ಮೆದುಳು ನಿಷ್ಕ್ರಿಯವಾದ ವ್ಯಕ್ತಿಯಿಂದ ಕೈ ದಾನ; 27 ವರ್ಷದ ರೋಗಿಗೆ ಯಶಸ್ವಿ ಕಸಿ ಮಾಡಿದ ಕೊಲ್ಕತ್ತಾದ ವೈದ್ಯರು

|

Updated on: Jul 17, 2023 | 6:11 PM

ಈ ಸಮಯದಲ್ಲಿ, ಯುವಕನನ್ನು 27 ಗಂಟೆಗಳ ಕಾಲ ವೆಂಟಿಲೇಷನ್​​ನಲ್ಲಿ ಇರಿಸಲಾಯಿತು. ಅದರ ನಂತರ, ಅವರನ್ನು ಸೋಮವಾರ ಬೆಳಿಗ್ಗೆ 9 ಗಂಟೆಗೆ ವೆಂಟಿಲೇಶನ್‌ನಿಂದ ಸಿಸಿಯುಗೆ ಸ್ಥಳಾಂತರಿಸಲಾಯಿತು.ಈ ಹಂತದಲ್ಲಿ ಅವರ ಆರೋಗ್ಯ ಸ್ಥಿರವಾಗಿದೆ.

ಮೆದುಳು ನಿಷ್ಕ್ರಿಯವಾದ ವ್ಯಕ್ತಿಯಿಂದ ಕೈ ದಾನ; 27 ವರ್ಷದ ರೋಗಿಗೆ ಯಶಸ್ವಿ ಕಸಿ ಮಾಡಿದ ಕೊಲ್ಕತ್ತಾದ ವೈದ್ಯರು
ಶಸ್ತ್ರಚಿಕಿತ್ಸೆ
Follow us on

ಕೊಲ್ಕತ್ತಾ ಜುಲೈ 17: ಪಶ್ಚಿಮ ಬಂಗಾಳದ (West Bengal) ಸರ್ಕಾರಿ ಆಸ್ಪತ್ರೆ ಎಸ್‌ಎಸ್‌ಕೆಎಂನಲ್ಲಿನ (SSKM) ವೈದ್ಯರು 27 ವರ್ಷದ ಯುವಕನ ದೇಹಕ್ಕೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ದಾನ ಪಡೆದ ಎರಡು ಕೈಗಳನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಬಂಗಾಳದಲ್ಲಿಈ ರೀತಿ ಕಸಿ ಮಾಡಿದ ಮೊದಲ ನಿದರ್ಶನ ಇದಾಗಿದ್ದು, ದೇಶದಲ್ಲಿ ಹದಿನೈದನೇ ಪ್ರಕರಣವಾಗಿದೆ. ಶನಿವಾರ ಬೆಳಿಗ್ಗೆ 5 ಗಂಟೆಗೆ ಶಸ್ತ್ರಚಿಕಿತ್ಸೆ ಪ್ರಾರಂಭವಾಗಿದ್ದು, ಭಾನುವಾರ ಬೆಳಿಗ್ಗೆ ಮೂರು ಗಂಟೆಗೆ ಕೊನೆಗೊಂಡಿತು ಎಂದು ಟಿವಿ 9 ಬಾಂಗ್ಲಾ ವರದಿ ಮಾಡಿದೆ. ವರದಿಯ ಪ್ರಕಾರ, ಕಾರ್ಯವಿಧಾನವು 22 ಗಂಟೆಗಳ ಕಾಲ ನಾನ್ ಸ್ಟಾಪ್ ಆಗಿ ನಡೆಯಿತು. ಈ ಕಾರ್ಯವಿಧಾನಕ್ಕಾಗಿ, ಏಕೈಕ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ವೈದ್ಯಕೀಯ ಸಿಬ್ಬಂದಿ ಮತ್ತು 32 ವೈದ್ಯರ ತಂಡವನ್ನು ಒಟ್ಟುಗೂಡಿಸಿತ್ತು.

