Sign In

By signing in or creating an account, you agree with Associated Broadcasting Company's Terms & Conditions and Privacy Policy.

Good Friday 2021: ಬದುಕಿನುದ್ದಕ್ಕೂ ಪ್ರೀತಿ, ಮಾನವೀಯ ಮೌಲ್ಯಗಳನ್ನು ಸಾರಿದ ಏಸುವಿನ ಮರಣದ ಶೋಕದ ದಿನ ಈ ಗುಡ್​ಫ್ರೈಡೇ..

ಗುಡ್ ಫ್ರೈಡೇ ಏಸುವಿನ ಮರಣದ ದಿನವನ್ನು ಬಿಂಬಿಸಿದರೆ, ಈಸ್ಟರ್​ ಭಾನುವಾರ ಅವರ ಪುನರ್ಜನ್ಮದ ಪ್ರತೀಕವಾಗಿದೆ. ಏಸು ಶಿಲುಬೆಗೆ ಏರಿದ ಮೂರು ದಿನದಲ್ಲಿ ಮತ್ತೆ ಪುನರ್ಜನ್ಮ ಪಡೆದು, ಮತ್ತೆ ತಮ್ಮ ಅನಿಯಾಯಿಗಳೊಂದಿಗೆ 40 ದಿನ ಕಳೆದರು ಎಂಬ ನಂಬಿಕೆ ಇದೆ.

Good Friday 2021: ಬದುಕಿನುದ್ದಕ್ಕೂ ಪ್ರೀತಿ, ಮಾನವೀಯ ಮೌಲ್ಯಗಳನ್ನು ಸಾರಿದ ಏಸುವಿನ ಮರಣದ ಶೋಕದ ದಿನ ಈ ಗುಡ್​ಫ್ರೈಡೇ..
ಏಸು ಕ್ರಿಸ್ತನನ್ನು ಶಿಲುಬೆ ಏರಿಸಿದ ಪ್ರಾಥಿನಿಧಿಕ ಚಿತ್ರ
Follow us
Lakshmi Hegde
| Updated By: ಆಯೇಷಾ ಬಾನು

Updated on:Apr 02, 2021 | 11:28 AM

ಗುಡ್​ ಫ್ರೈ ಡೇ.. ಯೇಸುವನ್ನು ಶಿಲುಬೆಗೆ ಏರಿಸಿದ ದಿನವನ್ನು ಸ್ಮರಿಸಲು ಕ್ರಿಶ್ಚಿಯನ್ ಸಮುದಾಯದವರು ಆಚರಿಸುವ ಒಂದು ಹಬ್ಬ. ಈ ಬಾರಿ ಏಪ್ರಿಲ್ 2ರಂದು ಗುಡ್ ಫ್ರೈಡೇ ಆಚರಣೆ ನಡೆಯಲಿದೆ. ಇದನ್ನು ಪವಿತ್ರ ಶುಕ್ರವಾರ, ಮಹಾ ಶುಕ್ರವಾರ, ಕಪ್ಪು ಶುಕ್ರವಾರ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಹಾಗೇ, ಕ್ರಿಶ್ಚಿಯನ್ನರು ಇದನ್ನು ಪ್ರಾಯಶ್ಚಿತ್ತ, ದುಃಖ ಮತ್ತು ಉಪವಾಸದ ದಿನವೆಂದು ಪರಿಗಣಿಸುತ್ತಾರೆ. ಇದನ್ನೊಂದು ವಿಶೇಷ ದಿನವೆಂದು ಭಾವಿಸಿ, ಏಸು ಕ್ರಿಸ್ತ ಬದುಕಿನುದ್ದಕ್ಕೂ ಸಾರಿದ ಪ್ರೀತಿ, ಮಾನವೀಯ ಮೌಲ್ಯಗಳ ಸಂದೇಶವನ್ನು ನೆನಪಿಸಿಕೊಳ್ಳುತ್ತಾರೆ. ಬೆಳಗ್ಗೆಯಿಂದಲೂ ಚರ್ಚ್​ಗಳಲ್ಲಿ ಪ್ರಾರ್ಥನೆ, ಅವರದ್ದೇ ಆದ ರೀತಿಯ ವ್ರತಗಳು ನಡೆಯುತ್ತವೆ.

