Video: ಕುಡಿದ ಅಮಲಿನಲ್ಲಿ ಸೇನಾಧಿಕಾರಿಯ ವಾಹನಕ್ಕೆ ಕಾಲಿನಿಂದ ಒದೆಯುತ್ತಿರುವ ಯುವತಿ; ವಿಡಿಯೋ ವೈರಲ್

Viral Video: ಯುವತಿಯು ಕುಡಿದಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಸೇನೆಯ ಕಡೆಯಿಂದ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Video: ಕುಡಿದ ಅಮಲಿನಲ್ಲಿ ಸೇನಾಧಿಕಾರಿಯ ವಾಹನಕ್ಕೆ ಕಾಲಿನಿಂದ ಒದೆಯುತ್ತಿರುವ ಯುವತಿ; ವಿಡಿಯೋ ವೈರಲ್
ಕುಡಿತ ಅಮಲಿನಲ್ಲಿ ಸೇನಾಧಿಕಾರಿಯ ವಾಹನಕ್ಕೆ ಕಾಲಿನಿಂದ ಒದೆಯುತ್ತಿರುವ ಯುವತಿ

ಮದ್ಯ ಸೇವನೆಯ ಅಮಲಿನಲ್ಲಿ 22 ವರ್ಷದ ಯುವತಿ ರಸ್ತೆಯಲ್ಲಿ ಗಲಾಟೆ ಮಾಡುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ. ಬುಧವಾರ ನಡೆದ ಈ ಘಟನೆಯಲ್ಲಿ ಯುವತಿ ಕುಡಿದ ಅಮಲಿನಲ್ಲಿದ್ದಳು ಹಾಗೆಯೇ ಮಾಡೆಲ್ ಆಗಿರುವ ಇವಳು ದೆಹಲಿಯಿಂದ ಗ್ವಾಲಿಯರ್​ಗೆ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಬಂದಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಕುಡಿದ ಅಮಲಿನಲ್ಲಿದ್ದ ಮಾಡೆಲ್ ರಸ್ತೆಯ ಮಧ್ಯದಲ್ಲಿ ಸೇನಾಧಿಕಾರಿಯೋರ್ವರ ವಾಹನವನ್ನು ಅಡ್ಡ ಹಾಕಿ ಗಲಾಟೆ ಮಾಡಿದ್ದಾಳೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಯುವತಿಯು ವಾಹನದ ಹೆಡ್​ಲೈಟ್​ಗೆ ಕಾಲಿನಿಂದ ಒದೆಯುತ್ತಿದ್ದಾಳೆ. ವಾಹನವನ್ನು ಒದೆಯದಂತೆ ತಡೆಯಲು ಬಂದ ಸೇನಾಧಿಕಾರಿಯನ್ನು ಹಿಂದಕ್ಕೆ ತಳ್ಳಿ ಗಲಾಟೆ ಪ್ರಾರಂಭಿಸಿದ್ದಾಳೆ. ಈ ಪ್ರಕರಣವನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿದೆ.

ಯುವತಿಯು ಕುಡಿದಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಸೇನೆಯ ಕಡೆಯಿಂದ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ವಿವೇಕ್ ಅಸ್ಥಾನಾ ಹೇಳಿದ್ದಾರೆ. ಈ ಕುರಿತಂತೆ ವರದಿಗಳಿಂದ ಮಾಹಿತಿ ತಿಳಿದು ಬಂದಿದೆ.

ದೆಹಲಿಯ ಮೂರು ಯುವತಿಯರು ಗ್ವಾಲಿಯರ್​ಗೆ ಬಂದಿದ್ದಾರೆ. ಅವರಲ್ಲಿ ಒಬ್ಬರು ರಸ್ತೆಯಲ್ಲಿ ನಿಂತು ಗಲಾಟೆ ಮಾಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ತಿಳಿಸಿದ್ದಾರೆ. ಇನ್ನಿಬ್ಬರು ಯುವತಿಯರನ್ನೂ ಸಹ ಪೊಲೀಸ್ ಠಾಣೆಗೆ ಕರೆಸಲಾಗಿದೆ. ಬಂಧಿಸಿದ ಯುವತಿಯನ್ನು ಬಿಡುಗಡೆ ಮಾಡುವಂತೆ  ಒತ್ತಾಯಿಸಿದ್ದು, ಜಾಮೀನಿನ ಮೇಲೆ ಪೊಲೀಸರು ಯುವತಿಯನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:

Viral Video: ಮದುವೆ ದಿನದಂದೇ ಮೊಬೈಲ್​ನಲ್ಲಿ ಗೇಮ್ ಆಡುತ್ತಾ ಕುಳಿತ ವಧು ವರರು; ವಿಡಿಯೋ ವೈರಲ್

Viral Video: ಹಾವು ರಕ್ಷಕನ ಕೌಶಲ್ಯ ನೋಡಿ ಆಶ್ಚರ್ಯಗೊಂಡ ನೆಟ್ಟಿಗರು; ವಿಡಿಯೋ ವೈರಲ್​

(Druck model cicks ary vehicle in gwaliar video goes viral)

Click on your DTH Provider to Add TV9 Kannada