ನಾಲ್ಕು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಆಕ್ಸಿಜನ್​ ಘಟಕವನ್ನು ನಾಲ್ಕೇ ದಿನಗಳಲ್ಲಿ ದುರಸ್ತಿ ಮಾಡಿದ ಇಂಡಿಯನ್ ಆರ್ಮಿ..

ಆಕ್ಸಿಜನ್​ ಘಟಕ ಕಳೆದ ನಾಲ್ಕು ವರ್ಷಗಳಿಂದಲೂ ನಿಷ್ಕ್ರಿಯಗೊಂಡಿತ್ತು. ಅದನ್ನೀಗ ಪ್ರತಿದಿನಕ್ಕೆ 700 ಸಿಲಿಂಡರ್​​ಗಳನ್ನು ಮರುಪೂರಣ ಮಾಡುವಷ್ಟು ಸರಿಪಡಿಸಲಾಗಿದೆ. ಕೊವಿಡ್​ 19 ಉಲ್ಬಣಗೊಂಡಿದ್ದರಿಂದ ಆಕ್ಸಿಜನ್​ ಬೇಡಿಕೆ ಹೆಚ್ಚಾಯಿತು. ಹೀಗಾಗಿ ಈ ಆಕ್ಸಿಜನ್ ಘಟಕ ಮರುಪ್ರಾರಂಭ ಮಾಡುವ ಅಗತ್ಯತೆಯೂ ಇತ್ತು.

ನಾಲ್ಕು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಆಕ್ಸಿಜನ್​ ಘಟಕವನ್ನು ನಾಲ್ಕೇ ದಿನಗಳಲ್ಲಿ ದುರಸ್ತಿ ಮಾಡಿದ ಇಂಡಿಯನ್ ಆರ್ಮಿ..
ಆಕ್ಸಿಜನ್​ ಘಟಕ
Follow us
Lakshmi Hegde
|

Updated on: May 20, 2021 | 6:00 PM

ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಸಿಕ್ಕಾಪಟೆ ಹೆಚ್ಚಾಗುತ್ತಿವೆ. ಇದರ ಬೆನ್ನಲ್ಲೇ ಕಾಶ್ಮೀರದ ಆಸ್ಪತ್ರೆಗಳಲ್ಲಿ ಆಕ್ಸಿಜನ್​ಗೆ ಬೇಡಿಕೆ ಹೆಚ್ಚಾಗಿದೆ. ಹೀಗೆ ಆಮ್ಲಜನಕ ಕೊರತೆ ಉಂಟಾದ ಆಸ್ಪತ್ರೆಗಳ ಸಹಾಯಕ್ಕೆ ಭಾರತೀಯ ಸೇನೆ ನಿಂತಿದೆ. ಅಗತ್ಯ ಇರುವ ಆಕ್ಸಿಜನ್​ನ್ನು ಪೂರೈಸುವ ಮೂಲಕ ಸ್ಥಳೀಯ ಆಡಳಿತದ ನೆರವಿಗೆ ನಿಂತಿದೆ.

ಶ್ರೀನಗರದ ರಂಗ್ರೆತ್​ ಪ್ರದೇಶದಲ್ಲಿರುವ ಆಮ್ಲಜನಕದ ಘಟಕ ನಿಷ್ಕ್ರಿಯಗೊಂಡಿತ್ತು. ಅದನ್ನೀಗ ಭಾರತೀಯ ಸೇನೆಯ ಸಹಾಯದಿಂದ ಮರು ಆರಂಭಿಸಲಾಗಿದೆ. ಪ್ರತಿದಿನವೂ ಸುಮಾರು 700 ಸಿಲಿಂಡರ್​​ಗಳನ್ನು ತುಂಬುವಷ್ಟು ಸಾಮರ್ಥ್ಯವನ್ನು ಈ ಆಕ್ಸಿಜನ್​ ಘಟಕ ಹೊಂದಿದೆ.

