Assembly Election 2021 Date LIVE: ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ, ಮೇ 2ಕ್ಕೆ ಮತ ಎಣಿಕೆ

|

Updated on: Feb 26, 2021 | 7:25 PM

WB, Kerala, TN, Assam and Puducherry Election 2021 Result and Voting Schedule: ಕೊರೊನಾವೈರಸ್ ಸಾಂಕ್ರಾಮಿಕದ ಹೊತ್ತಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಇದಾಗಿದ್ದು, ಕಟ್ಟು ನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

Assembly Election 2021 Date LIVE: ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ, ಮೇ 2ಕ್ಕೆ ಮತ ಎಣಿಕೆ
ಚುನಾವಣಾ ಆಯೋಗ
Follow us on

Assembly Election 2021 Date LIVE: ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ. ದೇಶ ಗೆಲ್ಲುವ ಹುಮ್ಮಸ್ಸಿನಲ್ಲಿ ಬಿಜೆಪಿಯಿದ್ದರೆ, ಕಾಂಗ್ರೆಸ್​ಗೆ ಈಗ ಅಸ್ತಿತ್ವ ಸಾಬೀತುಪಡಿಸಿಕೊಳ್ಳುವ ತವಕ. ರಾಜಕಾರಣದಲ್ಲಿ ನಮ್ಮ ಮಹತ್ವ ಕಡಿಮೆಯಾಗಿಲ್ಲ ಎಂದು ಸಾರಿಹೇಳಬೇಕಾದ ಅನಿವಾರ್ಯತೆ ಸ್ಥಳೀಯ ಪಕ್ಷಗಳದ್ದು. ಭೌಗೋಳಿಕವಾಗಿಯೂ ಈ ಚುನಾವಣೆ ಮಹತ್ವದ್ದು. ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದ ಆಚೆಗೆ ಪ್ರಭಾವ ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿರುವ ಬಿಜೆಪಿಗೆ ಪುದುಚೇರಿ, ತಮಿಳುನಾಡು ಬಹುಮುಖ್ಯ.

ಬಿಜೆಪಿಯ ಹಿಂದಿನ ಆವೃತ್ತಿ ಎನಿಸಿದ್ದ ಜನಸಂಘದ ಸಂಸ್ಥಾಪಕರಾದ ಶ್ಯಾಂ ಪ್ರಸಾದ್ ಮುಖರ್ಜಿಯವರ ತವರು ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಶತಾಯಗತಾಯ ಕಮಲ ಅರಳಿಸಲೇಬೇಕು ಎಂಬ ದೃಢ ಸಂಕಲ್ಪದೊಂದಿಗೆ ಬಿಜೆಪಿ ಅಭಿಯಾನ ನಡೆಸಿದೆ. ‘ಪಶ್ಚಿಮ ಬಂಗಾಳದಲ್ಲಿ ಗುಜರಾತಿಗಳ ಆಳ್ವಿಕೆಗೆ ಅವಕಾಶ ಕೊಡುವುದಿಲ್ಲ’ ಎಂದು ದೀದಿಯೂ ಸೆಡ್ಡು ಹೊಡೆದಿದ್ದಾರೆ.

Published On - 5:48 pm, Fri, 26 February 21