ತಿರುವನಂತಪುರಂ: 2010ರಲ್ಲಿ ಮಂಗಳೂರಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ ಮೂರ್ನಾಲ್ಕು ಮಂದಿಯನ್ನ ಬಿಟ್ಟರೆ ಉಳಿದೆಲ್ಲಾ ಪ್ರಯಾಣಿಕರು ಸಾವಿಗೀಡಾಗಿದ್ರು. ಈಗ ಇಂಥದ್ದೇ ಘಟನೆ ಕೇರಳದ ಕೋಯಿಕ್ಕೋಡ್‌ನ ಕರಿಪುರ ಏರ್ಪೋರ್ಟ್ನಲ್ಲಿ ನಡೆದಿದೆ. ಮಂಗಳೂರಿನಂತೆಯೇ ಕರಿಪುರ ಏರ್ಪೋರ್ಟ್ ಕೂಡ ಟೇಬಲ್ ಟಾಪ್ ಏರ್ಪೋರ್ಟ್ ಆಗಿದೆ. ಹೀಗಾಗಿ, ರನ್ವೇ ಬರೋಬ್ಬರಿ 130 ಅಡಿ ಎತ್ತರದಲ್ಲಿದೆ. ನಿನ್ನೆ ಜೋರು ಮಳೆಯಿದ್ದಿದ್ದಕ್ಕೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಇದ್ರಿಂದ ವಿಮಾನ ರನ್ವೇಯಿಂದ ಸ್ಕಿಡ್ ಆಗಿದೆ. ಮೊದಲೇ ಟೇಬಲ್ ಟಾಪ್ ರನ್ವೇ ಆಗಿರೋದ್ರಿಂದ ವಿಮಾನ ಏರ್ಪೋರ್ಟ್ನ ಕಾಂಪೌಂಡ್ನಿಂದ 35 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಈ ರಭಸಕ್ಕೆ ಏರ್ ಇಂಡಿಯಾ ವಿಮಾನ ಎರಡು ತುಂಡಾಗಿದೆ.
ಇನ್ನು ಟೇಬಲ್ ಟಾಪ್ ರನ್ವೇಗಳಲ್ಲಿ ವಿಮಾನ ಲ್ಯಾಂಡಿಂಗ್ ಮಾಡೋದು ಸಾಹಸವೇ ಸರಿ. ಅದ್ರಲ್ಲೂ ಹವಾಮಾನ ವೈಪರೀತ್ಯ ಇರುವಾಗ ಜೀವ ಕೈಯಲ್ಲಿ ಹಿಡಿದು ಲ್ಯಾಂಡಿಂಗ್ ಮಾಡೋ ಪರಿಸ್ಥಿತಿ ಇರುತ್ತೆ. ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ವಿಮಾನ ಪ್ರಪಾತಕ್ಕೆ ಜಾರಿ ಬೀಳುತ್ತೆ. ಹೀಗಾಗಿ ಅತ್ಯಂತ ಅನುಭವಿ ಹಾಗೂ ರಾಷ್ಟ್ರಪತಿಯಿಂದ ಗೋಲ್ಡ್ ಮೆಡಲ್ ಪಡೆದ ಹಿರಿಯ ಪೈಲಟ್ ಆದ ದೀಪಕ್ ವಸಂತ್ ಸಾತೆಯನ್ನ ನೇಮಿಸಲಾಗಿತ್ತು. ಇವರಿಗೆ ಅಖಿಲೇಶ್ ಕುಮಾರ್ ಕೋ -ಪೈಲಟ್ ಆಗಿ ಸಾಥ್ ನೀಡ್ತಿದ್ರು. ಆದರೂ ದುರಾದೃಷ್ಟ ಬೆನ್ನೇರಿ ಹಲವರನ್ನ ಸಾವಿನ ಮನೆಗೆ ತಳ್ಳಿದೆ.
ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳದಿರುವುದೇ ಅದೃಷ್ಟ
ಕರಿಪುರ ಏರ್ಪೋರ್ಟ್ ದೇಶದ7ನೇ ಅತ್ಯಂತ ಕಾರ್ಯನಿರತ ಏರ್ಪೋರ್ಟ್ ಅನ್ನೋ ಖ್ಯಾತಿ ಪಡೆದಿದೆ. ಇಲ್ಲಿ ವಿಮಾನಗಳ ಹಾರಾಟ ಹೆಚ್ಚಿರುತ್ತೆ. ಆದರೆ ನಿನ್ನೆ ಅದೃಷ್ಟವಶಾತ್ ಪತನಗೊಂಡ ಬಳಿಕ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿಲ್ಲ. ಇದರಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಅಧಿಕಾರಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಒಟ್ನಲ್ಲಿ, ವಿಮಾದ ದುರಂತ ಹವಾಮಾನ ವೈಪರೀತ್ಯದಿಂದಲೋ ಅಥವಾ ಟೇಬಲ್ ಟಾಪ್ ರನ್ವೇದಿಂದ ಆಗಿರೋದೋ ಎಂದು ಸದ್ಯಕ್ಕೆ ತಿಳಿದುಬಂದಿಲ್ಲ. ಇದೀಗ, ಘಟನಾ ಸ್ಥಳಕ್ಕೆ ಕೇಂದ್ರ ವಿಮಾನಯಾನ ತನಿಖಾ ತಂಡಗಳು ಭೇಟಿನೀಡಿದ್ದು ಪರಿಶೀಲನೆ ನಡೆಸುತ್ತಿದೆ.
Two special relief flights have been arranged from Delhi and one from Mumbai for rendering humanitarian assistance to all the passengers and the family members. AAIB, DGCA & Flight Safety Depts have reached to investigate the incident: #AirIndiaExpress https://t.co/ITceAb2pHF pic.twitter.com/W6Wb6xldZA
— ANI (@ANI) August 8, 2020