AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಹ್ ಈಗ ಸಿಕ್ದೆ ನೋಡು, ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹೆಂಡತಿಯನ್ನು ಮತಗಟ್ಟೆಯಲ್ಲಿ ಕಂಡ ಪತಿ ಮಾಡಿದ್ದೇನು?

ಪಶ್ಚಿಮ ಬಂಗಾಳದ ಮತದಾನದ ವೇಳೆ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪತ್ನಿಯನ್ನು ಪತಿಯೊಬ್ಬ ತಾರಾಬರಿ ಮತಗಟ್ಟೆಯಲ್ಲಿ ಕಂಡುಕೊಂಡಿದ್ದಾರೆ. ತನ್ನ ಹಳೆಯ ವಿಳಾಸದ ಮತಗಟ್ಟೆಗೆ ಆಕೆ ಬರುವಳೆಂದು ಊಹಿಸಿದ್ದ ಪತಿ, ಗಂಟೆಗಟ್ಟಲೆ ಕಾದಿದ್ದಾನೆ. ಪತ್ನಿ ಬರುತ್ತಿದ್ದಂತೆ ಹಿಡಿದು ನಿಂದಿಸಲು ಶುರುಮಾಡಿದಾಗ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಮತದಾರರ ಪಟ್ಟಿಯಿಂದ ತನ್ನ ಹೆಸರು ಅಳಿಸುವಂತೆ ಪತಿ ಬೇಡಿಕೆ ಇಟ್ಟರೂ, ಆಕೆಗೆ ಮತ ಚಲಾಯಿಸಲು ಅವಕಾಶ ನೀಡಲಾಯಿತು.

ಓಹ್ ಈಗ ಸಿಕ್ದೆ ನೋಡು, ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹೆಂಡತಿಯನ್ನು ಮತಗಟ್ಟೆಯಲ್ಲಿ ಕಂಡ ಪತಿ ಮಾಡಿದ್ದೇನು?
ಮಹಿಳೆ Image Credit source: Google Gemini
ನಯನಾ ರಾಜೀವ್
|

Updated on:Apr 24, 2026 | 3:18 PM

Share

ಕೋಲ್ಕತ್ತಾ, ಏಪ್ರಿಲ್ 24: ಓಹ್ ಈಗ ಸಿಕ್ದೆ ನೋಡು ಎಲ್ಲಿದ್ದೆ ಇಷ್ಟು ದಿನ? ಇದು ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಪತ್ನಿಯನ್ನು ಮತಗಟ್ಟೆಯಲ್ಲಿ ಕಂಡಾಗಿ ಪತಿ ಕೇಳಿದ ಪ್ರಶ್ನೆ ಇದು. ಪಶ್ಚಿಮ ಬಂಗಾಳ(West Bengal)ದಲ್ಲಿ ಏಪ್ರಿಲ್ 23ರಂದು ನಡೆದ ಮೊದಲ ಹಂತದ ಮತದಾನದ ಸಂದರ್ಭದಲ್ಲಿ ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ಪತ್ನಿಯನ್ನು ಪತಿ ಕಂಡಿದ್ದಾರೆ.

ತಾರಾಬರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 25/238 ರ ಹೊರಗೆ ಒಬ್ಬ ವ್ಯಕ್ತಿ ಅತಿಯಾದ ಬಿಸಿಲನ್ನೂ ಲೆಕ್ಕಿಸದೆ ಗಂಟೆಗಟ್ಟಲೆ ಓಡಾಡುತ್ತಿದ್ದ. ಬೆವರಿನಿಂದ ಮೈ ನೆನೆದಿದ್ದರೂ ಅವರ ಕಣ್ಣುಗಳು ಮಾತ್ರ ಮತಗಟ್ಟೆಯ ಒಳಗೆ ಬರುವ ಪ್ರತಿಯೊಬ್ಬ ಮಹಿಳೆಯ ಮುಖವನ್ನೂ ಜಾಲಾಡುತ್ತಿದ್ದವು.

