AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಆರ್​ಸಿ ಎಂದರೇನು? ಇದು ಜಾರಿಯಾದ್ರೆ ಏನಾಗುತ್ತೆ

ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ.. ಮೋದಿ ಸರ್ಕಾರದ ಕನಸಿನ ಕೂಸು. ಸದ್ಯ ಇದೇ ವಿಚಾರಕ್ಕೆ ಇಡೀ ದೇಶ ಹೊತ್ತಿ ಉರೀತಿದೆ.. ಕರ್ನಾಟಕದ ಕರಾವಳಿಯಲ್ಲೂ ನೆತ್ತರು ಹರಿದಿದೆ. ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ಬಹಿರಂಗ ಯುದ್ಧವೇ ನಡೆಯುತ್ತಿದೆ. ಕೇಂದ್ರ ಸರ್ಕಾರದ ಒಂದು ಕಾಯ್ದೆ ಇಷ್ಟೆಲ್ಲಾ ಹಿಂಸಾಚಾರಕ್ಕೆ ಕಾರಣವಾಗುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಆದ್ರೀಗ ಆಗ್ತಿರೋದೇ ಬೇರೆ. ದಿಲ್ಲಿಯಿಂದ ಗಲ್ಲಿವರೆಗೆ ಬರೀ ಗಲಾಟೆ, ಗದ್ದಲ, ಗುಂಡಿನ ಸದ್ದೇ ಕೇಳಿ ಬರ್ತಿದೆ. ಇದೆಲ್ಲದ್ದಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ ಮಾತ್ರ ಕಾರಣವಲ್ಲ. ಅಲ್ಪಸಂಖ್ಯಾತರಿಗೆ […]

ಎನ್​ಆರ್​ಸಿ ಎಂದರೇನು? ಇದು ಜಾರಿಯಾದ್ರೆ ಏನಾಗುತ್ತೆ
ಸಾಧು ಶ್ರೀನಾಥ್​
|

Updated on:Dec 20, 2019 | 9:13 AM

Share

ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ.. ಮೋದಿ ಸರ್ಕಾರದ ಕನಸಿನ ಕೂಸು. ಸದ್ಯ ಇದೇ ವಿಚಾರಕ್ಕೆ ಇಡೀ ದೇಶ ಹೊತ್ತಿ ಉರೀತಿದೆ.. ಕರ್ನಾಟಕದ ಕರಾವಳಿಯಲ್ಲೂ ನೆತ್ತರು ಹರಿದಿದೆ. ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ಬಹಿರಂಗ ಯುದ್ಧವೇ ನಡೆಯುತ್ತಿದೆ.

ಕೇಂದ್ರ ಸರ್ಕಾರದ ಒಂದು ಕಾಯ್ದೆ ಇಷ್ಟೆಲ್ಲಾ ಹಿಂಸಾಚಾರಕ್ಕೆ ಕಾರಣವಾಗುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಆದ್ರೀಗ ಆಗ್ತಿರೋದೇ ಬೇರೆ. ದಿಲ್ಲಿಯಿಂದ ಗಲ್ಲಿವರೆಗೆ ಬರೀ ಗಲಾಟೆ, ಗದ್ದಲ, ಗುಂಡಿನ ಸದ್ದೇ ಕೇಳಿ ಬರ್ತಿದೆ. ಇದೆಲ್ಲದ್ದಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ ಮಾತ್ರ ಕಾರಣವಲ್ಲ.

ಅಲ್ಪಸಂಖ್ಯಾತರಿಗೆ ಕಾಡುತ್ತಿದೆ ಎನ್​ಆರ್​ಸಿ ಜಾರಿ ಭೀತಿ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮೂಲದ ಮುಸ್ಲಿಮರಿಗೆ ಯಾವುದೇ ಸಮಸ್ಯೆ ಆಗಲ್ಲ ಅಂತ ಕೇಂದ್ರ ಸರ್ಕಾರ ಪದೇಪದೆ ಹೇಳ್ತಿದೆ. ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾವಂತೂ ಅವಕಾಶ ಸಿಕ್ಕಾಗಲೆಲ್ಲಾ ಇದನ್ನೇ ಸ್ಪಷ್ಟಪಡಿಸುತ್ತಿದ್ದಾರೆ. ಆದ್ರೂ ಜನ ಬೀದಿಗಿಳಿದು ಪ್ರತಿಭಟನೆ ನಡೆಸೋದನ್ನ ಮಾತ್ರ ನಿಲ್ಲಿಸಿಲ್ಲ.

