆಯಿಂದ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಳು. ಅದರ ನಂತರ, ಅವರು 2007 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಹಜ್ರಾ ಕಾನೂನು ಕಾಲೇಜಿನಿಂದ ಕಾನೂನು ಪದವಿಯನ್ನು ಪಡೆದರು. ಅವರು ಥೈಲ್ಯಾಂಡ್ ಅಸಂಪ್ಷನ್ ವಿಶ್ವವಿದ್ಯಾಲಯದಿಂದ ಎಂಬಿಎ ಮಾಡಿದರು.

ಮಮತಾ ಬ್ಯಾನರ್ಜಿ ವಿರುದ್ಧ ನನ್ನ ಪಕ್ಷ ನನ್ನನ್ನು ಭವಾನಿಪುರದಿಂದ ಕಣಕ್ಕಿಳಿಸಿದರೆ, ನಾನು ನನ್ನ ಕೈಲಾದದ್ದನ್ನು ನೀಡುತ್ತೇನೆ. ನ್ಯಾಯಕ್ಕಾಗಿ ಅನ್ಯಾಯದ ವಿರುದ್ಧದ ಈ ಹೋರಾಟದಲ್ಲಿ ಜನರು ನನ್ನನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಟಿಎಂಸಿ ಆಡಳಿತದ ದುರಾಡಳಿತದ ವಿರುದ್ಧ ಜನರು ಮತ ಚಲಾಯಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಇದು ಚುನಾವಣೆಯ ನಂತರದ ಹಿಂಸಾಚಾರ ಮತ್ತು ಬಂಗಾಳದ ಜನರ ಸಂಕಷ್ಟದ ವಿರುದ್ಧ ನಮ್ಮ ಹೋರಾಟವಾಗಿದೆ.

ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂದೇಶವಾಹಕಳಾಗಿದ್ದೇನೆ.  ಭವಾನಿಪುರದ ಎಲ್ಲಾ ನಿವಾಸಿಗಳು ಬಿಜೆಪಿಗೆ ಮತ ನೀಡುವಂತೆ ವಿನಂತಿಸಲು ಬಯಸುತ್ತೇನೆ. ಏಕೆಂದರೆ ಮೋದಿಜಿಯವರ ನೇತೃತ್ವದಲ್ಲಿ ನಮ್ಮ ದೇಶವು ಪ್ರವರ್ಧಮಾನಕ್ಕೆ ಬರುತ್ತಿದೆ ಮತ್ತು ಏಕಕಾಲದಲ್ಲಿ ಬಂಗಾಳವೂ ಬೆಳಗುತ್ತದೆ ಎಂದು ಅವರು ಹೇಳಿದರು. ಆಕೆಯ ರಾಜಕೀಯ ಜೀವನದುದ್ದಕ್ಕೂ ಮಾರ್ಗದರ್ಶಕ ಶಕ್ತಿಯಾಗಿದ್ದಕ್ಕಾಗಿ ಸುಪ್ರಿಯೋ ಅವರಿಗೆ ಪ್ರಿಯಾಂಕಾ ಧನ್ಯವಾದ ಹೇಳಿದ್ದಾರೆ.

ನಾನು ಚುನಾವಣೋತ್ತರ ಹಿಂಸಾಚಾರದ ವಿರುದ್ಧ ನಿಂತಿದ್ದೆ ಮತ್ತು ಒಂದೆರಡು ನ್ಯಾಯಾಲಯದ ಪ್ರಕರಣಗಳನ್ನು ದಾಖಲಿಸಿದೆ. ನಾನು ನನ್ನ ಬಿಜೆಪಿ ಕಾರ್ಯಕರ್ತರಿಗೆ ಮನೆಗೆ ಮರಳಲು ಸಹಾಯ ಮಾಡಿದೆ. ಟಿಎಂಸಿ ಗೂಂಡಾಗಳ ಭಯದಿಂದ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಅವರು ತಮ್ಮ ಮನೆಯನ್ನು ಖಾಲಿ ಮಾಡಿದರು. ಬಂಗಾಳದಲ್ಲಿ ರಕ್ತಪಾತವನ್ನು ನಿಲ್ಲಿಸುವಂತೆ ನಾನು ಟಿಎಂಸಿಗೆ ಹೇಳಲು ಬಯಸುತ್ತೇನೆ, ‘ಖೂನಿ ಖೇಲ ಬಂಧೋ ಕೊರೊ’. ಭವಾನಿಪುರದ ನಿವಾಸಿಗಳು ಬಿಜೆಪಿ ಅಥವಾ ಮಮತಾ ಬ್ಯಾನರ್ಜಿ ಇವರಲ್ಲಿ  ಯಾರನ್ನು ಬೆಂಬಲಿಸಬೇಕು ಎಂದು ತೀರ್ಮಾನಿಸಲಿ. ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ಮಾತ್ರ ಸ್ಪರ್ಧಿಸುತ್ತಿದ್ದಾರೆ. ಅವರ ಆಸಕ್ತಿಯು ಅಧಿಕಾರವನ್ನು ಉಳಿಸಿಕೊಳ್ಳುವುದು ಮಾತ್ರ ಆದರೆ ನಮ್ಮ ಹೋರಾಟವು ರಾಜ್ಯ ಸರ್ಕಾರದ ಪ್ರಜಾಪ್ರಭುತ್ವವಿಲ್ಲದ ಕಾರ್ಯದ ವಿರುದ್ಧವಾಗಿದೆ ಎಂದು ಗುರುವಾರ ನ್ಯೂಸ್ 18 ಜತೆ ಮಾತನಾಡಿದ್ದ  ಪ್ರಿಯಾಂಕಾ ಹೇಳಿದ್ದರು.

