ಪ್ರಾಥಮಿಕ ಶಿಕ್ಷಕರ ಹುದ್ದೆಗಳನ್ನು ರದ್ದುಗೊಳಿಸಿದ ನ್ಯಾಯಾಲಯದ ಆದೇಶ ಬಗ್ಗೆ ಮೇಲ್ಮನವಿ ಸಲ್ಲಿಸುತ್ತೇವೆ: ಮಮತಾ ಬ್ಯಾನರ್ಜಿ

|

Updated on: May 16, 2023 | 1:44 PM

ರಾಜ್ಯ ಸರ್ಕಾರಿ ಶಿಕ್ಷಕರು ತಿಂಗಳ ಮೊದಲ ದಿನವೇ ವೇತನ ಪಡೆಯುತ್ತಿದ್ದಾರೆ. ಇದು ಎಡರಂಗದ ಆಡಳಿತದಲ್ಲಿ ಇರಲಿಲ್ಲ ಎಂದ ಮಮತಾ ರಾಜ್ಯ ಸರ್ಕಾರಿ ನೌಕರರನ್ನು ಪ್ರಚೋದಿಸಲು ಸಿಪಿಐ(ಎಂ) ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಆರೋಪಿಸಿದರು

ಪ್ರಾಥಮಿಕ ಶಿಕ್ಷಕರ ಹುದ್ದೆಗಳನ್ನು ರದ್ದುಗೊಳಿಸಿದ ನ್ಯಾಯಾಲಯದ ಆದೇಶ ಬಗ್ಗೆ ಮೇಲ್ಮನವಿ ಸಲ್ಲಿಸುತ್ತೇವೆ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us on

ಕೋಲ್ಕತ್ತಾ: ರಾಜ್ಯ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಸುಮಾರು 36,000 ಪ್ರಾಥಮಿಕ ಶಿಕ್ಷಕರ ಉದ್ಯೋಗಗಳನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ (Calcutta High Court) ಆದೇಶವನ್ನು ತಮ್ಮ ಸರ್ಕಾರ ಪ್ರಶ್ನಿಸಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸೋಮವಾರ ಹೇಳಿದ್ದಾರೆ. ಕೆಲಸ ಕಳೆದುಕೊಂಡ ಶಿಕ್ಷಕರು ಮತ್ತು ಅವರ ಕುಟುಂಬ ಸದಸ್ಯರು ಖಿನ್ನತೆಗೆ ಒಳಗಾಗಬಾರದು.  ಸರ್ಕಾರ ಅವರೊಂದಿಗಿದೆ ಎಂದಿದ್ದಾರೆ ಮಮತಾ. ರಾಜ್ಯ ಸರ್ಕಾರಿ ನೌಕರರು ತಮ್ಮ ಡಿಎ ಹೆಚ್ಚಳ ಮತ್ತು ಕೇಂದ್ರ ಸರ್ಕಾರಿ ಸಿಬ್ಬಂದಿಗೆ ಸರಿಸಮಾನವಾಗಿ ತರಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ಆಂದೋಲನದಿಂದಾಗಿ ಆ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಕೆಲಸ ಕಳೆದುಕೊಂಡ ಈ 36,000 (ಶಿಕ್ಷಕರು) ಕುಟುಂಬಗಳಿಂದ ನಾವು ಮನವಿಗಳನ್ನು ಸ್ವೀಕರಿಸುತ್ತಿದ್ದೇವೆ. ನನಗೆ ತುಂಬಾ ದುಃಖವಾಗಿದೆ. ನಾವು ವಿಭಾಗೀಯ ಪೀಠವನ್ನು ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ರಾಜ್ಯ ಸಚಿವಾಲಯದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಮಮತಾ ಹೇಳಿದ್ದಾರೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಸರಿಯಾದ ವಿಧಾನವನ್ನು ಅನುಸರಿಸದ ಕಾರಣ ರಾಜ್ಯ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ 36,000 ಪ್ರಾಥಮಿಕ ಶಿಕ್ಷಕರ ನೇಮಕಾತಿಗಳನ್ನು ರದ್ದುಗೊಳಿಸುವಂತೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಖಿನ್ನರಾಗಬೇಡಿ, ನಮ್ಮ ಸರ್ಕಾರ ನಿಮ್ಮೊಂದಿಗಿದೆ ಎಂಬುದನ್ನು ನೆನಪಿಡಿ, ಇದು ನಮ್ಮ ಜವಾಬ್ದಾರಿ ಮತ್ತು ನಾವು ಈ ವಿಷಯದ ಬಗ್ಗೆ ಕಾನೂನು ನಿಯಮಗಳ ಪ್ರಕಾರ ಹೋರಾಡುತ್ತೇವೆ. ಕೆಲವರು ಅವರು ತರಬೇತಿ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ ಆದರೆ ಅದು ಸರಿಯಲ್ಲ. ಅವರು ತರಬೇತಿ ಪಡೆದಿದ್ದಾರೆ. ಆದರೆ ನಾನು ಭ್ರಷ್ಟಾಚಾರ ಅಥವಾ ಅಪರಾಧ ಚಟುವಟಿಕೆಯನ್ನು ಬೆಂಬಲಿಸುವುದಿಲ್ಲ.

ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ಡಿಎ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರಿ ನೌಕರರು ಆಂದೋಲನ ನಡೆಸುತ್ತಿರುವ ಬಗ್ಗೆ ಮಾತನಾಡಿದ ಅವರು ಕೇಂದ್ರ ಸರ್ಕಾರಿ ನೌಕರಿ ಪಡೆಯಿರಿ, ನಿಮಗೆ ಹೆಚ್ಚು ಸಿಗುತ್ತದೆ, ನೀವು ರಾಜ್ಯ ಸರ್ಕಾರಿ ನೌಕರರಾಗಿದ್ದಾಗ, ನೀವು ರಾಜ್ಯದ ನಿಯಮವನ್ನು ಅನುಸರಿಸಬೇಕು. ಡಿಎ ಕಡ್ಡಾಯವಲ್ಲ ಆದರೆ ಐಚ್ಛಿಕವಾಗಿದೆ. ನನ್ನ ಬಳಿ ಹಣವಿದ್ದರೆ ಮತ್ತು ನಿಮ್ಮ ಕೆಲಸದಿಂದ ನಾನು ತೃಪ್ತರಾಗಿದ್ದರೆ, ನಾನು ನಿಮಗೆ ಪ್ರತಿಫಲವಾಗಿ ಹೆಚ್ಚಿನದ್ದನ್ನು ಪಾವತಿಸುತ್ತೇನೆ. ಕೇಂದ್ರವು ತನ್ನ ಉದ್ಯೋಗಿಗಳ ಕಾರ್ಯಕ್ಷಮತೆಯ ಪರಿಶೀಲನೆಯನ್ನು ನಡೆಸುತ್ತದೆ ಅದನ್ನು ನಾವು ಮಾಡುವುದಿಲ್ಲ. ಆದರೆ ನಾನು ದುರ್ಬಲ ಎಂದು ಭಾವಿಸಬೇಡಿ. ಕೇಂದ್ರದ ಸೇವಾ ನಿಯಮಗಳು ಮತ್ತು ಹಣಕಾಸು ನೀತಿಯು ರಾಜ್ಯ ಸರ್ಕಾರಕ್ಕಿಂತ ಭಿನ್ನವಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರಿ ಶಿಕ್ಷಕರು ತಿಂಗಳ ಮೊದಲ ದಿನವೇ ವೇತನ ಪಡೆಯುತ್ತಿದ್ದಾರೆ. ಇದು ಎಡರಂಗದ ಆಡಳಿತದಲ್ಲಿ ಇರಲಿಲ್ಲ ಎಂದ ಮಮತಾ ರಾಜ್ಯ ಸರ್ಕಾರಿ ನೌಕರರನ್ನು ಪ್ರಚೋದಿಸಲು ಸಿಪಿಐ(ಎಂ) ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಆರೋಪಿಸಿದರು. ಸಿಪಿಐ(ಎಂ) ನಾಯಕರಿಗೆ ಕೆಲಸವಿಲ್ಲ ಮತ್ತು ಅವರು ಲಕ್ಷಾಂತರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವಂತೆ ಸಂಚು ರೂಪಿಸುತ್ತಿದ್ದಾರೆ. ನೀವು ರಾಜಕೀಯವಾಗಿ ಗಳಿಸುತ್ತೀರಿ ಮತ್ತು ನಿಮ್ಮ ಸ್ಥಾನವನ್ನು ಬಲಪಡಿಸುತ್ತೀರಿ ಎಂದು ನೀವು ಭಾವಿಸುತ್ತೀರಾ? ಎಂದು ಮಮತಾ ಪ್ರಶ್ನಿಸಿದ್ದಾರೆ.

