ಚಲಿಸುತ್ತಿರುವ ರೈಲಿನಿಂದ ತ್ಯಾಜ್ಯ ವಿಲೇವಾರಿ ಮಾಡಿದ ಸ್ವಚ್ಛತಾ ಸಿಬ್ಬಂದಿ; ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಇಲಾಖೆ
ವೈರಲ್ ವಿಡಿಯೊಗೆ ಕಾಮೆಂಟ್ ಮಾಡಿದ ಬಳಕೆದಾರರೊಬ್ಬರು ದೇವರೇ ಏರ್ ಇಂಡಿಯಾದಲ್ಲಿ ಈ ರೀತಿ ಮಾಡಲಾಗುವುದಿಲ್ಲ. ಇಲ್ಲದಿದ್ದರೆ ಫ್ಲೈಟ್ ಅಟೆಂಡೆಂಟ್‌ಗಳು ಸಹ ಅದೇ ರೀತಿ ಮಾಡುತ್ತಿರುತ್ತಿದ್ದರು ಎಂದಿದ್ದಾರೆ . ಇನ್ನೊಬ್ಬ ಬಳಕೆದಾರು. ಇದು ನಿಜನಾ? ರೈಲ್ವೆ ಸಿಬ್ಬಂದಿ ಈ ರೀತಿ ಹೇಗೆ ಕಾರ್ಯನಿರ್ವಹಿಸಬಹುದು? ಸ್ವಚ್ಛತೆ ಮನೆಯಿಂದ ಪ್ರಾರಂಭವಾಗುತ್ತದೆ . ಈ ಸಂದರ್ಭದಲ್ಲಿ, ರೈಲ್ವೆ ಅಡುಗೆಮನೆಯಿಂದ ಎಂದು ಹೇಳಿದ್ದಾರೆ.
ದೆಹಲಿ ಜನವರಿ 02: ಭಾರತೀಯ ರೈಲ್ವೇ (Indian Railway) ಹೌಸ್‌ಕೀಪಿಂಗ್ ತಂಡದ ಸದಸ್ಯರೊಬ್ಬರು ಚಲಿಸುತ್ತಿರುವ ರೈಲಿನಿಂದ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೊದಲ್ಲಿ, ರೈಲ್ವೇ ಹೌಸ್‌ಕೀಪಿಂಗ್ ಸಿಬ್ಬಂದಿಯೊಬ್ಬರು ಚಲಿಸುತ್ತಿರುವ ರೈಲಿನಿಂದ ಕಸ ತುಂಬಿದ ಕಸದ ಚೀಲವನ್ನು ಹಳಿಗಳ ಮೇಲೆ ಸುರಿಯುತ್ತಿರುವುದು ಕಾಣುತ್ತದೆ. ಸಿಬ್ಬಂದಿಯು ರೈಲಿನ ನೆಲದ ಮೇಲೆ ಹರಡಿದ ಕಸವನ್ನು ತೆರವುಗೊಳಿಸಲು ಫ್ಲೋರ್ ವೈಪರ್ ಬಳಸಿದ್ದಾರೆ. ನಂತರ ಈ ತ್ಯಾಜ್ಯವನ್ನು ಹಳಿಗಳ ಮೇಲೆ ಸುರಿದಿದ್ದಾರೆ. ರೈಲ್ವೈ ಸಿಬ್ಬಂದಿಯ ಈ ನಡವಳಿಕೆ ರೈಲ್ವೆಯ ನೈರ್ಮಲ್ಯ ಅಭ್ಯಾಸಗಳು ಮತ್ತು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳ (SOPs) ಬಗ್ಗೆ ಕಳವಳವನ್ನು ಉಂಟುಮಾಡಿತು.