ಈ ಸಮಯದಲ್ಲಿ, ಯುವಕನನ್ನು 27 ಗಂಟೆಗಳ ಕಾಲ ವೆಂಟಿಲೇಷನ್​​ನಲ್ಲಿ ಇರಿಸಲಾಯಿತು. ಅದರ ನಂತರ, ಅವರನ್ನು ಸೋಮವಾರ ಬೆಳಿಗ್ಗೆ 9 ಗಂಟೆಗೆ ವೆಂಟಿಲೇಶನ್‌ನಿಂದ ಸಿಸಿಯುಗೆ ಸ್ಥಳಾಂತರಿಸಲಾಯಿತು.ಈ ಹಂತದಲ್ಲಿ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಈಗ ಪ್ಲಾಸ್ಟಿಕ್ ಸರ್ಜರಿ ವಿಭಾಗದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯಕೃತ್ತು, ಮೂತ್ರಪಿಂಡ, ಹೃದಯ ಮತ್ತು ಶ್ವಾಸಕೋಶದ ಕಸಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದರೂ, ಇದು ಬಾಹ್ಯ ಅಂಗಾಂಗ ದಾನದ ಮೊದಲ ನಿದರ್ಶನವಾಗಿದೆ.

ಈ ರೀತಿಯ ಕೈ ಕಸಿ ವಿಶೇಷವಾದುದು. ಸಾರ್ವಜನಿಕ ಆಸ್ಪತ್ರೆಗಳ ಜ್ಞಾನದಿಂದ ಮಾತ್ರ ಈ ಪ್ರಯತ್ನ ಸಾಧ್ಯವಾಯಿತು. ಮಧ್ಯಾಹ್ನ 3 ಗಂಟೆಗೆ ಪ್ರಾಥಮಿಕ ಶಸ್ತ್ರ ಚಿಕಿತ್ಸೆ ಮುಗಿಯಿತು. ಅವರೆಲ್ಲರೂ ಹೈ ಅಲರ್ಟ್‌ನಲ್ಲಿದ್ದಾರೆ ಎಂದು  ಎಸ್‌ಎಸ್‌ಕೆಎಂ ಮತ್ತು ಐಪಿಜಿಎಂಇಆರ್‌ನ ನಿರ್ದೇಶಕ ಮಣಿಮೊಯ್ ಬಂಡೋಪಾಧ್ಯಾಯ ಹೇಳಿದ್ದಾರೆ.

ಅಂಗಾಂಗಗಳನ್ನು ದಾನ ಮಾಡಿದವರು ಯಾರು?

ಜುಲೈ 9 ರಂದು ಹೌರಾದ ಉಲುಬೇರಿಯಾದಲ್ಲಿ 43 ವರ್ಷದ ವ್ಯಕ್ತಿಯೊಬ್ಬರು ಕಾರು ಡಿಕ್ಕಿ ಹೊಡೆದು ಗಾಯಗೊಂಡಿದ್ದರು. ಜುಲೈ 13 ರಂದು ರೋಗಿಯ ಸ್ಥಿತಿ ಕ್ಷೀಣಿಸಲು ಪ್ರಾರಂಭಿಸಿತು. ಅಂತಿಮವಾಗಿ, ಮೆದುಳು ನಿಷ್ಕ್ರಿಯ ಆಗಿದೆ. ಅದರ ನಂತರ, ಅವರ ರಕ್ತದ ಗುಂಪು ಮತ್ತು ಜೀವಕೋಶಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಆಸ್ಪತ್ರೆಯನ್ನು ಸಂಪರ್ಕಿಸಲಾಯಿತು. ಬಿರಾಟಿ (N 24 ಪರಗಣ) 27 ವರ್ಷದ ಸ್ಥಳೀಯ ವ್ಯಕ್ತಿಯೊಬ್ಬ ಆ ಸಮಯದಲ್ಲಿ ಹಿಂದಿನ 12 ತಿಂಗಳುಗಳಿಂದ SSKM ನ ಪ್ಲಾಸ್ಟಿಕ್ ಸರ್ಜರಿ ವಿಭಾಗದಲ್ಲಿ ಆರೈಕೆಯನ್ನು ಪಡೆಯುತ್ತಿದ್ದ. ಅವನಿಗೆ ಎರಡು ಕೈಗಳು ಬೇಕಾಗಿತ್ತು.

