ಮೇ 3ಕ್ಕೆ ಅಂತ್ಯವಾಗಲ್ವಾ ಲಾಕ್ಡೌನ್? ಯಾವ್ಯಾವ ಜೋನ್ಗಳಿಗೆ ಏನೇನು ನಿಯಮ?
ದೆಹಲಿ: ಕೊರೊನಾ ಹೆಮ್ಮಾರಿ ಇಡೀ ಭಾರತವನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೊನಾ ಹಿಮ್ಮೆಟ್ಟಿಸಲು ಜಾರಿಗೊಳಿಸಿರೋ ಲಾಕ್ಡೌನ್ ಇನ್ನೆಷ್ಟು ದಿನ ಇರುತ್ತೆ ಅಂತಾ ಜನರ ಲೆಕ್ಕ ಹಾಕ್ತಿದ್ದರು. ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ನಿಂದ ಯಾವುದೇ ರಿಲೀಫ್ ಸಿಗೋ ಸುಳಿವು ಸಿಗ್ತಿಲ್ಲ. ಮೇ 3 ಕ್ಕೆ ಭಾರತದಲ್ಲಿ ಅಂತ್ಯವಾಗಲ್ವಾ ಲಾಕ್ಡೌನ್..? ಸಿಎಂಗಳ ಜೊತೆ ಪ್ರಧಾನಿ ಮೋದಿ ನಡೆಸಿರೋ ವಿಡಿಯೋ ಕಾನ್ಫರೆನ್ಸ್ ಬಳಿಕ ಇಂಥಾ ಒಂದು ಪ್ರಶ್ನೆ ಮೂಡಿದೆ. ರಾಜ್ಯಗಳಲ್ಲಿ ಕೊರೊನಾ ಪರಿಸ್ಥಿತಿ […]
ದೆಹಲಿ: ಕೊರೊನಾ ಹೆಮ್ಮಾರಿ ಇಡೀ ಭಾರತವನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೊನಾ ಹಿಮ್ಮೆಟ್ಟಿಸಲು ಜಾರಿಗೊಳಿಸಿರೋ ಲಾಕ್ಡೌನ್ ಇನ್ನೆಷ್ಟು ದಿನ ಇರುತ್ತೆ ಅಂತಾ ಜನರ ಲೆಕ್ಕ ಹಾಕ್ತಿದ್ದರು. ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ನಿಂದ ಯಾವುದೇ ರಿಲೀಫ್ ಸಿಗೋ ಸುಳಿವು ಸಿಗ್ತಿಲ್ಲ.
ಮೇ 3 ಕ್ಕೆ ಭಾರತದಲ್ಲಿ ಅಂತ್ಯವಾಗಲ್ವಾ ಲಾಕ್ಡೌನ್..? ಸಿಎಂಗಳ ಜೊತೆ ಪ್ರಧಾನಿ ಮೋದಿ ನಡೆಸಿರೋ ವಿಡಿಯೋ ಕಾನ್ಫರೆನ್ಸ್ ಬಳಿಕ ಇಂಥಾ ಒಂದು ಪ್ರಶ್ನೆ ಮೂಡಿದೆ. ರಾಜ್ಯಗಳಲ್ಲಿ ಕೊರೊನಾ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲು ಕರೆಯಲಾಗಿದ್ದ ವಿಡಿಯೋ ಕಾನ್ಫರೆನ್ಸ್ ವೇಳೆ ವಿವಿಧ ರಾಜ್ಯಗಳು, ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ವು.
ಈ ಪೈಕಿ ಮಿಜೋರಾಮ್, ಗೋವಾ, ಒಡಿಶಾ, ಹಿಮಾಚಲ ಪ್ರದೇಶ ಸೇರಿದಂತೆ 10 ರಾಜ್ಯಗಳು ಲಾಕ್ಡೌನ್ ಮುಂದೂಡಿಕೆ ಮಾಡೋದೇ ಸೂಕ್ತ ಅಂತಾ ಬೇಡಿಕೆ ಇಟ್ಟಿವೆ. ಮೇ 15ರವರೆಗೂ ಲಾಕ್ಡೌನ್ ಮುಂದುವರಿಸಬೇಕು ಅಂತಾ ಕೆಲ ರಾಜ್ಯಗಳು ಬೇಡಿಕೆ ಇಟ್ಟಿವೆ.
ಇನ್ನು ದೇಶವನ್ನು ಮೂರು ವಲಯಗಳಾಗಿ ವಿಂಗಡಿಸೋ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆಯಂತೆ. ಆ ಜೋನ್ಗಳಲ್ಲಿರೋ ಕೊರೊನಾ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ನಿಯಮ ರೂಪಿಸಲಿದೆ.
