ಅನಿವಾಸಿ ಭಾರತೀಯರೊಬ್ಬರು ತಮ್ಮ ಪುರಾತನ ಕಟ್ಟಡವನ್ನು ಕೆಡವಲು ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದರ ಭಾಗವಾಗಿ ಗುತ್ತಿಗೆದಾರರು ಕೆಲ ಕಾರ್ಮಿಕರನ್ನು ಕರೆದುಕೊಂಡು ಆ ಸ್ಥಳಕ್ಕೆ ತೆರಳಿ ಕಟ್ಟಡವನ್ನು ಕೆಡವ ಕಾರ್ಯಕ್ಕೆ ಚಾಲನೆ ನೀಡಿದರು. ಆ ಕೆಲಸಗಳು ನಡೆಯುತ್ತಿರುವಾಗ, ಅನಿರೀಕ್ಷಿತವಾಗಿ ಇದ್ದಕ್ಕಿದ್ದಂತೆ ಒಂದು ದೃಶ್ಯ ಕಾಣಿಸಿಕೊಂಡಿತು. ಕಾರ್ಮಿಕರು ತಮ್ಮ ಕಣ್ಣುಗಳನ್ನು ತಾವೇ ನಂಬದಾದರು. ಅಲ್ಲಿರುವುದೇನೆಂದು ನೋಡಲು ಸುತ್ತಲೂ ಮಣ್ಣು ಅಗೆದರು. ಆಗ ಸಿಕ್ಕಿತು ನೋಡಿ…
ವಿವರಗಳಿಗೆ ಹೋಗುವುದಾದರೆ.. ಸುಮಾರು 199 ಪುರಾತನ ಚಿನ್ನದ ನಾಣ್ಯಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಗುಜರಾತ್ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ನವಸಾರಿ ಜಿಲ್ಲೆಯ ಬಿಲಿಮೋರಾದಲ್ಲಿ ಈ ಘಟನೆ ನಡೆದಿದೆ. ಬ್ರಿಟನ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹವಾಬೀನ್ ಬಾಲಿಯಾ ಅವರು ಬಜಾರ್ ಸ್ಟ್ರೀಟ್‌ನಲ್ಲಿರುವ ತಮ್ಮ ಹಳೆಯ ಕಟ್ಟಡವನ್ನು ಕೆಡವಲು ಸರ್ಫ್ರಾಜ್ ಕರಾಡಿಯಾ ಎಂಬ ಗುತ್ತಿಗೆದಾರರಿಗೆ ವಹಿಸಿದ್ದರು. ಈ ಕಾರ್ಯಕ್ಕಾಗಿ ಅವರು ಮಧ್ಯಪ್ರದೇಶದ ನಾಲ್ವರು ಕಾರ್ಮಿಕರನ್ನು ನೇಮಿಸಿಕೊಂಡಿದ್ದರು. ಮನೆ ಕೆಡವುತ್ತಿರುವಾಗ ಆ ಕಾರ್ಮಿಕರಿಗೆಲ್ಲಾ 1922ರ ಬ್ರಿಟಿಷರ ಕಾಲದ ಚಿನ್ನದ ನಾಣ್ಯಗಳು ದೊರೆತಿವೆ.
Also Read: ಮನೆ ಬುನಾದಿಯಲ್ಲಿ ಸಿಕ್ಕ ಚಿನ್ನ ಎಂದು ಉಡುಪಿ ಮೂಲಕದ ವ್ಯಕ್ತಿಗೆ 5 ಲಕ್ಷ ರೂ. ಪಂಗನಾಮ
ಸುಮಾರು 199 ಪುರಾತನ ಚಿನ್ನದ ನಾಣ್ಯಗಳು ಪತ್ತೆಯಾಗಿವೆ.. ಅವುಗಳ ಮೇಲೆ ಕಿಂಗ್ ಜಾರ್ಜ್-5 ಆಕೃತಿಯನ್ನು ಮುದ್ರಿಸಲಾಗಿತ್ತು. ಮಾಲೀಕರಿಗೆ ತಿಳಿಯದಂತೆ ಗುತ್ತಿಗೆದಾರ ಹಾಗೂ ನಾಲ್ವರು ಕಾರ್ಮಿಕರು ಈ ಚಿನ್ನದ ನಾಣ್ಯಗಳನ್ನು ಕದ್ದೊಯ್ದಿದ್ದಾರೆ. ಅವುಗಳ ಮೌಲ್ಯ ಸುಮಾರು 92 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್ 21 ರಂದು ಬಾಲಿಯಾ ಈ ವಿಷಯದ ಬಗ್ಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳನ್ನು ಇತ್ತೀಚೆಗೆ ಬಂಧಿಸಿದ್ದಾರೆ. ಅಲ್ಲದೆ, ತನಿಖೆಯ ವೇಳೆ ಮಧ್ಯಪ್ರದೇಶದ ನಾಲ್ವರು ಪೊಲೀಸರು ತಮ್ಮಿಂದ ಕೆಲವು ನಾಣ್ಯಗಳನ್ನು ತೆಗೆದುಕೊಂಡಿದ್ದಾರೆ ಎಂದೂ ಕಾರ್ಮಿಕರೊಬ್ಬರು ದೂರಿದಾಗ, ಅವರನ್ನೂ ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Tue, 2 January 24