ಪರಿಸರ ಸ್ನೇಹಿ ಗಣೇಶ ಅಭಿಯಾನಕ್ಕೆ ಸೇರಿಕೊಳ್ಳಿ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲು ಇಂದೇ ಕೊನೆಯ ದಿನಾಂಕ
ಪರಿಸರಕ್ಕೆ ಯಾವುದೇ ರಾಸಾಯನಿಕಗಳಿಂದ ಹಾನಿಯಾಗದಂತೆ ನೋಡಿಕೊಳ್ಳಲು ಅರಿಶಿಣದಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪತಿಯನ್ನು ತಯಾರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕರೆ ನೀಡಿದೆ.
ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪರಿಸರಕ್ಕೆ ಯಾವುದೇ ಯಾವುದೇ ರಾಸಾಯನಿಕಗಳಿಂದ ಹಾನಿಯಾಗದಂತೆ ನೋಡಿಕೊಳ್ಳಲು ಅರಿಶಿಣದಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪತಿಯನ್ನು ತಯಾರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕರೆ ನೀಡಿದೆ. ಜತೆಗೆ ಆನ್ಲೈನ್ನಲ್ಲಿ ಸಹ ಅಭಿಯಾನ ಕೈಗೊಂಡಿದೆ. ನೀವೂ ಸಹ ಇದರಲ್ಲಿ ಪಾಲ್ಗೊಂಡು ಪ್ರಮಾಣ ಪತ್ರವನ್ನು ಸ್ವೀಕರಿಸಬಹುದು. ಆಕರ್ಷಕ ಗಣಪನ ಮೂರ್ತಿಗೆ ಬಹುಮಾನವನ್ನೂ ಗೆಲ್ಲಬಹುದು.
ಈ ಬಾರಿ ಮಂಡಳಿಯಿಂದ ವಿಶೇಷವಾದ ಯೋಜನೆ ಆರಂಭಗೊಂಡಿದೆ. ಹಿಂದೂ ಧರ್ಮದಲ್ಲಿ ಅರಿಶಿಣಕ್ಕೆ ಶ್ರೇಷ್ಠ ಸ್ಥಾನವಿದೆ. ಜತೆಗೆ ಪರಿಸರಕ್ಕೆ ಇದರಿಂದ ಯಾವುದೇ ಹಾನಿಯಿಲ್ಲ. ಹಾಗಾಗಿ ಈ ಬಾರಿ ಅರಿಶಿಣದಿಂದ ತಯಾರಿಸಿದ ಗಣೇಶನ ಮೂರ್ತಿಯನ್ನು ತಯಾರಿಸಲು ಕರೆ ನೀಡಿದೆ.
ಸೆಪ್ಟೆಂಬರ್ 8ರಿಂದ ಈ ಅಭಿಯಾನ ಕೈಗೊಳ್ಳಲಾಗಿದ್ದು, ಇಂದು ಕೊನೇಯ ದಿನಾಂಕ. ಅರಿಶಿಣದಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪನ ಮೂರ್ತಿಯ ಜತೆಗೆ ನೀವೂ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಬಹುದು. ಅಲ್ಲದೇ ಆಕರ್ಷಕ ಫೋಟೋಗಳಿಗೆ ಬಹುಮಾನವನ್ನೂ ಸಹ ಪಡೆಯಬಹುದು.
ಗಮನಿಸಿ: https://links.bsgkarnataka.org/eco-friendly-ganesha*
ಸೋಷಿಯಲ್ ಮೀಡಿಯಾದಲ್ಲಿ ನೀವು ತಯಾರಿಸಿದ ಅರಿಶಿಣ ಗಣೇಶನ ಮೂರ್ತಿಯೊಂದಿಗೆ ನಿಮ್ಮ ಫೋಟೋವನ್ನು ಕ್ಲಿಕ್ಕಿಸಿ ಈ ಕೆಳಗೆ ಸೂಚಿಸಿರುವ ಹ್ಯಾಶ್ಟ್ಯಾಗ್ನೊಂದಿಗೆ ಪೋಸ್ಟ್ ಮಾಡಿ.
#scoutsmakeganesha #1millionturmericganesha #bsgkarnataka #scoutsforsgds #scoutspromisetotheplanet #turmericganeshacampaign #onemillioncampaign #kspcb #greenvisarjan
ಇದನ್ನೂ ಓದಿ:
Ganesha Chaturthi 2021: 5,000 ಬೆಂಕಿ ಕಡ್ಡಿಗಳಿಂದ ಗಣೇಶನ ಮೂರ್ತಿ ತಯಾರಿಸಿದ ಒಡಿಶಾ ಕಲಾವಿದ
ಗಣೇಶ ಹಬ್ಬದ ಸಂಭ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ; ಗಣೇಶ ವೇಷಧಾರಿ ಜತೆ ಮಾತುಕತೆ
(10 lakh turmeric ganesha statue campaign from pollution board for ganesha chaturthi)
Published On - 10:47 am, Fri, 10 September 21