Deepak Boxer: ಮೋಸ್ಟ್​ ವಾಂಡೆಟ್ ಗ್ಯಾಂಗ್​ಸ್ಟರ್ ದೀಪಕ್​ ಬಾಕ್ಸರ್​ನನ್ನು ಮೆಕ್ಸಿಕೋದಲ್ಲಿ ಸೆರೆ ಹಿಡಿದ ದೆಹಲಿ ಪೊಲೀಸರು

ದೆಹಲಿಯ ಮೋಸ್ಟ್ ವಾಂಟೆಡ್ ಗ್ಯಾಂಗ್​ಸ್ಟರ್ ದೀಪಕ್ ಬಾಕ್ಸರ್​ನಲ್ಲಿ ದೆಹಲಿ ಪೊಲೀಸರು ಮೆಕ್ಸಿಕೋದಲ್ಲಿ ಬಂಧಿಸಿದ್ದಾರೆ. ಈ ವಾರದ ಕೊನೆಯಲ್ಲಿ ಭಾರತಕ್ಕೆ ಕರೆತರಲಾಗುವುದು

Deepak Boxer: ಮೋಸ್ಟ್​ ವಾಂಡೆಟ್ ಗ್ಯಾಂಗ್​ಸ್ಟರ್ ದೀಪಕ್​ ಬಾಕ್ಸರ್​ನನ್ನು ಮೆಕ್ಸಿಕೋದಲ್ಲಿ ಸೆರೆ ಹಿಡಿದ ದೆಹಲಿ ಪೊಲೀಸರು
ದೀಪಕ್ ಬಾಕ್ಸರ್
Follow us
ನಯನಾ ರಾಜೀವ್
|

Updated on: Apr 04, 2023 | 8:27 AM

ದೆಹಲಿಯ ಮೋಸ್ಟ್ ವಾಂಟೆಡ್ ಗ್ಯಾಂಗ್​ಸ್ಟರ್ ದೀಪಕ್ ಬಾಕ್ಸರ್​ನಲ್ಲಿ ದೆಹಲಿ ಪೊಲೀಸರು ಮೆಕ್ಸಿಕೋದಲ್ಲಿ ಬಂಧಿಸಿದ್ದಾರೆ. ಈ ವಾರದ ಕೊನೆಯಲ್ಲಿ ಭಾರತಕ್ಕೆ ಕರೆತರಲಾಗುವುದು, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಸಹಾಯದಿಂದ ದೆಹಲಿಯ ವಿಶೇಷ ತಂಡವು ಬಾಕ್ಸರ್ ಅನ್ನು ಮೆಕ್ಸಿಕೊದಲ್ಲಿ ಹಿಡಿದಿದೆ. 2022ರಲ್ಲಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಹಾಗೆಯೇ ಬಿಲ್ಡರ್ ಅಮಿತ್ ಗುಪ್ತಾ  ಅವರ ಮೇಲೆ ನಡುರಸ್ತೆಯಲ್ಲಿ ಹಲವು ಬಾರಿ ಗುಂಡು ಹಾರಿಸಿದ್ದ.

ದೆಹಲಿ ಪೊಲೀಸರು ಭಾರತದ ಹೊರಗೆ ಗ್ಯಾಂಗ್​ಸ್ಟರ್​ನನ್ನು ಬಂಧಿಸಿರುವುದು ಇದೇ ಮೊದಲು. ದೀಪಕ್ ಬಾಕ್ಸರ್, ಲೋರೇಶ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‌ನ ಕುಖ್ಯಾತ ಗ್ಯಾಂಗ್​ಸ್ಟರ್, ದೀಪಕ್​ನನ್ನು ಹುಡುಕಿಕೊಟ್ಟವರಿಗೆ ಪೊಲೀಸರು 3 ಲಕ್ಷ ರೂ, ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ಮತ್ತಷ್ಟು ಓದಿ: ಗ್ಯಾಂಗ್​ ಸ್ಟಾರ್ ಆಗಬೇಕು ಅಂದುಕೊಂಡವನ ಇಂಟರೆಸ್ಟಿಂಗ್ ಸ್ಟೋರಿ: ಮೊದಲ ಪ್ರಯತ್ನದಲ್ಲೇ ಕೊಲೆ ಕೇಸ್​ನಲ್ಲಿ ಅಂದರ್

ದೀಪಕ್ ಬಾಕ್ಸರ್ ವಿದೇಶಕ್ಕೆ ಪರಾರಿಯಾಗಲು ಲೋರೇಶ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಸಹಾಯ ಮಾಡಿದ್ದರು ಎನ್ನಲಾಗಿದೆ. ದೀಪಕ್ ಬಾಕ್ಸರ್ ನಕಲಿ ಪಾಸ್‌ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ದೆಹಲಿ ಪೊಲೀಸರು ಕೆಲವು ದಿನಗಳ ಹಿಂದೆ ತಿಳಿಸಿದ್ದರು. ದೀಪಕ್ ಬಾಕ್ಸರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.

2021 ರಲ್ಲಿ, ಜಿತೇಂದ್ರ ಗೋಗಿ ಹತ್ಯೆಯ ನಂತರ, ದೀಪಕ್ ಗೋಗಿ ಗ್ಯಾಂಗ್ ಅನ್ನು ಮುನ್ನಡೆಸಲು ಪ್ರಾರಂಭಿಸಿದ್ದ. ರೋಹಿಣಿ ನ್ಯಾಯಾಲಯದ ಆವರಣದಲ್ಲಿ ಜಿತೇಂದ್ರ ಗೋಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಗ್ಯಾಂಗ್ ಸದಸ್ಯರು ಕೊಲೆ, ಸುಲಿಗೆಯನ್ನು ನಡೆಸುತ್ತಾರೆ. ಗೋಗಿ ಗ್ಯಾಂಗ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ ಎನ್ನಲಾಗಿದೆ.

ದೀಪಕ್ ಬಾಕ್ಸರ್‌ನ ನಿಜವಾದ ಹೆಸರು ದೀಪಕ್ ಪಹಲ್, 15ನೇ ವಯಸ್ಸಿನಲ್ಲಿ ಬಾಕ್ಸಿಂಗ್ ಆರಂಭಿಸಿದ ದೀಪಕ್ ಒಂದು ವರ್ಷದೊಳಗೆ 57 ಕೆಜಿ ವಿಭಾಗದಲ್ಲಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದರು. ಜನವರಿ 29 ರಂದು ಕೋಲ್ಕತ್ತಾದಿಂದ ರವಿ ಆಂಟಿಲ್ ಎಂಬ ಹೆಸರಿನಲ್ಲಿ ಮೆಕ್ಸಿಕೋಗೆ ತೆರಳಿದ್ದ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