ನಾನು ಕೊಲೆಯಾಗುವುದು ಗ್ಯಾರಂಟಿ, ಜೈಲಿನಿಂದ ಹೊರಬರಲಾರೆ: ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್
ಪೊಲೀಸರು ನನ್ನನ್ನು ಕೊಲ್ಲಲು ಸಿದ್ಧತೆ ಮಾಡಿಕೊಂಡಿದ್ದಾರೆ ನಾನು ಜೈಲಿನಿಂದ ಹೊರಬರಲಾರೆ ಎಂದು ಗ್ಯಾಂಗ್ಸ್ಟರ್ ಆತೀಕ್ ಅಹ್ಮದ್ ಹೇಳಿದ್ದಾರೆ.

ಪೊಲೀಸರು ನನ್ನನ್ನು ಕೊಲ್ಲಲು ಸಿದ್ಧತೆ ಮಾಡಿಕೊಂಡಿದ್ದಾರೆ ನಾನು ಜೈಲಿನಿಂದ ಹೊರಬರಲಾರೆ ಎಂದು ಗ್ಯಾಂಗ್ಸ್ಟರ್ ಆತೀಕ್ ಅಹ್ಮದ್ ಹೇಳಿದ್ದಾರೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಸಬರಮತಿ ಜೈಲಿನಲ್ಲಿದ್ದಾರೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷೆ ಪ್ರಕಟಿಸುವಂತೆ ಕೋರಿದ್ದಾರೆ. ಒಂದೊಮ್ಮೆ ಉತ್ತರ ಪ್ರದೇಶದ ಕೋರ್ಟ್ಗೆ ಕರೆದೊಯ್ಯುವಾಗ ಅಪಘಾತ ಇಲ್ಲವೇ ಎನ್ಕೌಂಟರ್ನಲ್ಲಿ ನನ್ನ ಹತ್ಯೆ ಮಾಡುವ ಸಾಧ್ಯತೆ ಇದೆ ಹೀಗಾಗಿ ಜೈಲಿನಲ್ಲಿಯೇ ಇರುತ್ತೇನೆ ಎಂದಿದ್ದಾರೆ.
ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಅತೀಕ್ ಅಹ್ಮದ್ಗೆ ಮಾರ್ಚ್ 28 ರಂದು ಶಿಕ್ಷೆ ಪ್ರಕಟವಾಗಲಿದೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ವ್ಯಕ್ತಿ ಈ ತಿಂಗಳ ಆರಂಭದಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದಾರೆ.
ಮತ್ತಷ್ಟು ಓದಿ: Umesh Pal Murder Case: ಉಮೇಶ್ ಪಾಲ್ ಹತ್ಯೆಯಲ್ಲಿ ಭಾಗಿಯಾಗಿದ್ದ ಶೂಟರ್ ಮೊಹಮ್ಮದ್ ಗುಲಾಮ್ ಪತ್ತೆ, ಪಾಕಿಸ್ತಾನದೊಂದಿಗೆ ನಂಟಿನ ಶಂಕೆ
ಅತೀಕ್ ಅಹ್ಮದ್ 2005ರಲ್ಲಿ ನಡೆದ ಬಿಎಸ್ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದ ಪ್ರಮುಖ ಅರೋಪಿಯೂ ಆಗಿದ್ದಾರೆ, ಹಾಗೆಯೇ ಇದೇ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಕೊಲೆಯ ಆರೋಪಿಯೂ ಕೂಡ ಹೌದು. ಅತೀಕ್ ಪತ್ನಿ ಶಾಹಿಸ್ತಾ ಹಾಗೂ ಪುತ್ರ ಅಸದ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು.
ಉತ್ತರ ಪ್ರದೇಶ ಪೊಲೀಸ್ ತಂಡವು ಅತೀಕ್ ಅಹ್ಮದ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಬಂದಾಗ, ಅವರು ಸಬರಮತಿ ಜೈಲಿನಿಂದ ಹೊರಬರಲು ನಿರಾಕರಿಸಿದರು. ಜೈಲು ಅಧಿಕಾರಿಗಳೊಂದಿಗೆ ತಂಡ ಸುದೀರ್ಘ ಚರ್ಚೆ ನಡೆಸಿದ್ದು, ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್‌ನ ಅನುಮತಿ ಅಗತ್ಯವಿದೆ ಎಂದು ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




