ದೀಪಕ್ ಬಾಕ್ಸರ್
2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಕಂಚಿನ ಪದಕ ಗೆದ್ದಾಗ ಅವರ ಯಶಸ್ಸು ಭಾರತದ ಅನೇಕ ಯುವಕರನ್ನು ಬಾಕ್ಸರ್ ಆಗಲು ಪ್ರೇರೇಪಿಸಿತು. ಅದರಲ್ಲಿ ದೀಪಕ್ (Deepak) ಕೂಡ ಒಬ್ಬರು. ಆಗ ಅವರಿಗೆ 12 ವರ್ಷ ವಯಸ್ಸು. ಛಲದಿಂದ ಹಾಗೂ ಕಠಿಣ ಪರಿಶ್ರಮದಿಂದ 15ನೇ ವಯಸ್ಸಿನಲ್ಲಿ ಜ್ಯೂನಿಯರ್ ಮಟ್ಟದಲ್ಲಿ ಚಾಂಪಿಯನ್ಶಿಪ್ ಗೆದ್ದಿದ್ದ. ಆದರೆ ಬಾಕ್ಸಿಂಗ್(Boxing)ನಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ, ಅಪರಾಧ ಜಗತ್ತಿನಲ್ಲಿ ಕಾಲಿಟ್ಟು ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ಎಂಬ ಕುಖ್ಯಾತಿ ಪಡೆದಿದ್ದ. ಆದರೆ ಅವರನ್ನು ಈಗಲೂ ದೀಪಕ್ ಬಾಕ್ಸರ್ (Deepak Boxer) ಎಂದೇ ಕರೆಯಲಾಗುತ್ತದೆ.
- 2014-15ರಲ್ಲಿ ಮೋಹಿತ್ ಎಂಬ ವ್ಯಕ್ತಿಯನ್ನು ಭೇಟಿಯಾದಾಗ ದೀಪಕ್ ಜೀವನ ಸಂಪೂರ್ಣವಾಗಿ ಬದಲಾಯಿತು. ಬಳಿಕ ಅಪರಾಧ ಜಗತ್ತಿಗೆ ಕಾಲಿಟ್ಟಿ. ಮೋಹಿತ್, ಜಿತೇಂದ್ರ ಮಾನ್ ಅಲಿಯಾಸ್ ಗೋಗಿಯೊಂದಿಗೆ ಸೇರಿಕೊಂಡು ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ. ಗೋಗಿ ಆಗ ದೆಹಲಿಯ ಬಹುದೊಡ್ಡ ಕ್ರಿಮಿನಲ್ ಎಂದು ಕುಖ್ಯಾತರಾಗಿದ್ದರು. ಬಾಕ್ಸಿಂಗ್ನಿಂದ ಹೊರಬಂದಿದ್ದ ದೀಪಕ್ ಪಾತಕ ಲೋಕದಲ್ಲಿ ಬಾಕ್ಸರ್ ಎಂದೇ ಪ್ರಸಿದ್ಧಿಯಾದ. 2016ರಲ್ಲಿ ಮೋಹಿತ್ ಜತೆ ಸೇರಿ ಗೋಗಿಯನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ದೀಪಕ್ ಸಹಾಯ ಮಾಡಿದ್ದು ಪೊಲೀಸರ ಗಮನಕ್ಕೆ ಬಂದಿತ್ತು.
- ಅಂದು ಗೋಗಿಯನ್ನು ರೋಹಿಣಿ ಜೈಲಿನಿಂದ ಸೋನೆಪತ್ ಕೋರ್ಟ್ಗೆ ಬಸ್ನಲ್ಲಿ ಕರೆದೊಯ್ಯುತ್ತಿದ್ದರು. ಈ ಪ್ರಕರಣದಲ್ಲಿ ದೀಪಕ್ ಬಾಕ್ಸರ್ನನ್ನು ಮೊದಲ ಬಾರಿಗೆ ಬಂಧಿಸಲಾಗಿತ್ತು.
