AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತಿನಲ್ಲಿ ಪುರಾತನ ಕಟ್ಟಡ ಕೆಡವಿದಾಗ ಏನು ಸಿಕ್ಕಿತು ಗೊತ್ತಾ!?

ವಿವರಗಳಿಗೆ ಹೋಗುವುದಾದರೆ.. ಸುಮಾರು 199 ಪುರಾತನ ಚಿನ್ನದ ನಾಣ್ಯಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಗುಜರಾತ್ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ನವಸಾರಿ ಜಿಲ್ಲೆಯ ಬಿಲಿಮೋರಾದಲ್ಲಿ ಈ ಘಟನೆ ನಡೆದಿದೆ.

ಗುಜರಾತಿನಲ್ಲಿ ಪುರಾತನ ಕಟ್ಟಡ ಕೆಡವಿದಾಗ ಏನು ಸಿಕ್ಕಿತು ಗೊತ್ತಾ!?
ಗುಜರಾತಿನಲ್ಲಿ ಪುರಾತನ ಕಟ್ಟಡ ಕೆಡವಿದಾಗ ಏನು ಸಿಕ್ಕಿತು ಗೊತ್ತಾ!?
ಸಾಧು ಶ್ರೀನಾಥ್​
|

Updated on:Jan 02, 2024 | 2:57 PM

Share

ಅನಿವಾಸಿ ಭಾರತೀಯರೊಬ್ಬರು ತಮ್ಮ ಪುರಾತನ ಕಟ್ಟಡವನ್ನು ಕೆಡವಲು ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದರ ಭಾಗವಾಗಿ ಗುತ್ತಿಗೆದಾರರು ಕೆಲ ಕಾರ್ಮಿಕರನ್ನು ಕರೆದುಕೊಂಡು ಆ ಸ್ಥಳಕ್ಕೆ ತೆರಳಿ ಕಟ್ಟಡವನ್ನು ಕೆಡವ ಕಾರ್ಯಕ್ಕೆ ಚಾಲನೆ ನೀಡಿದರು. ಆ ಕೆಲಸಗಳು ನಡೆಯುತ್ತಿರುವಾಗ, ಅನಿರೀಕ್ಷಿತವಾಗಿ ಇದ್ದಕ್ಕಿದ್ದಂತೆ ಒಂದು ದೃಶ್ಯ ಕಾಣಿಸಿಕೊಂಡಿತು. ಕಾರ್ಮಿಕರು ತಮ್ಮ ಕಣ್ಣುಗಳನ್ನು ತಾವೇ ನಂಬದಾದರು. ಅಲ್ಲಿರುವುದೇನೆಂದು ನೋಡಲು ಸುತ್ತಲೂ ಮಣ್ಣು ಅಗೆದರು. ಆಗ ಸಿಕ್ಕಿತು ನೋಡಿ…

ವಿವರಗಳಿಗೆ ಹೋಗುವುದಾದರೆ.. ಸುಮಾರು 199 ಪುರಾತನ ಚಿನ್ನದ ನಾಣ್ಯಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಗುಜರಾತ್ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ನವಸಾರಿ ಜಿಲ್ಲೆಯ ಬಿಲಿಮೋರಾದಲ್ಲಿ ಈ ಘಟನೆ ನಡೆದಿದೆ. ಬ್ರಿಟನ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹವಾಬೀನ್ ಬಾಲಿಯಾ ಅವರು ಬಜಾರ್ ಸ್ಟ್ರೀಟ್‌ನಲ್ಲಿರುವ ತಮ್ಮ ಹಳೆಯ ಕಟ್ಟಡವನ್ನು ಕೆಡವಲು ಸರ್ಫ್ರಾಜ್ ಕರಾಡಿಯಾ ಎಂಬ ಗುತ್ತಿಗೆದಾರರಿಗೆ ವಹಿಸಿದ್ದರು. ಈ ಕಾರ್ಯಕ್ಕಾಗಿ ಅವರು ಮಧ್ಯಪ್ರದೇಶದ ನಾಲ್ವರು ಕಾರ್ಮಿಕರನ್ನು ನೇಮಿಸಿಕೊಂಡಿದ್ದರು. ಮನೆ ಕೆಡವುತ್ತಿರುವಾಗ ಆ ಕಾರ್ಮಿಕರಿಗೆಲ್ಲಾ 1922ರ ಬ್ರಿಟಿಷರ ಕಾಲದ ಚಿನ್ನದ ನಾಣ್ಯಗಳು ದೊರೆತಿವೆ.

Also Read:  ಮನೆ ಬುನಾದಿಯಲ್ಲಿ ಸಿಕ್ಕ ಚಿನ್ನ ಎಂದು ಉಡುಪಿ ಮೂಲಕದ ವ್ಯಕ್ತಿಗೆ 5 ಲಕ್ಷ ರೂ. ಪಂಗನಾಮ

ಸುಮಾರು 199 ಪುರಾತನ ಚಿನ್ನದ ನಾಣ್ಯಗಳು ಪತ್ತೆಯಾಗಿವೆ.. ಅವುಗಳ ಮೇಲೆ ಕಿಂಗ್ ಜಾರ್ಜ್-5 ಆಕೃತಿಯನ್ನು ಮುದ್ರಿಸಲಾಗಿತ್ತು. ಮಾಲೀಕರಿಗೆ ತಿಳಿಯದಂತೆ ಗುತ್ತಿಗೆದಾರ ಹಾಗೂ ನಾಲ್ವರು ಕಾರ್ಮಿಕರು ಈ ಚಿನ್ನದ ನಾಣ್ಯಗಳನ್ನು ಕದ್ದೊಯ್ದಿದ್ದಾರೆ. ಅವುಗಳ ಮೌಲ್ಯ ಸುಮಾರು 92 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್ 21 ರಂದು ಬಾಲಿಯಾ ಈ ವಿಷಯದ ಬಗ್ಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳನ್ನು ಇತ್ತೀಚೆಗೆ ಬಂಧಿಸಿದ್ದಾರೆ. ಅಲ್ಲದೆ, ತನಿಖೆಯ ವೇಳೆ ಮಧ್ಯಪ್ರದೇಶದ ನಾಲ್ವರು ಪೊಲೀಸರು ತಮ್ಮಿಂದ ಕೆಲವು ನಾಣ್ಯಗಳನ್ನು ತೆಗೆದುಕೊಂಡಿದ್ದಾರೆ ಎಂದೂ ಕಾರ್ಮಿಕರೊಬ್ಬರು ದೂರಿದಾಗ, ಅವರನ್ನೂ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Tue, 2 January 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