AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಕೌಂಟ್‌ಡೌನ್‌ ಶುರು: ಏಕಾಏಕಿ ನೂರಾರು ವಾಟ್ಸಾಪ್‌ ಖಾತೆಗಳು 24 ಗಂಟೆ ಬ್ಯಾನ್

ಭಾರತದಲ್ಲಿ ನೂರಾರು ವಾಟ್ಸಾಪ್ ಖಾತೆಗಳು 24 ಗಂಟೆಗಳ ಕಾಲ ತಾತ್ಕಾಲಿಕವಾಗಿ ನಿಷೇಧಗೊಂಡಿವೆ. ಸ್ಪ್ಯಾಮ್, ಸೇವಾ ನಿಯಮ ಉಲ್ಲಂಘನೆ ಅಥವಾ ಅನಧಿಕೃತ ಆ್ಯಪ್‌ಗಳ ಬಳಕೆಯೇ ಇದಕ್ಕೆ ಮುಖ್ಯ ಕಾರಣ. ಆದರೆ, ಕೆಲವೊಮ್ಮೆ ತಾಂತ್ರಿಕ ದೋಷಗಳಿಂದ ಸರಿಯಾದ ಖಾತೆಗಳೂ ಪರಿಶೀಲನೆಗೆ ಒಳಗಾಗಬಹುದು. ನಿಮ್ಮ ಖಾತೆ ನಿರ್ಬಂಧಗೊಂಡರೆ, 'ಪರಿಶೀಲನೆಗೆ ವಿನಂತಿ' ಬಟನ್ ಬಳಸಿ ದೂರು ಸಲ್ಲಿಸಿ. ಸುರಕ್ಷಿತವಾಗಿರಲು ಅನಗತ್ಯ ಫಾರ್ವರ್ಡ್‌ಗಳು ಮತ್ತು ಥರ್ಡ್-ಪಾರ್ಟಿ ಆ್ಯಪ್‌ಗಳಿಂದ ದೂರವಿರಿ.

ಭಾರತದಲ್ಲಿ ಕೌಂಟ್‌ಡೌನ್‌ ಶುರು: ಏಕಾಏಕಿ ನೂರಾರು ವಾಟ್ಸಾಪ್‌ ಖಾತೆಗಳು 24 ಗಂಟೆ ಬ್ಯಾನ್
ವಾಟ್ಸಾಪ್
ನಯನಾ ರಾಜೀವ್
|

Updated on: Aug 04, 2026 | 7:38 AM

Share

ನವದೆಹಲಿ, ಆಗಸ್ಟ್​ 04: ಭಾರತದಲ್ಲಿ ಸಾವಿರಾರು ವಾಟ್ಸಾಪ್ (WhatsApp) ಬಳಕೆದಾರರಿಗೆ ಸೋಮವಾರ ರಾತ್ರಿ ಆಘಾತ ಎದುರಾಗಿದೆ. ಯಾವುದೇ ಪೂರ್ವ ಸೂಚನೆಯಿಲ್ಲದೆ ಏಕಾಏಕಿ ನೂರಾರು ವಾಟ್ಸಾಪ್‌ ಖಾತೆಗಳನ್ನು 24 ಗಂಟೆಗಳ ಕಾಲ ‘ಪರಿಶೀಲನೆಗೆ’ ಒಳಪಡಿಸಲಾಗಿದ್ದು, ಸಂದೇಶ ರವಾನೆ ಸೇರಿದಂತೆ ಅಪ್ಲಿಕೇಶನ್‌ನ ಎಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸೋಮವಾರ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಬಳಕೆದಾರರು ಅಪ್ಲಿಕೇಶನ್ ತೆರೆದಾಗ ನಿಮ್ಮ ಖಾತೆಯು ಪರಿಶೀಲನೆಯಲ್ಲಿದೆ. ಸೇವಾ ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದ್ದು, 24 ಗಂಟೆಗಳಲ್ಲಿ ಫಲಿತಾಂಶ ತಿಳಿಸಲಾಗುವುದು ಎಂಬ ಸಂದೇಶ ಕಂಡುಬಂದಿದೆ.