ಬ್ಯಾನರ್ಜಿ ವಿರುದ್ಧ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಕಾಂಗ್ರೆಸ್ ನಿರ್ಧರಿಸಿದ್ದು, ಅದರ ಮಿತ್ರ ಪಕ್ಷ ಸಿಪಿಐ (ಎಂ) ಭವಾನಿಪುರದ ವಕೀಲ ಶ್ರೀಜೀಬ್ ಬಿಸ್ವಾಸ್ ಅವರನ್ನು ಬೆಂಬಲಿಸಲು ನಿರ್ಧರಿಸಿದೆ.ರಾಜ್ಯದ ಮುಖ್ಯಮಂತ್ರಿಯಾಗಿ ಉಳಿಯಲು ಬ್ಯಾನರ್ಜಿಗೆ ಚುನಾವಣೆ ಮಹತ್ವದ್ದಾಗಿದೆ.

ಟಿಬರೆವಾಲ್  ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಯುವ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಟಿಬರೆವಾಲ್  ರಾಜ್ಯದಲ್ಲಿ ಪಕ್ಷದ ಸಕ್ರಿಯ ಮತ್ತು ಗಟ್ಟಿದನಿಯ ಯುವ ನಾಯಕರಾಗಿದ್ದಾರೆ. ಕಲ್ಕತ್ತಾ ಹೈಕೋರ್ಟ್‌ನಲ್ಲಿ ಚುನಾವಣೋತ್ತರ ಹಿಂಸಾಚಾರ ಪ್ರಕರಣಗಳಲ್ಲಿ ಆಕೆ ಅರ್ಜಿದಾರರಲ್ಲಿ ಒಬ್ಬರಾಗಿದ್ದಾರೆ. ಹಿಂಸಾಚಾರದ ಕುರಿತು ಸಿಬಿಐ ತನಿಖೆಗೆ ನ್ಯಾಯಾಲಯ ಆದೇಶ ನೀಡಿತ್ತು.ಇದನ್ನು ಬಿಜೆಪಿ ತನ್ನ ನಿಲುವಿಗೆ ಜಯವೆಂದು ಪರಿಗಣಿಸಿದೆ.

ಪಕ್ಷದ ನಾಯಕರ ಪ್ರಕಾರ ಭವಾನಿಪುರ ಮುಖ್ಯಮಂತ್ರಿಯ ವಿರುದ್ಧ ಉತ್ತಮ ಮತಗಳನ್ನು  ದಾಖಲಿಸಲು ಪಕ್ಷದ ಅಭ್ಯರ್ಥಿಯು ತನ್ನ ಕಾರ್ಯಕರ್ತರ ಮತವನ್ನು ಕ್ರೋಢೀಕರಿಸಿಕೊಳ್ಳುವುದರ ಮೇಲೆ  ಗಮನ ಕೇಂದ್ರೀಕರಿಸಿದೆ.

ಸಂವಿಧಾನದ ಕಲಂ 164 ರ ಪ್ರಕಾರ, ಆರು ತಿಂಗಳೊಳಗೆ ಶಾಸಕರಲ್ಲದ ಸಚಿವರು ರಾಜೀನಾಮೆ ನೀಡಬೇಕು ಮತ್ತು ಆದ್ದರಿಂದ ಉಪಚುನಾವಣೆಯಲ್ಲಿ ಬ್ಯಾನರ್ಜಿ ಗೆಲ್ಲುವುದು ಬಹಳ ಮುಖ್ಯ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಬಿಜೆಪಿ ಸಂಸದನ ಮನೆ ಹೊರಗೆ ಮೂರು ಬಾಂಬ್​ ಸ್ಫೋಟ; ಟಿಎಂಸಿ ಮೇಲೆ ಆರೋಪ

(BJP fields advocate Priyanka Tibrewal in Bhabanipur constituency to take on West Bengal CM Mamata Banerjee)

Published On - 12:59 pm, Fri, 10 September 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್