ಇತ್ತೀಚೆಗಂತೂ ರೆಮ್ಡಿಸಿವರ್ ಇಂಜೆಕ್ಷನ್ ಹೆಸರನ್ನು ಪ್ರತಿಯೊಬ್ಬರೂ ಕೇಳಿಯೇ ಇರುತ್ತಾರೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರಮುಖ ಔಷಧ ಎಂದೇ ಬಿಂಬಿತವಾಗಿತ್ತು. ಮನೆಯಲ್ಲೇ ಐಸೋಲೇಟ್ ಆಗಿ ಕೊರೊನಾಕ್ಕೆ ಚಿಕಿತ್ಸೆ ಪಡೆಯುವವರೂ ಸಹ ಇದನ್ನು ಖರೀದಿಸಲು ಪ್ರಾರಂಭಿಸಿದ್ದರು. ಕೊರೊನಾ ಉಲ್ಬಣದ ಬೆನ್ನಲ್ಲೇ ರೆಮ್ಡಿಸಿವಿರ್ ಅಭಾವವೂ ಕಂಡುಬಂದಿತ್ತು. ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ (WHO) ಕೊವಿಡ್ 19 ಚಿಕಿತ್ಸೆ ಔಷಧ ಪಟ್ಟಿಯಿಂದ ಈ ರೆಮ್ಡಿಸಿವಿರ್ ಇಂಜೆಕ್ಷನ್ನ್ನು ತೆಗೆದುಹಾಕಿದೆ.
ಒಂದು ಕಾಲದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಜೀವರಕ್ಷಕದಂತೆ ಬಿಂಬಿತವಾಗಿದ್ದ ರೆಮ್ಡಿಸಿವಿರ್ನ್ನು ಇದೀಗ ಕೊವಿಡ್ 19 ಚಿಕಿತ್ಸಾ ಪಟ್ಟಿಯಿಂದ ತೆಗೆದಿರುವ ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ಚಿಕಿತ್ಸೆಗೆ ರೆಮ್ಡಿಸಿವಿರ್ ಪರಿಣಾಮಕಾರಿಯಲ್ಲ ಎಂದೂ ಹೇಳಿದೆ. ನಿನ್ನೆ ಅಂದರೆ ಮಂಗಳವಾರ ದೆಹಲಿಯ ಗಂಗಾರಾಮ್ ಆಸ್ಪತ್ರೆಯ ಮುಖ್ಯಸ್ಥ ಡಾ. ಡಿಎಸ್ ರಾಣಾ ಈ ಬಗ್ಗೆ ಸುಳಿವು ನೀಡಿದ್ದರು. ಶೀಘ್ರದಲ್ಲೇ ರೆಮ್ಡಿಸಿವಿರ್ನ್ನು ಕೊವಿಡ್ 19 ಚಿಕಿತ್ಸೆ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಕೊವಿಡ್ ಸೋಂಕಿತರಿಗೆ ಇದು ಪರಿಣಾಮಕಾರಿ ಎಂಬುದಕ್ಕೆ ಇನ್ನೂ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಹೇಳಿದ್ದರು.
ಕೊರೊನಾ ವಿರುದ್ಧ ಪ್ರಾಯೋಗಿಕವಾಗಿ ಬಳಸಲಾಗಿದ್ದ ಎಲ್ಲ ಔಷಧಿಗಳನ್ನೂ..ಪ್ಲಾಸ್ಮಾ ಥೆರಪಿಯನ್ನೂ ಸೇರಿ ಎಲ್ಲವನ್ನೂ ಚಿಕಿತ್ಸೆಯಿಂದ ಕೈಬಿಡಲಾಗಿದೆ. ಹಾಗೇ ಈ ರೆಮ್ಡಿಸಿವಿರ್ನ್ನು ಕೂಡ ಶೀಘ್ರದಲ್ಲೇ ಚಿಕಿತ್ಸಾ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಸದ್ಯದ ಮಟ್ಟಿಗೆ ಕೇವಲ ಮೂರು ರೀತಿಯ ಔಷಧಿಗಳು ಮಾತ್ರ ಕೊವಿಡ್ 19 ಚಿಕಿತ್ಸೆಗಾಗಿ ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ನಾವು ಇನ್ನೂ ಗಮನಿಸುತ್ತಿದ್ದೇವೆ..ಅಧ್ಯಯನ ನಡೆಯುತ್ತಿದೆ ಎಂದೂ ಡಾ. ಡಿ.ಎಸ್.ರಾಣಾ ಹೇಳಿದ್ದರು.
ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಅನುಷ್ಕಾ ಶರ್ಮಾ ನಟಿಸಿರುವ ಯಾವ ಸಿನಿಮಾ ಫೆವರೆಟ್ ಗೊತ್ತಾ?
ನಾಲ್ಕು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಆಕ್ಸಿಜನ್ ಘಟಕವನ್ನು ನಾಲ್ಕೇ ದಿನಗಳಲ್ಲಿ ದುರಸ್ತಿ ಮಾಡಿದ ಇಂಡಿಯನ್ ಆರ್ಮಿ..