ಪ್ರಯಾಣಿಕರು ಈ ನಡವಳಿಕೆಯನ್ನು ಗಮನಿಸಿ ದೂರು ಸಲ್ಲಿಸಿದಾಗ, ಸಿಬ್ಬಂದಿ ಕಸ ಸಂಗ್ರಹಣೆಗೆ ಚೀಲ ಸಾಕಾಗುತ್ತಿಲ್ಲ ಎಂದಿದ್ದಾರೆ. ಪ್ರಯಾಣಿಕರೊಬ್ಬರು 139 ನಲ್ಲಿ ದೂರು ದಾಖಲಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮೇಲ್ವಿಚಾರಕರು ಮತ್ತು ಇಡೀ ಗ್ಯಾಂಗ್ ಯಾರು ದೂರು ನೀಡಿದ್ದಾರೆ ಮತ್ತು ಏಕೆ ದೂರು ನೀಡಿದ್ದಾರೆ ಎಂದು ಹುಡುಕಲು ಪ್ರಯತ್ನಿಸಿದರು. ಅವರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ ಎಂದ ಸಿಬ್ಬಂದಿ ಕಸವನ್ನು ಸಂಗ್ರಹಿಸಲು ಸಾಕಷ್ಟು ಚೀಲಗಳನ್ನು ಒದಗಿಸಿಲ್ಲ. ಆದ್ದರಿಂದ ಇರುವ ಸಂಪನ್ಮೂಲ ಬಳಸಿ ಅಡ್ಜೆಸ್ಟ್ ಮಾಡುತ್ತಿರುವುದಾಗಿ ಹೇಳಿದ್ದಾರೆ.
This seems to be the normal practice of the On Board Housekeeping Staff inside #IndianRailways trains.
Just dump the all the collected trash on the tracks from the moving train.
A passenger lodged a complaint on 139 & in no time the supervisor & entire gang turned trying to… pic.twitter.com/iZtqNl89gA
— मुंबई Matters™ (@mumbaimatterz) December 31, 2023
ವೈರಲ್ ವಿಡಿಯೊಗೆ ಕಾಮೆಂಟ್ ಮಾಡಿದ ಬಳಕೆದಾರರೊಬ್ಬರು ದೇವರೇ ಏರ್ ಇಂಡಿಯಾದಲ್ಲಿ ಈ ರೀತಿ ಮಾಡಲಾಗುವುದಿಲ್ಲ. ಇಲ್ಲದಿದ್ದರೆ ಫ್ಲೈಟ್ ಅಟೆಂಡೆಂಟ್‌ಗಳು ಸಹ ಅದೇ ರೀತಿ ಮಾಡುತ್ತಿರುತ್ತಿದ್ದರು ಎಂದಿದ್ದಾರೆ. ಇನ್ನೊಬ್ಬ ಬಳಕೆದಾರು. ಇದು ನಿಜನಾ? ರೈಲ್ವೆ ಸಿಬ್ಬಂದಿ ಈ ರೀತಿ ಹೇಗೆ ಕಾರ್ಯನಿರ್ವಹಿಸಬಹುದು? ಸ್ವಚ್ಛತೆ ಮನೆಯಿಂದ ಪ್ರಾರಂಭವಾಗುತ್ತದೆ . ಈ ಸಂದರ್ಭದಲ್ಲಿ, ರೈಲ್ವೆ ಅಡುಗೆಮನೆಯಿಂದ ಎಂದಿದ್ದಾರೆ.
ಇದನ್ನೂ ಓದಿ: 8 ಕೋಚ್ಗಳಿರುವ ವಂದೇ ಭಾರತ್ ರೈಲು ತಯಾರಿಸಲಿದೆ ಭಾರತೀಯ ರೈಲ್ವೇ
ಮತ್ತೊಬ್ಬ ಬಳಕೆದಾರರು ಇದು ಕೆಟ್ಟದು ಆದರೆ ಕಡಿಮೆ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಅವರು ಪ್ರಯಾಣಿಸುವ ಬೋಗಿಗಳನ್ನು ಎಷ್ಟು ಹೊಲಸು ಮಾಡುತ್ತಾರೆ!. 2 ಟಯರ್ ಎಸಿಯಲ್ಲಿನ ಶೌಚಾಲಯಗಳು ಸಹ ಕೆಟ್ಟದಾಗಿವೆ ಎಂದಿದೆ.
ವಿಡಿಯೊ ಗಮನ ಸೆಳೆದ ನಂತರ ರೈಲ್ವೆಯ ಮುಂಬೈ ವಿಭಾಗ ಕೂಡ ಈ ವಿಷಯವನ್ನು ಒಪ್ಪಿಕೊಂಡಿದ್ದು, ದಯವಿಟ್ಟು PNR ಮತ್ತು ರೈಲು ಸಂಖ್ಯೆಗಳನ್ನು ಹಂಚಿಕೊಳ್ಳಿ ಇದರಿಂದ ನಾವು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Tue, 2 January 24