ಹಿಂದಿನ ದಿನ ಸುಮಾರು 36,000 ಪ್ರಾಥಮಿಕ ಶಿಕ್ಷಕರ ನೇಮಕಾತಿಯನ್ನು ರದ್ದುಗೊಳಿಸಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಗೆ ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿತು.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಹಿಂದೂಗಳ ಮತಾಂತರ; ‘ದಿ ಕೇರಳ ಸ್ಟೋರಿ’ ಇಲ್ಲಿ ನಡೆಯಲು ಬಿಡುವುದಿಲ್ಲ ಎಂದ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರ ಏಕ ಪೀಠದ ಮೇ 12 ರ ಆದೇಶವನ್ನು ಪ್ರಶ್ನಿಸಲು ನ್ಯಾಯಾಲಯದ ಅನುಮತಿ ಕೋರಿ ನ್ಯಾಯಮೂರ್ತಿ ಸುಬ್ರತಾ ತಾಲೂಕ್ದಾರ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಡಳಿಯ ವಕೀಲ ಲಕ್ಷ್ಮಿ ಗುಪ್ತಾ ಈ ವಿಷಯವನ್ನು ಪ್ರಸ್ತಾಪಿಸಿದರು. ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ಅವರನ್ನೊಳಗೊಂಡ ವಿಭಾಗೀಯ ಪೀಠವು ಮೇಲ್ಮನವಿ ಸಲ್ಲಿಸಲು ಮಂಡಳಿಗೆ ಅನುಮತಿ ನೀಡಿದೆ.

ಪ್ರಾಥಮಿಕ ಶಿಕ್ಷಕರಾಗಿ ನೇಮಕಗೊಳ್ಳುವ ಸಮಯದಲ್ಲಿ ತರಬೇತಿ ಪಡೆಯದ ಸುಮಾರು 36,000 ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಗೊಳಿಸುವಂತೆ ಆದೇಶಿಸಿದ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಪಶ್ಚಿಮ ಬಂಗಾಳದಲ್ಲಿ ಈ ಪ್ರಮಾಣದ ಭ್ರಷ್ಟಾಚಾರ ಎಂದಿಗೂ ನಡೆದಿರಲ್ಲಿ ಎಂದಿದ್ದಾರೆ. 2016ರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಂಡಳಿಯ ಶಿಫಾರಸಿನ ಮೇರೆಗೆ ಉದ್ಯೋಗ ಪಡೆದ ಶಿಕ್ಷಕರಿಗೆ ಮೇ 12ರಿಂದ ನಾಲ್ಕು ತಿಂಗಳ ಕಾಲ ಪ್ರಾಥಮಿಕ ಶಾಲೆಯ ಅರೆ ಶಿಕ್ಷಕರಿಗೆ ಸಮಾನವಾದ ಸಂಭಾವನೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದು ಏಕ ಪೀಠ ಆದೇಶಿಸಿದೆ.

2016 ರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಮಾತ್ರ ಮೂರು ತಿಂಗಳೊಳಗೆ ನೇಮಕಾತಿ ವ್ಯಾಯಾಮಕ್ಕೆ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಮಂಡಳಿಗೆ ನಿರ್ದೇಶನ ನೀಡಿತ್ತು. ಈ ಮಧ್ಯೆ ತರಬೇತಿ ಅರ್ಹತೆಗಳನ್ನು ಪಡೆದ ಅಭ್ಯರ್ಥಿಗಳನ್ನು ಸಹ ಈ ಪ್ರಕ್ರಿಯೆಯಲ್ಲಿ ಸೇರಿಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