- Kannada News Photo gallery PM Modi Inaugurates New Terminal of Tiruchirappalli International Airport in Tamil Nadu
ತಮಿಳುನಾಡಿನ ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡ ಹೀಗಿದೆ ನೋಡಿ
ತಮಿಳುನಾಡಿನ ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು, ಟರ್ಮಿನಲ್ ವಾರ್ಷಿಕವಾಗಿ 44 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ
Updated on: Jan 02, 2024 | 2:26 PM

ತಮಿಳುನಾಡಿನ ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದ್ದಾರೆ

₹ 1,100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಎರಡು ಹಂತದ ಟರ್ಮಿನಲ್ ವಾರ್ಷಿಕವಾಗಿ 44 ಲಕ್ಷ ಪ್ರಯಾಣಿಕರಿಗೆ ಮತ್ತು ಪೀಕ್ ಅವರ್‌ನಲ್ಲಿ ಸುಮಾರು 3,500 ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿದೆ

ಹೊಸದಾಗಿ ಅಭಿವೃದ್ಧಿಪಡಿಸಲಾದ ಟರ್ಮಿನಲ್ ಕಟ್ಟಡವು 60 ಚೆಕ್-ಇನ್ ಕೌಂಟರ್‌ಗಳು, ಐದು ಬ್ಯಾಗೇಜ್ ಕರೋಸಲ್, 60 ಆಗಮನ ಎಮಿಗ್ರೇಷನ್ ಕೌಂಟರ್‌ಗಳು ಮತ್ತು 44 ನಿರ್ಗಮನ ಎಮಿಗ್ರೇಷನ್ ಕೌಂಟರ್‌ಗಳನ್ನು ಹೊಂದಿದೆ.

ಕಟ್ಟಡದ ವಿನ್ಯಾಸವು ತಿರುಚಿರಾಪಳ್ಳಿಯ ಸಾಂಸ್ಕೃತಿಕ ರೂಪವನ್ನು ಅಳವಡಿಸಿಕೊಂಡಿದೆ. ಕೋಲಂ ಕಲೆಯಿಂದ ಹಿಡಿದು ಶ್ರೀರಂಗಂ ದೇವಾಲಯದ ಬಣ್ಣಗಳು ಮತ್ತು ಇತರ ಕಲಾ ಪ್ರಕಾರಗಳನ್ನು ಇಲ್ಲಿ ಕಾಣಬಹುದು.

ತಿರುಚಿರಾಪಳ್ಳಿ ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯ ದೃಷ್ಟಿಯಿಂದ ತಮಿಳುನಾಡಿನ ಚೆನ್ನೈ ನಂತರ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ.

ಈ ಟರ್ಮಿನಲ್ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ, ಉತ್ತಮ ಸಂಪರ್ಕದೊಂದಿಗೆ ಸುಗಮ ವಿಮಾನ ಪ್ರಯಾಣಕ್ಕೆ ಇದು ಕೊಡುಗೆ ನೀಡುತ್ತದೆ.

ಚಿತ್ರಕಲೆ, ಭಿತ್ತಿಚಿತ್ರಗಳಿಂದ ಕೂಡಿದ ಟರ್ಮಿನಲ್ ಕಟ್ಟಡದಲ್ಲಿರುವ ಕಲಾಕೃತಿಗಳಿಗಾಗಿ ಒಟ್ಟು 100 ಕಲಾವಿದರು ಕೆಲಸ ಮಾಡಿದ್ದು, 30 ದಿನಗಳಲ್ಲಿ ಕಲಾಕೃತಿಗಳನ್ನು ಪೂರ್ಣಗೊಳಿಸಿದ್ದಾರೆ.

ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಸುಮಾರು 75000 ಚದರ ಮೀಟರ್ ವ್ಯಾಪ್ತಿ ಹೊಂದಿದೆ

ಅತ್ಯಾಧುನಿಕ ಸೌಕರ್ಯಗಳು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ವೈಶಿಷ್ಟ್ಯಗಳನ್ನು ಹೊಂದಿದೆ ಈ ಹೊಸ ಟರ್ಮಿನಲ್