ಆಕ್ಸಿಜನ್​ ಘಟಕ ಕಳೆದ ನಾಲ್ಕು ವರ್ಷಗಳಿಂದಲೂ ನಿಷ್ಕ್ರಿಯಗೊಂಡಿತ್ತು. ಅದನ್ನೀಗ ಪ್ರತಿದಿನಕ್ಕೆ 700 ಸಿಲಿಂಡರ್​​ಗಳನ್ನು ಮರುಪೂರಣ ಮಾಡುವಷ್ಟು ಸರಿಪಡಿಸಲಾಗಿದೆ. ಕೊವಿಡ್​ 19 ಉಲ್ಬಣಗೊಂಡಿದ್ದರಿಂದ ಆಕ್ಸಿಜನ್​ ಬೇಡಿಕೆ ಹೆಚ್ಚಾಯಿತು. ಹೀಗಾಗಿ ಈ ಆಕ್ಸಿಜನ್ ಘಟಕ ಮರುಪ್ರಾರಂಭ ಮಾಡುವ ಅಗತ್ಯತೆಯೂ ಇತ್ತು. ಹೀಗಾಗಿ ಸ್ಥಳೀಯ ಆಡಳಿತದಿಂದ ಭಾರತೀಯ ಸೇನೆಯ ಚಿನಾರ್​ ಕಾರ್ಪ್​​​ನ್ನು ಸಂಪರ್ಕಿಸಿ ಈ ಬಗ್ಗೆ ಚರ್ಚಿಸಲಾಯಿತು. ಆಮ್ಲಜನಕ ಘಟಕ ದುರಸ್ತಿಯಾಗಬೇಕಾದರೆ ಅಗತ್ಯವಾಗಿ ಬೇಕಾದ ಅದರ ಬಿಡಿಭಾಗಗಳನ್ನೆಲ್ಲ ಮುಂಬೈನಿಂದ ತರಲಾಗಿದ್ದು, ಇದಕ್ಕಾಗಿ ಭಾರತೀಯ ವಾಯುಸೇನೆಯ ಸಹಾಯ ಪಡೆಯಲಾಗಿದೆ. ನಂತರ ಎಂಜಿನಿಯರ್​ಗಳ ಸಹಾಯದಿಂದ ಕೇವಲ ನಾಲ್ಕೇ ದಿನಗಳಲ್ಲಿ ದುರಸ್ತಿಗೊಳಿಸಲಾಯಿತು ಎಂದು ಇಂಡಿಯನ್ ಆರ್ಮಿ ಲೆಫ್ಟಿನೆಂಟ್ ಕರ್ನಲ್​ ನೀಲದಿರಿ ರಾಯ್​ ತಿಳಿಸಿದ್ದಾರೆ.

ಆಮ್ಲಜನಕ ಘಟಕ ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ. ಅದರಲ್ಲಿ ಅನೇಕ ಸಮಸ್ಯೆಗಳು ಇದ್ದವು. ಆದರೆ ಭಾರತೀಯ ಸೇನೆಯ ಎಂಜಿನಿಯರ್​​ಗಳು ಹಗಲು-ರಾತ್ರಿ ಕೆಲಸ ಮಾಡಿ ಕೇವಲ ನಾಲ್ಕೇ ದಿನಗಳಲ್ಲಿ ಇದನ್ನು ಸರಿಪಡಿಸಿದ್ದಾರೆ. ಇತ್ತೀಚೆಗಷ್ಟೇ ಶ್ರೀನಗರದ ರಂಗ್ರೀತ್​ ಪ್ರದೇಶದಲ್ಲಿ 200 ಬೆಡ್​ಗಳಿರುವ ಕೊವಿಡ್ ಆಸ್ಪತ್ರೆಯನ್ನು ಭಾರತೀಯ ಸೇನೆ ಸಿದ್ಧಪಡಿಸಿತ್ತು. ಹಾಗೇ ಗಡಿ ನಿಯಂತ್ರಣ ರೇಖೆ ಬಳಿ ಉರಿ ವಲಯದಲ್ಲೂ ಒಂದು ಕೊವಿಡ್​ 19 ಆಸ್ಪತ್ರೆಯನ್ನು ಸೇನೆ ಸಿದ್ಧಗೊಳಿಸಿದೆ.

ಇದನ್ನೂ ಓದಿ: ದೇಶದಲ್ಲಿ ಈಗಲೂ ಶೇ.50ರಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ, ಜೂನ್ ಅಂತ್ಯದೊಳಗೆ ಪ್ರತಿದಿನ 45 ಲಕ್ಷ ಕೊವಿಡ್ ಟೆಸ್ಟ್

ನಾರದ ಲಂಚ ಪ್ರಕರಣ: ‘ಅನಿವಾರ್ಯ ಕಾರಣ’ ಹಿನ್ನೆಲೆಯಲ್ಲಿ ಬಂಧಿತ ಟಿಎಮ್​ಸಿ ನಾಯಕರ ಜಾಮೀನು ಅರ್ಜಿ ವಿಚಾರಣೆ ಮುಂದೂಡಲ್ಪಟ್ಟಿತು!

Indian army restored a defunct oxygen plant in Shrinagar to fight agains oxygen shortage

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