ದೈನಂದಿನ ಕಚೇರಿ ಕೆಲಸ ಮತ್ತು ವೈಯಕ್ತಿಕ ಸಂವಹನಕ್ಕೆ ವಾಟ್ಸಾಪ್ ಪ್ರಮುಖ ಮಾಧ್ಯಮವಾಗಿರುವುದರಿಂದ, ಖಾತೆಗಳು ಹಠಾತ್ತನೆ ನಿರ್ಬಂಧಗೊಂಡಿದ್ದಕ್ಕೆ ನೆಟ್ಟಿಗರು ಎಕ್ಸ್ (ಟ್ವಿಟರ್) ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಥರ್ಡ್-ಪಾರ್ಟಿ ಆ್ಯಪ್​ಗಳನ್ನು ಬಳಸದೆ, ಕೇವಲ ಅಧಿಕೃತ ವಾಟ್ಸಾಪ್ ಆಪ್‌ ಬಳಸುತ್ತಿದ್ದರೂ ತಮ್ಮ ಖಾತೆಯನ್ನು ಬ್ಯಾನ್ ಮಾಡಲಾಗಿದೆ ಎಂದು ಹಲವು ಬಳಕೆದಾರರು ದೂರಿದ್ದಾರೆ.

ನಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸುವ ಹಾಗೂ ಸ್ಪ್ಯಾಮ್ (Spam) ರವಾನಿಸುವ ಖಾತೆಗಳ ವಿರುದ್ಧ ನಾವು ನಿರಂತರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಕೆಲವೊಮ್ಮೆ ನಮ್ಮ ಸ್ವಯಂಚಾಲಿತ ಅಲ್ಗಾರಿದಮ್‌ಗಳಿಂದಾಗಿ (AI Tools) ತಾಂತ್ರಿಕ ದೋಷ ಸಂಭವಿಸಿ, ಸರಿ ಇರುವ ಖಾತೆಗಳೂ ಪರಿಶೀಲನೆಗೆ ಒಳಗಾಗುತ್ತವೆ. ಅಂತಹ ಸಂದರ್ಭಗಳಲ್ಲಿ ನಾವು ಪರಿಶೀಲಿಸಿ, ಸಾಧ್ಯವಾದಷ್ಟು ಬೇಗ ಖಾತೆಗಳನ್ನು ಪುನರಾರಂಭಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ:WhatsApp RTO challan scam: ವಾಟ್ಸ್ಆ್ಯಪ್​ನಲ್ಲಿ ಹರಿದಾಡುತ್ತಿದೆ ಆರ್​ಟಿಒ ಚಲನ್ ಸ್ಕ್ಯಾಮ್: ಈರೀತಿ ಮೆಸೇಜ್ ಬಂದರೆ ಎಚ್ಚರ

ಖಾತೆಗಳನ್ನು ಸುರಕ್ಷಿತವಾಗಿಡುವುದು ಹೇಗೆ?: ವಾಟ್ಸಾಪ್ ನಿಯಮಾವಳಿಗಳ ಪ್ರಕಾರ, ಒಂದೇ ಬಾರಿಗೆ ಅತಿಯಾಗಿ ಅಪರಿಚಿತ ಸಂಖ್ಯೆಗಳಿಗೆ ಸಂದೇಶ ರವಾನಿಸುವುದು (Bulk Messaging), ದ್ವೇಷಪೂರಿತ ಸಂದೇಶಗಳನ್ನು ಫಾರ್ವರ್ಡ್ ಮಾಡುವುದು ಹಾಗೂ ಅನಧಿಕೃತ ವಾಟ್ಸಾಪ್ ಜಿಬಿ (WhatsApp GB) ಆಪ್‌ಗಳನ್ನು ಬಳಸುವುದು ಖಾತೆ ನಿಷೇಧಕ್ಕೆ ಕಾರಣವಾಗಬಹುದು.

ದೂರು ಸಲ್ಲಿಸುವ ವಿಧಾನ: ನಿಮ್ಮ ಖಾತೆಯು ಆಕಸ್ಮಿಕವಾಗಿ ನಿರ್ಬಂಧಗೊಂಡಿದ್ದರೆ, ಪರಿಶೀಲನಾ ಪರದೆಯಲ್ಲಿ ಕಾಣಿಸುವ (ಪರಿಶೀಲನೆಗೆ ವಿನಂತಿ) ಬಟನ್ ಒತ್ತಿ ಮೆಟಾ ತಂಡಕ್ಕೆ ನೇರ ದೂರು ಸಲ್ಲಿಸಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!