- ಒಂದು ವರ್ಷದ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ, ಮತ್ತೆ ಅಪರಾಧ ಜಗತ್ತಿನಲ್ಲಿ ಸಕ್ರಿಯನಾಗಿದ್ದ. 2018ರಲ್ಲಿ ಗೋಗಿ ಗ್ಯಾಂಗ್ನ ಪ್ರಮುಖ ಸದಸ್ಯನಾಗಿದ್ದ ದೀಪಕ್ ಮೇಲೆ ದೆಹಲಿ ಪೊಲೀಸರು MCOCA ಕಾಯ್ದೆಯನ್ನು ವಿಧಿಸಿದರು.
- ಗೋಗಿಯ ಬಂಧನದ ಬಳಿಕ ಅವರ ಅಕ್ರಮ ವ್ಯವಹಾರಗಳನ್ನು ದೀಪಕ್ ವಹಿಸಿಕೊಂಡ. 2021ರ ಸೆಪ್ಟೆಂಬರ್ 24 ರಂದು ರೋಹಿಣಿ ನ್ಯಾಯಾಲಯಕ್ಕೆ ಗೋಗಿಯನ್ನು ಕರೆತರುವ ಸಂದರ್ಭದಲ್ಲಿ ಇಬ್ಬರು ದುಷ್ಕರ್ಮಿಗಳು ಗೋಗಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.
- ದಾಳಿಕೋರರನ್ನು ಸುನಿಲ್ ಮಾನ್ ಅಲಿಯಾಸ್ ತಿಲ್ಲು ತಾಜ್ಪುರಿ ಗ್ಯಾಂಗ್ಗೆ ಸೇರಿದವರು ಎಂಬುದು ತಿಳಿದುಬಂದಿತ್ತು.
- ಗೋಗಿ ಹತ್ಯೆಯ ಬಳಿಕ ದೀಪಕ್ ಬಾಕ್ಸರ್ ಗ್ಯಾಂಗ್ನ ನಾಯಕ ಎಂದು ಕರೆಸಿಕೊಂಡ. ಲಾರೆನ್ಸ್, ವಿಷ್ಣೋಯ್, ಗೋಲ್ಡಿ, ಬ್ರಾರ್ ಮತ್ತು ಕಾಲಾ ಜಥೇರಿಯಂತಹ ಕ್ರಿಮಿನಲ್ಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದ. ಜನವರಿಯಲ್ಲಿ ಭಾರತದಿಂದ ಮೆಕ್ಸಿಕೋಗೆ ಬೇರೊಂದು ಹೆಸರಿನಲ್ಲಿ ಪಲಾಯನ ಮಾಡಿದ್ದರು.
- ದೀಪಕ್ ಬಾಕ್ಸರ್ ರವಿ ಆಂಟಿಲ್ ಹೆಸರಿನಲ್ಲಿ ಬರೇಲಿಯಿಂದ ನಕಲಿ ಪಾಸ್‌ಪೋರ್ಟ್ ತಯಾರಿಸಿ ಕೋಲ್ಕತ್ತಾದಿಂದ ದುಬೈಗೆ ಹೋಗಿದ್ದರು, ದುಬೈನಿಂದ ದೀಪಕ್ ಅಲ್ಮಾಟಿ, ಕಜಕಿಸ್ತಾನ್, ಟರ್ಕಿ ಮತ್ತು ಸ್ಪೇನ್ ಮೂಲಕ ಮೆಕ್ಸಿಕೋ ತಲುಪಿದ್ದರು. ಇದೀಗ ದೆಹಲಿ ಪೊಲೀಸರು ಮೆಕ್ಸಿಕೋಗೆ ತೆರಳಿ ದೀಪಕ್ ಬಾಕ್ಸರ್ನನ್ನು ಬಂಧಿಸಿ, ದೆಹಲಿಗೆ ಕರೆತಂದಿದ್ದಾರೆ.
- ದೀಪಕ್ ಅವರ ಕ್ಯಾಲಿಫೋರ್ನಿಯಾ ಮೂಲದ ಸೋದರಸಂಬಂಧಿ ಮೆಕ್ಸಿಕೋ ತಲುಪಲು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