ಕೊಲ್ಕತ್ತಾ: ಟಿಎಂಸಿ ಪಕ್ಷದ ಕಾರ್ಯಕರ್ತರಿಂದ ತೊಂದರೆಗೀಡಾದ ಪಶ್ಚಿಮ ಬಂಗಾಳದ ಸಾವಿರಾರು ತಾಯಂದಿರ, ಸಹೋದರಿಯರ ಪ್ರತೀಕವೇ ಶೋಭಾ ಮಜೂಮ್ದಾರ್. ಅವರ ಸಾವಿಗೆ ಕಾರಣವಾದವರ ವಿರುದ್ಧ ಬಂಗಾಳದ ಮತದಾರರು ನಿರ್ಧಾರ ತಳೆಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಜಯನಗರದಲ್ಲಿ ನಡೆದ ಸಾರ್ವಜನಿಕ ಚುನಾವಣಾ ಭಾಷಣದಲ್ಲಿ ಹೇಳಿದರು. ‘ಮಮತಾ ಬ್ಯಾನರ್ಜಿಯವರೇ, ನಿಮಗೆ ಯಾರಿಗಾದರೂ ಸಮಸ್ಯೆ ಉಂಟುಮಾಡಬೇಕು ಎಂದಿದ್ದರೆ, ನನಗೆ ಮಾಡಿ. ಅದನ್ನು ಬಿಟ್ಟು ಜನಸಾಮಾನ್ಯರಿಗೆ ತೊಂದರೆ ನೀಡಬೇಡಿ. ರಾಮಕೃಷ್ಣ ಪರಮಹಂಸ, ಚೈತನ್ಯ ಮಹಾಪ್ರಭು ಮತ್ತು ಸ್ವಾಮಿ ವಿವೇಕಾನಂದ ಮೊದಲಾದ ವ್ಯಕ್ತಿತ್ವಗಳ ಹಿನ್ನೆಲೆಯ ಪಶ್ಚಿಮ ಬಂಗಾಳದ ಸಾಮಾನ್ಯ ಜನರಿಗೆ ಸಮಸ್ಯೆ ಕೊಡಲು ನಾನು ಬಿಡುವುದಿಲ್ಲ’ ಎಂದು ಪ್ರಧಾನಿ ಮೋದಿ ಗುಡುಗಿದರು.
ಮೊದಲ ಹಂತದ ಚುನಾವಣೆಯ ವೇಳೆಯಲ್ಲಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಹೊರಗಿನ ನಾಯಕರಿಗೆ ಪತ್ರ ಬರೆದು ಬೆಂಬಲ ಕೋರಿದರು. ಆದರೆ ಕೆಲ ದಿನಗಳ ಮುನ್ನ ಪಶ್ಚಿಮ ಬಂಗಾಳದ ಹೊರಗಿನ ಕೆಲವು ನಾಯಕರನ್ನು ಮಮತಾ ಬ್ಯಾನರ್ಜಿ ಹೊರಗಿನವರು ಎಂದು ದೂಷಿಸಿದ್ದರು. ಹೀಗೆ ಪತ್ರ ಬರೆದಿದ್ದ ಅವರೇ, ಸ್ವತಃ ಪಶ್ಚಿಮ ಬಂಗಾಳದ ಹೊರಗಿನ ನಾಯಕರ ಬೆಂಬಲ ಕೋರುವ ಮೂಲಕ ತಮ್ಮ ದ್ವಂದ್ವ ಮುಖವನ್ನು ಸಾಬೀತುಪಡಿಸಿದರು ಎಂದು ಪ್ರಧಾನಿ ಮೋದಿ ಟಿಎಂಸಿ ಮುಖ್ಯಸ್ಥೆಯ ವಿರುದ್ಧ ಹರಿಹಾಯ್ದರು.
West Bengal: BJP supporters at Uluberia wear t-shirts with ‘Raag Keno Didi’ (Why Angry, Didi?) written on them.
Prime Minister Narendra Modi will address a public rally here shortly. #WestBengalElections2021 pic.twitter.com/7AICdxoPzE
— ANI (@ANI) April 1, 2021
ಕೆಲ ದಿನಗಳ ಹಿಂದೆ ನಾನು ಬಾಂಗ್ಲಾದೇಶಕ್ಕೆ ತೆರಳಿದ್ದ ವೇಳೆ ಅಲ್ಲಿನ ಹಿಂದೂ ದೇವಾಲಯಗಳಿಗೆ ಭೇಟಿಯಿತ್ತು ದರ್ಶನ ಪಡೆದಿದ್ದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಾನು ಬಾಂಗ್ಲಾದೇಶ ದೇವಸ್ಥಾನಗಳಿಗೆ ಭೇಟಿ ನೀಡಿದ್ದನ್ನು ಟೀಕಿಸಿದರು. ಅವರಿಗೆ ನನ್ನ ದೇವಸ್ಥಾನಗಳ ಭೇಟಿಯನ್ನು ಸಹಿಸಲು ಸಾಧ್ಯವಾಗಲಿಲ್ಲ. ಹಾಗಾದರೆ ಅವರಿಗೆ, ದೇವಸ್ಥಾನಗಳಿಗೆ ಭೇಟಿ ನೀಡುವುದು ಎಂದರೇ ಇಷ್ಟವಿಲ್ಲವೇ ಎಂದು ಪ್ರಧಾನಿ ಮೋದಿ ಟೀಕಿಸಿದರು.
ಸಿದ್ದಗಂಗಾ ಶ್ರೀಗಳ ಸ್ಮರಿಸಿದ ಪ್ರಧಾನಿ ಮೋದಿ.. ಉದಾತ್ತ ಆಲೋಚನೆಗಳ ಸ್ವಾಮೀಜಿಗೆ ಶಿರಬಾಗಿ ನಮಿಸುವೆ ಎಂದ್ರು
Published On - 3:57 pm, Thu, 1 April 21