ಗೊಂದಲ ನಿವಾರಣೆಗೆ ಕೇಂದ್ರದ ಕಸರತ್ತು: ಅಂದ್ಹಾಗೆ ದೇಶಾದ್ಯಂತ ಶೀಘ್ರದಲ್ಲೇ ಎನ್​ಆರ್​ಸಿ ಜಾರಿಗೆ ಬರುತ್ತೆ ಅನ್ನೋ ಅನುಮಾನ ಅಲ್ಪಸಂಖ್ಯಾತ ಸಮುದಾಯವನ್ನ ಕಾಡುತ್ತಿದೆ. ಎನ್​ಆರ್​ಸಿ ನಡೆಯೋ ವೇಳೆ ತಾವು ಭಾರತೀಯರು ಅನ್ನೋದನ್ನ ದಾಖಲೆ ಸಮೇತ ಸಾಬೀತುಪಡಿಸಬೇಕು. ಇಲ್ಲದಿದ್ದರೆ ಅಕ್ರಮ ವಲಸಿಗರು ಅಂತ ತಮ್ಮನ್ನ ದೇಶದಿಂದ ಹೊರಹಾಕಬಹುದು ಅನ್ನೋ ಭೀತಿ ಅಲ್ಪಸಂಖ್ಯಾತರನ್ನ ಕಾಡುತ್ತಿದೆ.

ಆದ್ರೆ ಅವರನ್ನೆಲ್ಲಾ ಈ ರೀತಿ ದೇಶದಿಂದ ಹೊರಹಾಕಲ್ಲ ಅಂತ ಕೇಂದ್ರ ಸರ್ಕಾರ ಪದೇಪದೆ ಹೇಳ್ತಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರೋ ಸರ್ಕಾರ ಎನ್​ಆರ್​ಸಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆಗಿನ ಗೊಂದಲ, ಭೀತಿ, ಅನುಮಾನ ಹೋಗಲಾಡಿಸಲು ಜಾಹೀರಾತಿನ ಮಾರ್ಗವನ್ನ ಹಿಡಿದಿದೆ.

ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ದೇಶಾದ್ಯಂತ ಎನ್​ಆರ್​ಸಿ ಜಾರಿ ಮಾಡುತ್ತಿಲ್ಲ ಅಂತ ಸ್ಪಷ್ಟಪಡಿಸುತ್ತಿದೆ. ಅಲ್ಲದೆ ಎನ್​ಆರ್​ಸಿ ಜಾರಿಗೂ ಮುನ್ನ ನಿಯಮಗಳನ್ನು ರೂಪಿಸಲಾಗುತ್ತೆ ಅಂತಾನೂ ಸ್ಪಷ್ಟಪಡಿಸಿದೆ. ಜೊತೆಗೆ 1971ರ ನಂತರ ದೇಶಕ್ಕೆ ವಲಸೆ ಬಂದವರು ಮಾತ್ರ ತಾವು ಭಾರತೀಯರು ಅನ್ನೋದನ್ನ ಸಾಬೀತುಪಡಿಸುವ ದಾಖಲೆ ನೀಡಬೇಕಾಗುತ್ತೆ.

ಭಾರತದಲ್ಲಿ ಹುಟ್ಟಿ ಬೆಳೆದವರಿಗೆ ಎನ್​ಆರ್​ಸಿಯಿಂದ ಯಾವುದೇ ತೊಂದರೆ ಇಲ್ಲ. ಸದ್ಯ ಅಸ್ಸಾಂನಲ್ಲಿ ಅಕ್ರಮ ವಲಸಿಗರನ್ನ ಪತ್ತೆ ಹಚ್ಚಲು ಎನ್​ಆರ್​ಸಿ ನಡೆಸಲಾಗಿದೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಜೊತೆಗೆ ಸೋಷಿಯಲ್ ಮೀಡಿಯಾ ಮೂಲಕವೂ ಎನ್​ಆರ್​ಸಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಇರೋ ಗೊಂದಲ ಹಾಗೂ ಭೀತಿಯನ್ನ ಹೋಗಲಾಡಿಸಲು ಯತ್ನಿಸುತ್ತಿದೆ. ಬಿಜೆಪಿ ಕೂಡ ದೇಶಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.

ಕೇಂದ್ರ ಸರ್ಕಾರ ಇಷ್ಟೆಲ್ಲಾ ಮಾಡ್ತಿದ್ರೂ ಪ್ರತಿಭಟನಾಕಾರರಿಗೆ ಮಾಹಿತಿಯ ಕೊರತೆಯೋ ಅಥವಾ ಇನ್ನೇನೋ ಗೊತ್ತಿಲ್ಲ. ವೈರಿಗಳ ವಿರುದ್ಧ ಯುದ್ಧಕ್ಕೆ ನಿಂತಂತೆ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ, ಸಾರ್ವಜನಿಕ ಆಸ್ತಪಾಸ್ತಿಗೆ ಹಾನಿ ಮಾಡುತ್ತಿದ್ದಾರೆ.

Published On - 6:47 am, Fri, 20 December 19