ನಾರದ ಲಂಚ ಪ್ರಕರಣ: ‘ಅನಿವಾರ್ಯ ಕಾರಣ’ ಹಿನ್ನೆಲೆಯಲ್ಲಿ ಬಂಧಿತ ಟಿಎಮ್​ಸಿ ನಾಯಕರ ಜಾಮೀನು ಅರ್ಜಿ ವಿಚಾರಣೆ ಮುಂದೂಡಲ್ಪಟ್ಟಿತು!

ಕೊಲ್ಕತ್ತಾ: ಕಲ್ಕತ್ತಾ ಹೈಕೋರ್ಟ್​ನಲ್ಲಿ ನಾರದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಿಗದಿಗೊಂಡಿದ್ದ ಬಂಧನಕ್ಕೊಳಗಾಗಿ ನ್ಯಾಯಾಂಗ ಕಸ್ಟಡಿಯಲ್ಲಿರುವ ನಾಲ್ವರು ತೃಣಮೂಲ ಪಕ್ಷದ ಧುರೀಣರ ಜಾಮೀನು ಅರ್ಜಿಯ ವಿಚಾರಣೆಯು ವಿಭಾಗೀಯ ಪೀಠವು ಕೂಡಿಬರದ ‘ಅನಿವಾರ್ಯ ಪರಿಸ್ಥಿತಿಯ’ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತು. ಹಂಗಾಮಿ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರನ್ನೊಳಗೊಂಡ ವಿಭಾಗೀಯ ಪೀಠವೊಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಪ್ರಕರಣದ ವಿಚಾರಣೆ ಮುಂದುವರಿಸುವುದು ನಿಗದಿಯಾಗಿತ್ತು. ಆದರೆ, ಕಲ್ಕತ್ತಾ ಹೈಕೋರ್ಟಿನ ಅಧಿಕೃತ ವೆಬ್​ಸೈಟ್​ನಲ್ಲಿ ಬೆಳಗ್ಗೆ 11.30ಕ್ಕೆ ಅಪಲೋಡ್​ […]

ನಾರದ ಲಂಚ ಪ್ರಕರಣ: ‘ಅನಿವಾರ್ಯ ಕಾರಣ’ ಹಿನ್ನೆಲೆಯಲ್ಲಿ ಬಂಧಿತ ಟಿಎಮ್​ಸಿ ನಾಯಕರ ಜಾಮೀನು ಅರ್ಜಿ ವಿಚಾರಣೆ ಮುಂದೂಡಲ್ಪಟ್ಟಿತು!
ಕಲ್ಕತ್ತಾ ಹೈಕೋರ್ಟ್
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ರಾಜೇಶ್ ದುಗ್ಗುಮನೆ

Updated on: May 20, 2021 | 5:35 PM

ಕೊಲ್ಕತ್ತಾ: ಕಲ್ಕತ್ತಾ ಹೈಕೋರ್ಟ್​ನಲ್ಲಿ ನಾರದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಿಗದಿಗೊಂಡಿದ್ದ ಬಂಧನಕ್ಕೊಳಗಾಗಿ ನ್ಯಾಯಾಂಗ ಕಸ್ಟಡಿಯಲ್ಲಿರುವ ನಾಲ್ವರು ತೃಣಮೂಲ ಪಕ್ಷದ ಧುರೀಣರ ಜಾಮೀನು ಅರ್ಜಿಯ ವಿಚಾರಣೆಯು ವಿಭಾಗೀಯ ಪೀಠವು ಕೂಡಿಬರದ ‘ಅನಿವಾರ್ಯ ಪರಿಸ್ಥಿತಿಯ’ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತು. ಹಂಗಾಮಿ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರನ್ನೊಳಗೊಂಡ ವಿಭಾಗೀಯ ಪೀಠವೊಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಪ್ರಕರಣದ ವಿಚಾರಣೆ ಮುಂದುವರಿಸುವುದು ನಿಗದಿಯಾಗಿತ್ತು.

ಆದರೆ, ಕಲ್ಕತ್ತಾ ಹೈಕೋರ್ಟಿನ ಅಧಿಕೃತ ವೆಬ್​ಸೈಟ್​ನಲ್ಲಿ ಬೆಳಗ್ಗೆ 11.30ಕ್ಕೆ ಅಪಲೋಡ್​ ಆಗಿರುವ ನೋಟೀಸಿನಲ್ಲಿ ‘ಅನಿವಾರ್ಯ ಕಾರಣಗಳಿಂದಾಗಿ, ಮೊದಲ ವಿಭಾಗೀಯ ಪೀಠವು ಇಂದು ಘಟಿತವಾಗಲಿಲ್ಲ,’ ಎಂದು ಹೇಳಲಾಗಿದೆ.

ವಿಚಾರಣೆ ಮುಂದೂಡಿಕೆಗೆ ನೋಟೀಸಿನಲ್ಲಿ ನಿರ್ದಿಷ್ಟವಾದ ಕಾರಣವನ್ನು ಉಲ್ಲೇಖಿಸಲಾಗಿಲ್ಲ. ವಿಚಾರಣೆ ಕೈಗೆತ್ತಿಕೊಳ್ಳುವ ಮುಂದಿನ ದಿನಾಂಕದ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ.

ಕೊಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯವು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಫಿರ್ಹಾದ್ ಹಕೀಮ್, ಮದನ್ ಮಿತ್ರಾ, ಸುಬ್ರತಾ ಮುಖರ್ಜಿ ಮತ್ತು ಸೋವನ್ ಚಟರ್ಜಿ ಅವರಿಗೆ ಮಂಜೂರು ಮಾಡಿದ್ದ ಜಾಮೀನನ್ನು ಮೇ 17ರಂದು ಉಚ್ಛ ನ್ಯಾಯಾಲಯದ ಪೀಠವು ತಡೆಹಿಡಿದಿತ್ತು. ನಾಲ್ವರು ನಾಯಕರನ್ನು ಅದೇ ದಿನದಂದು ನಾಟಕೀಯ ಸನ್ನಿವೇಶವೊಂದರಲ್ಲಿ ಬಂಧಿಸಲಾಗಿತ್ತು.

ಪೀಠ ಸಹ ಮಧ್ಯರಾತ್ರಿ ನಡೆದ ನಾಟಕೀಯ ವಿಚಾರಣೆಯ ನಂತರ ಜಾಮೀನು ತಡೆಹಿಡಿಯುವ ಆದೇಶವನ್ನು ಜಾರಿ ಮಾಡಿತ್ತು. ಅದಕ್ಕೆ ಮೊದಲು ಟಿಎಮ್​ಸಿ ನಾಯಕರನ್ನು ನಾರದ ಲಂಚ ಪ್ರಕರಣದಲ್ಲಿ ಬಂಧಿಸಿರುವ ಕೇಂದ್ರೀಯ ತನಿಖಾ ದಳವು (ಸಿಬಿಐ) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅವರ ಸಂಪುಟದ ಇತರ ಸಚಿವರು ಮತ್ತು ಪಕ್ಷದ ಕಾರ್ಯಕರ್ತರು ಸಾಮೂಹಿಕ ಮುಷ್ಕರ ನಡೆಸಿ ಕೆಳಹಂತದ ಕೋರ್ಟಿನ ಮೇಲೆ ಅಭೂತಪೂರ್ವ ಒತ್ತಡ ಹೇರುತ್ತಿರುವರೆಂದು ಹೇಳಿ ಸದರಿ ಪ್ರಕರಣವನ್ನು ಹೈಕೋರ್ಟ್​ಗೆ ವರ್ಗಾಯಿಸಬೇಕೆಂದು ಮನವಿ ಮಾಡಿತ್ತು.

ಮರುದಿನ ಟಿಎಮ್​ಸಿ ನಾಯಕರು, ಹೈಕೋರ್ಟ್ ತಮಗೆ ನೋಟಿಸ್ ನೀಡದೆ ಆದೇಶವನ್ನು ಜಾರಿ ಮಾಡಿರುವುದರಿಂದ ಅದನ್ನು ಹಿಂಪಡೆಯಬೇಕೆಂದು ಮನವಿಗಳನ್ನು ಸಲ್ಲಿಸಿದರು. ಬುಧವಾರದಂದಯ ಸಿಬಿಐ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಬಂಧಿತ ಟಿಎಮ್​ಸಿ ನಾಯಕರ ಪರವಾಗಿ ಹಿರಿಯ ವಕೀಲರಾಗಿರರುವ ಡಾ ಅಭಿಷೇಕ್ ಮನು ಸಿಂಘ್ವಿ ಹಾಗೂ ಸಿದ್ದಾರ್ಥ ಲುತ್ರಾ ವಾದ ಮಾಡಿದ್ದನ್ನು ಕೋರ್ಟ್ ಆಲಿಸಿತು.

ಸಿಂಘ್ವಿ ಮತ್ತು ಲುತ್ರಾ ಅವರು ಬಂಧಿತ ನಾಯಕರಿಗೆ ವಯಸ್ಸಾಗಿದೆ ಮತ್ತು ಅವರು ಕಾಯಿಲೆಗಳಿಂದ ಬಳಲುತ್ತಿರುವುದರಿಂದ ತಾತ್ಕಾಲಿಕ ಜಾಮೀನು ನೀಡಿ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು. ಬಂಧಿತ ನಾಲ್ವರಲ್ಲಿ ಮೂವರನ್ನು ಈಗಾಗಾಲೇ ಅಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಕೇವಲ ಸೊವನ್ ಚಟರ್ಜಿ ಮಾತ್ರ ಜೈಲಿನಲ್ಲಿರುವರೆಂದು ಪೀಠದ ಗಮನಕ್ಕೆ ತರಲಾಗಿತ್ತು.

ಇದನ್ನೂ ಓದಿ: Narada Bribery Case ಸುವೇಂದು ಅಧಿಕಾರಿ ವಿರುದ್ಧ ತನಿಖೆ ನಡೆಸಲು ಲೋಕಸಭಾ ಸ್ಪೀಕರ್ ಅನುಮತಿಗಾಗಿ ಕಾಯುತ್ತಿದ್ದೇವೆ: ಸಿಬಿಐ