ಮಧ್ಯಾಹ್ನ ಸರಿಯಾಗಿ 2 ಗಂಟೆಯ ಸಮಯ. ಒಬ್ಬ ಮಹಿಳೆ ಕೈಯಲ್ಲಿ ಮತದಾರರ ಗುರುತಿನ ಚೀಟಿ (Voter ID) ಹಿಡಿದು ಸಂಭ್ರಮದಿಂದ ಮತಗಟ್ಟೆಯತ್ತ ಹೆಜ್ಜೆ ಹಾಕಿದಳು. ಅವಳು ಹತ್ತಿರ ಬರುತ್ತಿದ್ದಂತೆಯೇ, ಗಂಟೆಗಟ್ಟಲೆ ಹಸಿದ ಹುಲಿಯಂತೆ ಕಾಯುತ್ತಿದ್ದ ಆ ವ್ಯಕ್ತಿ ಒಮ್ಮೆಗೆ ಅವಳ ಮೇಲೆ ಎರಗಿದ, ಹಿಂದಿನಿಂದ ಅವಳ ಕೂದಲನ್ನು ಹಿಡಿದು ಎಳೆದ ಆತ, ಎಲ್ಲರ ಮುಂದೆ ಅವಳನ್ನು ನಿಂದಿಸಲು ಶುರು ಮಾಡಿದ.

ಮತಗಟ್ಟೆಯಲ್ಲಿ ಭದ್ರತೆಗೆ ನಿಂತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ (CAPF) ಸಿಬ್ಬಂದಿ ಕೂಡಲೇ ಧಾವಿಸಿ ಬಂದು ಮಹಿಳೆಯನ್ನು ಆತನ ಹಿಡಿತದಿಂದ ಬಿಡಿಸಿದರು. ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂತು. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಆ ಮಹಿಳೆಯ ಪತಿ, ಎರಡು ವರ್ಷಗಳ ಹಿಂದೆ ಆಕೆ ಮನೆ ಬಿಟ್ಟು ಓಡಿಹೋಗಿದ್ದಳು. ಇನ್ನೊಬ್ಬ ಪುರುಷನೊಂದಿಗೆ ಹೊಸ ಜೀವನ ಆರಂಭಿಸಿದ್ದ ಆಕೆ ಪತಿಯ ನೆನಪೇ ಇರಲಿಲ್ಲ.

ಮತ್ತಷ್ಟು ಓದಿ: Video: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ದೋಣಿ ವಿಹಾರ ನಡೆಸಿದ ಪ್ರಧಾನಿ ಮೋದಿ

ಅವಳನ್ನು ಪತ್ತೆಹಚ್ಚಲು ಆತ ಬಳಸಿದ ತಂತ್ರ ನಿಜಕ್ಕೂ ಅದ್ಭುತವಾಗಿತ್ತು. ರಾಜ್ಯದಲ್ಲಿ ನಡೆಯುತ್ತಿರುವ ಕಟ್ಟುನಿಟ್ಟಿನ ಚುನಾವಣಾ ನಿಯಮಗಳ ಪ್ರಕಾರ, ಮತದಾನ ಮಾಡಲು ಆಕೆ ತನ್ನ ಹಳೆಯ ವಿಳಾಸದ ಮತಗಟ್ಟೆಗೆ ಬರಲೇಬೇಕು ಎಂದು ಆತ ಲೆಕ್ಕ ಹಾಕಿದ್ದ. ಆತನ ಲೆಕ್ಕಾಚಾರ ಹುಸಿಯಾಗಲಿಲ್ಲ; ಮತದಾನದ ಹಕ್ಕು ಚಲಾಯಿಸಲು ಬಂದ ಪತ್ನಿ ಪತಿಯ ಬಲೆಗೆ ಬಿದ್ದಿದ್ದಳು.

ಪೋಲೀಸರು ಆತನನ್ನು ವಶಕ್ಕೆ ಪಡೆದಾಗ ಆತ ಒಂದು ವಿಚಿತ್ರ ಬೇಡಿಕೆ ಮುಂದಿಟ್ಟಿದ್ದಾನೆ, ಈಕೆಯ ವೋಟರ್ ಐಡಿಯಲ್ಲಿರುವ ನನ್ನ ಹೆಸರನ್ನು ಮೊದಲು ಅಳಿಸಿಹಾಕಿ, ಅದು ಅಳಿಸಿಹೋಗುವವರೆಗೆ ಈಕೆಗೆ ಮತ ಹಾಕಲು ಬಿಡಬೇಡಿ ಎಂದು ಕಿರುಚಾಡಿದ್ದ. ಆದರೆ ಚುನಾವಣಾ ಸಿಬ್ಬಂದಿ ಆತನ ಬೇಡಿಕೆಯನ್ನು ತಿರಸ್ಕರಿಸಿ, ಮಹಿಳೆಗೆ ಮತ ಚಲಾಯಿಸಲು ಅವಕಾಶ ನೀಡಿದರು.

ರಾಷ್ಟ್ರೀಯ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:17 pm, Fri, 24 April 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