ಗುಡ್​ಫ್ರೈಡೇ ಪದ ಬಳಕೆ ಎಲ್ಲಿಂದ? ಈ ಗುಡ್​ಫ್ರೈಡೇ ಎಂಬ ಶಬ್ದ ಮೊದಲು ಬಳಕೆಯಾಗಿದ್ದು 1290ರಲ್ಲಿ, ದಿ ಸೌತ್​ ಇಂಗ್ಲಿಷ್​ ಲೆಜೆಂಡರಿ ಎಂಬ ಹ್ಯಾಗೋಗ್ರಾಫಿಕ್ ಪುಸ್ತಕದಲ್ಲಿ ಎಂದು ಹೇಳಲಾಗಿದೆ. ಹಾಗೇ, ಯೇಸುಕ್ರಿಸ್ತ ಎಲ್ಲ ಮಾನವರ ಮೇಲೆ ತನಗಿರುವ ಅಗಾಧ ಪ್ರೀತಿಯನ್ನು ಸಾರಿದ ದಿನವನ್ನಾಗಿ ಗುಡ್​ ಫ್ರೈಡೇ ಆಚರಿಸಲಾಗುತ್ತದೆ ಎಂದು 1885-1960ರವರೆಗೆ ಯುಎಸ್​​ನ ಕ್ಯಾಥೋಲಿಕ್​ ಶಾಲೆಯಲ್ಲಿ ಬಳಕೆಯಾದ ಪಠ್ಯ ಬಾಲ್ಟಿಮೋರ್ ಕ್ಯಾಟೆಕಿಸಮ್​ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.​

ಹಾಗೇ, ಗುಡ್​ ಫ್ರೈಡೇ ಬಗ್ಗೆ ಯಾವುದೇ ಒಂದು ನಿರ್ದಿಷ್ಟತೆ, ಸ್ಪಷ್ಟತೆ ಇಲ್ಲವೆಂದು 1907ರ ಕ್ಯಾಥೋಲಿಕ್ ಎನ್ಕ್ಲೋಪೀಡಿಯಾದಲ್ಲಿ ಹೇಳಲಾಗಿದೆ. ಇನ್ನೂ ಕೆಲವರು ಗಾಡ್​ ಫ್ರೈಡೇ (GOD FRIDAY)ಯಿಂದಲೇ ಗುಡ್​ ಫ್ರೈಡೇ ಆಗಿದೆ ಎಂದೂ ನಂಬುತ್ತಾರೆ.

ಗುಡ್​ಫ್ರೈಡೇ ಆಚರಣೆ ಹೇಗೆ? ಗುಡ್​ಫ್ರೈಡೇ ದಿನ ಕ್ರಿಶ್ಚಿಯನ್ನರು ಜೀಸಸ್​​ ಸ್ಮರಣೆ ಮಾಡುತ್ತಾರೆ. ಕೆಲವರು ಶೋಕದ ಸಂಕೇತವಾಗಿ ಕಪ್ಪು ಬಟ್ಟೆಯನ್ನೂ ಧರಿಸುತ್ತಾರೆ. ಈ ದಿನ ಚರ್ಚ್​​ನಲ್ಲಿ ಕ್ಯಾಂಡಲ್​ ಹಚ್ಚುವುದಿಲ್ಲ.. ಬೆಲ್​ ರಿಂಗ್​ ಮಾಡುವುದಿಲ್ಲ. ಈ ದಿನವನ್ನು ಶುಭದಿನ ಎಂದು ಪರಿಗಣಿಸಿ, ಹಲವರು ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಗಿಡಗಳನ್ನು ನೆಡುತ್ತಾರೆ.. ತಮ್ಮ ಕೈಲಾಗಿದ್ದನ್ನು ದಾನ ಮಾಡುತ್ತಾರೆ.

ಏನಿದು ಈಸ್ಟರ್​ ಭಾನುವಾರ? ಗುಡ್ ಫ್ರೈಡೇ ಏಸುವಿನ ಮರಣದ ದಿನವನ್ನು ಬಿಂಬಿಸಿದರೆ, ಈಸ್ಟರ್​ ಭಾನುವಾರ ಅವರ ಪುನರ್ಜನ್ಮದ ಪ್ರತೀಕವಾಗಿದೆ. ಏಸು ಶಿಲುಬೆಗೆ ಏರಿದ ಮೂರು ದಿನದಲ್ಲಿ ಮತ್ತೆ ಪುನರ್ಜನ್ಮ ಪಡೆದು, ಮತ್ತೆ ತಮ್ಮ ಅನುಯಾಯಿಗಳೊಂದಿಗೆ 40 ದಿನ ಕಳೆದರು ಎಂಬ ನಂಬಿಕೆ ಇದೆ. ಈ ದಿನವನ್ನು ಈಸ್ಟರ್​ ಭಾನುವಾರವನ್ನಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ: ಏಸು ಬದುಕಿನ ಗುಟ್ಟು; ಅಷ್ಟೆಲ್ಲಾ ಜನಬೆಂಬಲವಿದ್ದರೂ ರಾಜನಾಗದೆ ಶಿಲುಬೆ ಏರುವ ಮೂಲಕ ಕೊಟ್ಟ ಸಂದೇಶ ಒಂದೆರೆಡಲ್ಲ

ಏಸು ಪ್ರತಿಮೆ ಕಾಮಗಾರಿ ಸ್ಥಗಿತ ಮಾಡಿರುವುದು ಸರ್ಕಾರ ಅಲ್ಲ-ಅಶೋಕ್

Published On - 11:25 am, Fri, 2 April 21

ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