ನೆಫ್ರಾಲಜಿ ವಿಭಾಗದ ವೈದ್ಯರ ಪ್ರಕಾರ, ಕಸಿ ಮಾಡಲಾಗಿದೆ. ಈ ಕೈಗಳನ್ನು ದೇಹವು ಎಷ್ಟು ಕಾಲ ಇಟ್ಟುಕೊಂಡಿರುತ್ತದೆ ಎಂಬುದು ಪ್ರಶ್ನೆಯಾಗಿದೆ. ವಿಶೇಷವಾಗಿ ದೇಹವು ಬಾಹ್ಯ ಪ್ರಭಾವಗಳನ್ನು ವಿರೋಧಿಸುತ್ತದೆ. ಆದ್ದರಿಂದ, ಅತ್ಯಂತ ವಿಷಕಾರಿ ಔಷಧಿಗಳನ್ನು ಬಳಸಲಾಗುತ್ತಿದೆ. ರಕ್ತ ಪರಿಚಲನೆ ಆಗದಿದ್ದರೆ ಸಮಸ್ಯೆ ಆಗಬಹುದು. ದೇಹದ ಇತರ ಭಾಗಗಳಿಗೂ ಕೂಡಾ ಇದು ಬಾಧಕ ಆಗಿರುತ್ತದೆ. ಆತನನ್ನು ಎಲ್ಲಾ ಸಮಯದಲ್ಲೂ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಇಡೀ ವರ್ಷ ಆತತನ್ನು ಪರಿಶೀಲಿಸುತ್ತಿರಬೇಕು.

ಶವ ದಾನ ಎಂದರೇನು?

ಬ್ರಿಟಿಷ್ ಮೆಡಿಕಲ್ ಜರ್ನಲ್‌ನ ವರದಿಯ ಪ್ರಕಾರ ಈ ರೀತಿಯ ಅಂಗಾಂಗ ದಾನದಲ್ಲಿ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು, ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಯನ್ನು ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳಿಂದ ತೆಗೆಯಲಾಗುತ್ತದೆ, ಜೊತೆಗೆ ಟಿಶ್ಯೂ ದಾನವನ್ನೂ ಇದು ಒಳಗೊಂಡಿರುತ್ತದೆ. ಇದರಲ್ಲಿ ಚರ್ಮ, ಕಾರ್ನಿಯಾಗಳು, ಸ್ನಾಯುರಜ್ಜುಗಳು, ಮೂಳೆಗಳು ಮತ್ತು ದೇಹದ ಇತರ ಟಿಶ್ಯೂಗಳನ್ನೂ ತೆಗೆಯಲಾಗುತ್ತದೆ. ಮೆದುಳು ನಿಷ್ಕ್ರಿಯ ಮತ್ತು ಹೃದಯ ನಿಷ್ಕ್ರಿಯ ವ್ಯಕ್ತಿಗಳ ದೇಹದ ಅಂಗಾಂಶಗಳ ದಾನವನ್ನೂ ಕೂಡಾ ಈ ದಾನದಲ್ಲಿ ಸೇರಿಸಲಾಗಿದೆ. ಈ ಕಾರ್ಯಾಚರಣೆಯನ್ನು ಸರ್ಜನ್ ಗಳು ಆಪರೇಟಿಂಗ್ ರೂಂನಲ್ಲಿ ನಡೆಸುವುದರಿಂದ ಮೆದುಳು ನಿಷ್ಕ್ರಿಯ ರೋಗಿಗಳಿಗೆ ಅಂಗಾಂಗ ಕಸಿ ಮಾಡಲು ಪಾಥೋಲಜಿಸ್ಟ್ ಗಳಿಗೆ ಸಾಧ್ಯವಾಗುವುದಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Mon, 17 July 23