ಉತ್ತರ ಪ್ರದೇಶದ 33 ಜಿಲ್ಲೆಗಳು ಕೊರೊನಾ ಮುಕ್ತ; ಸಕ್ರಿಯ ಪ್ರಕರಣಗಳ ಸಂಖ್ಯೆ ಸೊನ್ನೆ
Uttar Pradesh: ಉತ್ತರ ಪ್ರದೇಶದಲ್ಲಿ 199 ಕೊರೊನಾ ಸಕ್ರಿಯ ಪ್ರಕರಣಗಳು ಇವೆ. ಹಾಗೂ ಕೊವಿಡ್ ಪಾಸಿಟಿವಿಟಿ ದರ 0.01 ಶೇಕಡಾಕ್ಕಿಂತಲೂ ಇಳಿಕೆ ಕಂಡಿದೆ. ಕೊವಿಡ್ನಿಂದ ಗುಣಮುಖರಾಗುವ ಪ್ರಮಾಣ 98.7 ಶೇಕಡಾಗೆ ಹೆಚ್ಚಿದೆ.
ದೆಹಲಿ: ಕೊರೊನಾ ಸೋಂಕಿನ ಮೂರನೇ ಅಲೆ ಎಂಬ ಆತಂಕದ ನಡುವೆ ಹಾಗೂ ಎರಡನೇ ಅಲೆಯ ಪ್ರಕರಣಗಳ ಇಳಿಕೆಯ ಹಂತದಲ್ಲಿ ಭಾರತ ಇದೆ. ಬಹುತೇಕ ಜನಜೀವನ ಮತ್ತೆ ಸಹಜ ಸ್ಥಿತಿಗೆ ಮರಳುವಂತೆ ಕಂಡುಬರುತ್ತಿದೆ. ಮೂರನೇ ಅಲೆ ಎದುರಾಗದೇ ಇರಲಿ ಎಂಬ ಆಶಯದೊಂದಿಗೆ ಜನರು ಜೀವನ ನಡೆಸುತ್ತಿದ್ದಾರೆ. ಲಸಿಕೆ ನೀಡಿಕೆ ಪ್ರಕ್ರಿಯೆ ಕೂಡ ವೇಗ ಭರದಿಂದ ನಡೆಯುತ್ತಿದೆ. ಈ ಮಧ್ಯೆ ಒಳ್ಳೆ ಸುದ್ದಿಯೊಂದು ಕೇಳಿಬಂದಿದೆ. ಅದೇನೆಂದರೆ, ಉತ್ತರ ಪ್ರದೇಶದ 33 ಜಿಲ್ಲೆಗಳಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣಗಳು ಸಕ್ರಿಯವಾಗಿಲ್ಲ. ಈ ಬಗ್ಗೆ, ರಾಜ್ಯ ಸರ್ಕಾರ ಶುಕ್ರವಾರ ತಿಳಿಸಿದೆ.
ಉತ್ತರ ಪ್ರದೇಶದ 33 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿಲ್ಲ. ಹಾಗೂ ಕಳೆದ 24 ಗಂಟೆಗಳಲ್ಲಿ ಸುಮಾರು 67 ಜಿಲ್ಲೆಗಳಲ್ಲಿ ಒಂದೇ ಒಂದು ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಕೊರೊನಾ ಸೋಂಕು ಮುಕ್ತವಾಗಿರುವ 33 ಜಿಲ್ಲೆಗಳ ಪೈಕಿ ಆಲಿಘರ್, ಅಮ್ರೊಹಾ, ಅಯೋಧ್ಯಾ, ಬಾಘ್ಪತ್, ಬಲ್ಲಿಯಾ, ಬಲ್ರಾಮ್ಪುರ್, ಬಂಡಾ, ಬಸ್ತಿ, ಬಹ್ರಾಯ್ಚ್, ಬಿಜ್ನೂರ್, ಭಡೋಹಿ, ಚಿತ್ರಕೂಟ್, ಚಂಡೌಳಿ, ಎಟಾಹ್, ಡೆಒರಿಯಾ, ಫತೇಪುರ್, ಘಾಜಿಪುರ್, ಗೋಂಡಾ, ಹಮೀರ್ಪುರ್, ಹಪುರ್, ಹರ್ದೊಯಿ, ಹತ್ರಾಸ್, ಕಾಸ್ಗಂಜ್, ಲಲಿತ್ಪುರ್ ಮತ್ತು ಮಹೋಬಾ ಇದೆ. ಮೊರಾದಾಬಾದ್, ಮುಜಾಫರ್ನಗರ್, ಪಿಲಿಭಿಟ್, ರಾಂಪುರ್, ಸಹರನ್ಪುರ್, ಶಾಮ್ಲಿ, ಸಿದ್ಧಾರ್ಥ್ ನಗರ್, ಸೊನ್ಭದ್ರಾ ಕೂಡ ಇದೆ.
ಒಟ್ಟಾರೆ, ರಾಜ್ಯದಲ್ಲಿ 199 ಕೊರೊನಾ ಸಕ್ರಿಯ ಪ್ರಕರಣಗಳು ಇವೆ. ಹಾಗೂ ಕೊವಿಡ್ ಪಾಸಿಟಿವಿಟಿ ದರ 0.01 ಶೇಕಡಾಕ್ಕಿಂತಲೂ ಇಳಿಕೆ ಕಂಡಿದೆ. ಕೊವಿಡ್ನಿಂದ ಗುಣಮುಖರಾಗುವ ಪ್ರಮಾಣ 98.7 ಶೇಕಡಾಗೆ ಹೆಚ್ಚಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ 11 ಕೊರೊನಾ ಪ್ರಕರಣಗಳು ದಾಖಲಾಗಿವೆ ಹಾಗೂ ಯಾವುದೇ ಸಾವು ಸಂಭವಿಸಿಲ್ಲ.
ಕೊರೊನಾ ಬಗ್ಗೆ 2.26 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿತ್ತು. ಅವುಗಳಲ್ಲಿ ಕೇವಲ 199 ಮಾದರಿಗಳು ಪಾಸಿಟಿವ್ ಆಗಿದೆ. ಶುಕ್ರವಾರದ ಮಾಹಿತಿಯಂತೆ ಉತ್ತರ ಪ್ರದೇಶ ಇದುವರೆಗೆ ಒಟ್ಟು 7.42 ಕೊರೊನಾ ಪರೀಕ್ಷೆ ನಡೆಸಿದೆ. ಉತ್ತರ ಪ್ರದೇಶದ ಲಸಿಕೆ ನೀಡಿಕೆ ವಿವರಣೆ ನೀಡಲಾಗಿದೆ. ಅದರಂತೆ ರಾಜ್ಯದ ಸುಮಾರು 7 ಕೋಟಿ ಜನರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಕಳೆದ 2 ಗಂಟೆಗಳಲ್ಲಿ 12 ಲಕ್ಷ ಮಂದಿ ಕೊವಿಡ್19 ವಿರುದ್ಧದ ಲಸಿಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Delta Sub-lineages in Bangalore: ರಾಜ್ಯದ ಜನರೇ ಎಚ್ಚರ ಎಚ್ಚರ, ಪತ್ತೆಯಾಗಿದೆ ಕೊರೊನಾ ಉಪ ರೂಪಾಂತರಿ!
ಇದನ್ನೂ ಓದಿ: ಕೊವಿಡ್ ಲಸಿಕೆ ಅಭಿಯಾನಕ್ಕೆ ಮುಂದಿನ ತಿಂಗಳೇ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯೂ ಸೇರ್ಪಡೆಯಾಗುವ ಸಾಧ್ಯತೆ