Bengal Panchayat Election Results: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪ್ರಾಬಲ್ಯ, 30 ಸಾವಿರಕ್ಕೂ ಅಧಿಕ ಪಂಚಾಯತ್ ಸ್ಥಾನಗಳಲ್ಲಿ ಗೆಲುವು

|

Updated on: Jul 12, 2023 | 10:14 AM

ಗಲಭೆ, ಹಿಂಸಾಚಾರದ ನಡುವೆ ಅಂತೂ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ(Panchayat Election) ನಡೆದು ಫಲಿತಾಂಶವೂ ಹೊರಬಿದ್ದಿದೆ.

Bengal Panchayat Election Results: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪ್ರಾಬಲ್ಯ, 30 ಸಾವಿರಕ್ಕೂ ಅಧಿಕ ಪಂಚಾಯತ್ ಸ್ಥಾನಗಳಲ್ಲಿ ಗೆಲುವು
ಟಿಎಂಸಿ ಗೆಲುವು
Follow us on

ಗಲಭೆ, ಹಿಂಸಾಚಾರದ ನಡುವೆ ಅಂತೂ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ(Panchayat Election) ನಡೆದು ಫಲಿತಾಂಶವೂ ಹೊರಬಿದ್ದಿದೆ. ಟಿಎಂಸಿ(TMC) ಭರ್ಜರಿ ಜಯಭೇರಿ ಬಾರಿಸಿದೆ. 74 ಸಾವಿರ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸಿದೆ, ಗ್ರಾಮ ಪಂಚಾಯತ್​ನಲ್ಲಿ 30,391 ಸ್ಥಾನಗಳಲ್ಲಿ, ತಾಲೂಕು ಪಂಚಾಯಿತಿಯ 2155 ಸ್ಥಾನಗಳಲ್ಲಿ, ಜಿಲ್ಲಾ ಪಂಚಾಯಿತಿಯ 88 ಸ್ಥಾನಗಳಲ್ಲಿ ಟಿಎಂಸಿ ಗೆಲುವು ದಾಖಲಿಸಿದೆ.

ಬಿಜೆಪಿಯು ಗ್ರಾಮ ಪಂಚಾಯತ್​ನ 8239 ಸ್ಥಾನಗಳಲ್ಲಿ, ತಾಲೂಕು ಪಂಚಾಯಿತಿಯ 214 ಸ್ಥಾನಗಳಲ್ಲಿ, ಜಿಲ್ಲಾ ಪಂಚಾಯಿತಿಯ 13 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಅಖಿಲ ಭಾರತ ಸೆಕ್ಯುಲರ್ ಫ್ರಂಟ್ ಮತ್ತು ಸ್ವತಂತ್ರರು ಸೇರಿದಂತೆ 1732 ಸ್ಥಾನಗಳಲ್ಲಿ ಗೆಲವಿನ ನಗೆ ಬೀರಿದ್ದಾರೆ.

ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯ ಮತ ಎಣಿಕೆಯ ದಿನದಂದು ವಿವಿಧ ಸ್ಥಳಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು ಮುಂದುವರೆದವು. ಮತ ಎಣಿಕೆಗೂ ಮುನ್ನವೇ ಹಿಂಸಾಚಾರದ ವರದಿಯಾಗಿದೆ. ದಿನ್ಹಾಟಾ, ಹೌರಾ, ಬಸಿರ್ಹತ್, ಕೂಚ್ ಬೆಹಾರ್, ಮಾಲ್ಡಾ, ದಕ್ಷಿಣ 24 ಪರಗಣ ಜಿಲ್ಲೆಗಳ ವಿವಿಧ ಮತ ಎಣಿಕೆ ಕೇಂದ್ರಗಳಲ್ಲಿ ಬಾಂಬ್ ಸ್ಫೋಟಗಳು ಮತ್ತು ಘರ್ಷಣೆಗಳು ನಡೆದಿವೆ ಎಂದು ವರದಿಯಾಗಿದೆ.

ಮತ್ತಷ್ಟು ಓದಿ:Bengal panchayat election results: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: 14,972 ಸ್ಥಾನಗಳಲ್ಲಿ ಟಿಎಂಸಿ ಮುನ್ನಡೆ

ಹಲವೆಡೆ ಭದ್ರತಾ ಪಡೆಗಳು ಲಾಠಿ ಚಾರ್ಜ್ ಮಾಡಬೇಕಾಯಿತು. ಈ ನಡುವೆ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ರಾಜ್ಯದ ಒಟ್ಟು 339 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಇಲ್ಲಿಯವರೆಗೆ ಬಂದಿರುವ ಟ್ರೆಂಡ್‌ಗಳ ಪ್ರಕಾರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಕ್ಷ ತನ್ನ ಅಂಚನ್ನು ಕಾಯ್ದುಕೊಳ್ಳುತ್ತಿದೆ. ವಿರೋಧ ಪಕ್ಷಗಳಾದ ಬಿಜೆಪಿ, ಸಿಪಿಎಂ ಮತ್ತು ಕಾಂಗ್ರೆಸ್‌ ಹಿಂದೆ ಬಿದ್ದಿವೆ.

ಈ ಬಾರಿಯ ಚುನಾವಣೆಯಲ್ಲಿ 37 ಮಂದಿ ಪ್ರಾಣ ಕಳೆದುಕೊಂಡಿದ್ದು, ಶನಿವಾರ ಮತದಾನದ ದಿನ 18 ಮಂದಿ ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿಯ ಬೃಹತ್ ಗೆಲುವಿಗಾಗಿ ಅಲ್ಲಿನ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:10 am, Wed, 12 July 23