ಕೊರೊನಾ ತಡೆಗೆ 3 ಜೋನ್: ಕೊರೊನಾ ವಿರುದ್ಧ ಹೋರಾಡೋ ನಿಟ್ಟಿನಲ್ಲಿ ದೇಶವನ್ನು ಮೂರು ವಲಯಗಳಾಗಿ ವಿಂಗಡಣೆ ಮಾಡಲಾಗಿದೆ. ರೆಡ್ ಜೋನ್, ಆರೆಂಜ್ ಜೋನ್, ಗ್ರೀನ್ ಜೋನ್ ಅಂತಾ ಡಿವೈಡ್ ಮಾಡಲಾಗಿದೆ. ರೆಡ್ ಜೋನ್ನಲ್ಲಿರೋ 127 ಜಿಲ್ಲೆಗಳಿಗೆ ಲಾಕ್ಡೌನ್ನಿಂದ ಯಾವುದೇ ವಿನಾಯಿತಿ ನೀಡಲಾಗಲ್ಲ. ಇನ್ನು ಆರೆಂಜ್ ಜೋನ್ನ 297 ಜಿಲ್ಲೆಗಳಿಗೆ ಷರತ್ತುಬದ್ಧ ವಿನಾಯಿತಿ ನೀಡೋ ಸಾಧ್ಯತೆ ಇದೆ. ಇನ್ನು ದೇಶದ 300 ಜಿಲ್ಲೆಗಳು ಕೊರೊನಾದಿಂದ ಮುಕ್ತವಾಗಿ ಗ್ರೀನ್ ಜೋನ್ನಲ್ಲಿವೆ. ಈ ಗ್ರೀನ್ ಜೋನ್ನ 300 ಜಿಲ್ಲೆಗಳಿಗೆ ಕಂಪ್ಲೀಟ್ ವಿನಾಯಿತಿ ನೀಡೋ ಸಾಧ್ಯತೆ ಇದೆ.
ದೇಶದ ಪ್ರಮುಖ ನಗರಗಳಿಗಿಲ್ಲ ಲಾಕ್ಡೌನ್ ಮುಕ್ತಿ..! ಇನ್ನು ದೇಶದ ಪ್ರಮುಖ ನಗರಗಳಲ್ಲಿ ಹಾಗೂ ರಾಜ್ಯಗಳ ರಾಜಧಾನಿಯಲ್ಲಿ ಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗಿವೆ. ಹೀಗಾಗಿ ಮೆಟ್ರೋ ಸಿಟಿಗಳಲ್ಲಿ ಲಾಕ್ಡೌನ್ ಮುಂದುವರಿಯೋದು ಪಕ್ಕಾಗಿದೆ. ದೇಶದ ಯಾವ್ಯಾವ ಮಹಾ ನಗರಗಳಲ್ಲಿ ಲಾಕ್ಡೌನ್ ಮುಂದುವರಿಯುತ್ತೆ ಅನ್ನೋದನ್ನು ನೋಡೋದಾದ್ರೆ.
ಮೆಟ್ರೋ ಸಿಟಿಗಳಿಗಿಲ್ಲ ಮುಕ್ತಿ..! ರಾಜ್ಯಗಳ ರಾಜಧಾನಿಗಳಲ್ಲಿ ಸದ್ಯಕ್ಕಿಲ್ಲ ಲಾಕ್ಡೌನ್ ರಿಲೀಫ್ ಸಿಗೋದು ಡೌಟು. ಕ್ಯಾಪಿಟಲ್ ಸಿಟಿಗಳಾದ ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತಾ, ಭೋಪಾಲ್, ಚೆನ್ನೈ, ಹೈದರಾಬಾದ್, ಜೈಪುರ, ಅಹ್ಮದಾಬಾದ್, ಲಖನೌ ಹಾಗೂ ಪಾಟ್ನಾ ನಗರಗಳಲ್ಲಿ ಲಾಕ್ಡೌನ್ ಮುಂದುವರಿಕೆ ಮಾಡೋ ಸಾಧ್ಯತೆ ಇದೆ. ಇದ್ರ ಜೊತೆಗೆ ದೇಶದ ವಾಣಿಜ್ಯ ನಗರಿಗಳಾದ ಗುರುಗ್ರಾಮ, ಘಾಜಿಯಾಬಾದ್, ನೋಯ್ಡಾ, ಆಗ್ರಾ, ಇಂದೋರ್, ಕೊಯಮತ್ತೂರಿನಲ್ಲಿ ಲಾಕ್ಡೌನ್ ಕಂಟಿನ್ಯೂ ಮಾಡೋ ಸಾಧ್ಯತೆ ಇದೆ.
ವೀಕೆಂಡ್ನಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡ್ತಾರಾ ಮೋದಿ? ಈ ನಡುವೆ ಈ ವಾರಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಯನ್ನುದ್ದೇಶಿಸಿ ಮತ್ತೊಮ್ಮೆ ಭಾಷಣ ಮಾಡೋ ಸಾಧ್ಯತೆ ಇದೆ. ಮೇ 3ಕ್ಕೆ ಲಾಕ್ಡೌನ್ ಅವಧಿ ಮುಗಿಯಲಿದ್ದು, ಶನಿವಾರ ಅಥವಾ ಭಾನುವಾರ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ.
ಒಟ್ನಲ್ಲಿ ಹೆಮ್ಮಾರಿ ಕೊರೊನಾ ವಿರುದ್ಧ ಹೋರಾಟದ ಪ್ರಮುಖ ಅಸ್ತ್ರವಾಗಿರೋ ಲಾಕ್ಡೌನ್ನ ಎರಡನೇ ಹಂತವೂ ಮುಗಿಯುತ್ತಾ ಬಂತು. ಆದ್ರೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಲಾಕ್ಡೌನ್ ಮೇ 15ರವರೆಗೂ ಮುಂದುವರಿಯೋ ಎಲ್ಲಾ ಸಾಧ್ಯತೆಗಳಿವೆ.
https://www.facebook.com/Tv9Kannada/videos/654190358476937/
Published On - 6:21 pm, Mon, 27 April 20